ಲೋಕದರ್ಶನವರದಿ
ಹರಪನಹಳ್ಳಿ30: ರಾಜ್ಯ ಬಿಜೆಪಿ ಸಕರ್ಾರವು ರಾಜ್ಯದ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಒಂದು ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗೆ ಒಂದು ಲಕ್ಷ ರೂಪಾಯಿ ಅನುದಾನವು ಸಹ ನೀಡಿಲ್ಲ ಎಂದು ಹಡಗಲಿ ಕ್ಷೇತ್ರದ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ಆರೋಪ ಮಾಡಿದರು ಮಾಡಿದರು
ಪಟ್ಟಣದ ಆಚಾರ್ಯ ಲೇಔಟ್ ಪಿಟಿ ಪರಮೇಶ್ವರ ನಾಯ್ಕ್ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷರು ಪ್ರತಿಜ್ಞಾ ದಿನದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು ಕೆಪಿಸಿಸಿ ನೂತನ ಸಾರಥಿಯಾಗಿ ನೇಮಕಗೊಂಡ ಕೆ ಶಿವಕುಮಾರ್ ಮತ್ತು ಕೆಪಿಸಿಸಿ ಮೂರು ಜನ ಕಾಯರ್ಾಧ್ಯಕ್ಷರಾಗಿ ನೇಮಕವಾದ ಜುಲೈ 2ರಂದು ಪ್ರತಿಜ್ಞಾ ದಿನ ಕಾರ್ಯಕರ್ತರು ಕರೋನವೈರಸ್ ಹಿನ್ನಲೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸಕರ್ಾರದ ನಿಯಮಗಳನ್ನು ಪಾಲಿಸಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು
ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಆಡಳಿತ ಇರುವಾಗ ಎಲ್ಲಾ ಜಾತಿಯ ಬಡವರಿಗೆ ರೈತರಿಗೆ ಕಾಮರ್ಿಕರಿಗೆ ದೇವದಾಸಿಯರಿಗೆ ಬುಡಕಟ್ಟು ಜನಾಂಗದವರಿಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಯುಪಿಎ ಸಕರ್ಾರವು 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ ಸಿದ್ದರಾಮಯ್ಯನವರ ಸಕರ್ಾರ 50 ಸಾವಿರ ರೂಪಾಯಿಗಳ ರೈತರ ಸಾಲ ಮನ್ನಾ ಮಾಡಿದೆ ಈಗಿರುವ ಬಿಜೆಪಿಯ ನರೇಂದ್ರ ಮೋದಿಯವರ ನೇತೃತ್ವದ ಸಕರ್ಾರವು ಏಳು ವರ್ಷದಿಂದ ರೈತರಿಗೆ ಕಾಮರ್ಿಕರಿಗೆ ಬುಡಕಟ್ಟು ಜನಾಂಗದವರಿಗೆ ಯಾವ ಯೋಜನೆಗಳನ್ನು ಜಾರಿಗೆ ತಂದಿಲ್ಲ ಬರೀ ಭಾವನಾತ್ಮಕ ಸಂಬಂಧ ಮಾತ್ರ ಎಂದರು
ಕೆಪಿಸಿಸಿ ಕೋ ಆಡರ್ಿನೇಟರ್ ವಿಜಯಕುಮಾರ್ ಮಾತನಾಡಿ ಕಾರ್ಯಕ್ರಮದ 11 ಅಂಶಗಳನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿದರು: ಪ್ರತಿ ಕಾರ್ಯಕ್ರಮ ಸ್ಥಳದ ಬಳಿಕ ಕಡ್ಡಾಯವಾಗಿ 50 ಮಂದಿ ಕಾರ್ಯಕರ್ತರು ಹಾಜರಿರಬೇಕು,ಕಡ್ಡಾಯವಾಗಿ ಸಾಮಾಜಿಕ ಅಂತರ ಹಾಗೂ ಸಕರ್ಾರದ ಕೊರೋನ ನಿಯಂತ್ರಣ ಮಾರ್ಗಸೂಚಿಗಳು ಪಾಲಿಸಬೇಕು, ವೇದಿಕೆಯ ಕಾರ್ಯಕ್ರಮವನ್ನು ಧೂಮ್ ಮೂಲಕ ಒಂದು ಪರಿಧಿಯಲ್ಲಿ ನೇರ ಪ್ರಸಾರ ಮಾಡಬೇಕು, ಲ್ಯಾಪ್ಟಾಪ್ ಮೊಬೈಲ್ ಬ್ಯಾಟರಿ ಪರೀಕ್ಷಿಸಿ ಎಲ್ಲಾ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ನೇರ ಪ್ರಸಾರ ವೇಳೆ ಕೆ ಶಿವಕುಮಾರ್ ಜೊತೆಯಾಗಿಯೇ ಸಂವಿಧಾನದ ಪೀಠಿಕೆ ಓದುವುದು ಪ್ರತಿಜ್ಞಾವಿಧಿ ಸ್ವೀಕರಿಸುವುದರಲ್ಲಿ ಭಾಗವಹಿಸಬೇಕು ,ನಿಮ್ಮ ಕಾರ್ಯಕ್ರಮದ ವಿಡಿಯೋ ಒಂದನ್ನು ಅಪ್ಲೋಡ್ ಮಾಡಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಟಾಸ್ಕ್ ಫೋಸರ್್ ಸಮಿತಿಯ ಸದಸ್ಯರಾದ ಶಶಿಧರ ಪೂಜರ.ಹರಪನಹಳ್ಳಿ ಟಾಸ್ಕ್ ಫೋಸರ್್ ಸಮಿತಿಯ ಅಧ್ಯಕ್ಷರಾದ ಹೆಚ್. ಕೆ ಹಾಲೇಶ ಜಿಲ್ಲಾ ಪಂಚಾಯತಿಯ ಸದ್ಯಸರಾದ ಹೆಚ್.ಪಿ ಪರುಶರಾಮಪ್ಫ.ಡಾಕ್ಟರ್ ಮಂಜುನಾಥ್. ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬೇಲೂರು ಅಂಜಿನಪ್ಪ .ಪಿ ಎಲ್ ಡಿ ಬ್ಯಾಂಕಿನ ನಿದರ್ೆಶಕ ಪೋಮನಾಯ್ಕ.ಅರಸಿಕೇರಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಕಂಬತ್ತಹಳ್ಳಿ ಮಂಜುನಾಥ್ ಪಟ್ನಮದ್ ಪರುಶರಾಮ ಅರುಣ್ ಪೂಜರ ಪುರಸಭೆ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರುಗಳು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.