ನವದೆಹಲಿ, ಜುಲೈ 19 ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಂಧನದ ವಿರುದ್ಧ ಪಕ್ಷ ಶುಕ್ರವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ.
ಈ ಕುರಿತು ಎಲ್ಲಾ ಪಿಸಿಸಿ ಮುಖ್ಯಸ್ಥರು, ಸಿಎಲ್ಪಿ ಮುಖಂಡರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಎಐಸಿಸಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಎಲ್ಲಾ ರಾಜ್ಯಗಳಲ್ಲಿ ಧರಣಿ, ಪ್ರತಿಭಟನೆ ನಡೆಸಿ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತೆ ಸೂಚಿಸಿದ್ದರು.
ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯ ಉಂಭಾ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗೋಂಡಾ ಸಮುದಾಯದ 10 ಜನರು ಸಾವನ್ನಪ್ಪಿದ್ದರು. ಈ ಸಂತ್ರಸ್ಥ ಕುಟುಂಬಗಳಿಗೆ ಸಾಂತ್ವನ ಹೇಳಲು ಪ್ರಿಯಾಂಕ ಗಾಂಧಿ ಅಲ್ಲಿಗೆ ಹೋಗುತ್ತಿದ್ದಾಗ ಅವರನ್ನೂ ಉತ್ತರ ಪ್ರದೇಶ ಪೊಲೀಸರು ತಡೆದು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಗ್ರಾಮಪಂಚಾಯತಿ ಪ್ರಧಾನ್ ಯಜ್ಞ ದತ್ ಭೂರಿಯಾ ಸೇರಿದಂತೆ ಒಟ್ಟು 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ