ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ :*ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ :*ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟನೆ Congress lashes out against central government: Protest by cooking on the road

ದಾಂಡೇಲಿ  15 :   ವಾಣಿಜ್ಯ ಸಿಲೆಂಡರ್  ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ವಿರುದ್ಧ  ರವಿವಾರ  ದಾಂಡೇಲಿಯ ಜೆ.ಎನ್ . ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ದಾಂಡೇಲಿ ಬ್ಲಾಕ್ ಕಾಂಗ್ರೆಸ್  ಕಾರ್ಯಕರ್ತರು, ಪದಾಧಿಕಾರಿಗಳು  ಪ್ರತಿಭಟನೆ ಮಾಡಿದರು.  ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗ ಟೀಕಿಸಿದರು.ದಾಂಡೇಲಿ  ಬಸ್ ನಿಲ್ದಾಣದ ಎದುರು ಜೆ.ಎನ್‌. ರಸ್ತೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳೆಯರು ಮಾನವ ಸರಪಳಿ ರಚಿಸಿ,  ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇದೇ ಪ್ರತಿಭಟನೆಯಲ್ಲಿ  ಮಹಿಳೆಯರು "ಕಟ್ಟಿಗೆ ಒಲೆ ಹಚ್ಚಿ, ರಸ್ತೆಯಲ್ಲೇ ಅಡಿಗೆ ಮಾಡುವ"  ಮೂಲಕ ಗ್ಯಾಸ್ ಸಿಲಿಂಡರ್ ದರ ಏರಿಕೆಯನ್ನು  ಬಲವಾಗಿ ಖಂಡಿಸಿದರು. ಸಿಲೆಂಡರ್  ಪೂರೈಕೆ ಸಮಸ್ಯೆಯಿಂದ ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟವನ್ನು ಭಾಷಣದಲ್ಲಿ ಖಂಡಿಸಿದರು. 

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಗ್ಯಾಸ್ ದರ ಇಳಿಸಬೇಕು , ಸಾಮಾನ್ಯ ಜನರಿಗೆ ತಮ್ಮ ಗ್ಯಾಸ್ ಪೂರೈಕೆ ಸುಗಮಗೊಳಿಸಬೇಕು,  ಸಿಲೆಂಡರ ಬೆಲೆ ಏರಿಕೆ ಇಳಿಸಿ ಎಂದು  ಘೋಷಣೆ  ಕೂಗಿದರು. ಬಡವರ  ಬದುಕಿನ ಮೇಲೆ ಬೆಲೆ ಏರಿಕೆಯ ನೇರ ಪರಿಣಾಮ ಬೀರುತ್ತಿದೆ  ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಕಾಂಗ್ರೆಸ್  ಮುಖಂಡರಾದ ತಸ್ಟರ್ ಸೌಧಾಘರ  ಮಾತನಾಡಿ, ಅಡುಗೆ ಅನಿಲದ ನಿರಂತರ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅನೇಕ ಕಡೆಗಳಲ್ಲಿ ಗ್ಯಾಸ್ ಪೂರೈಕೆ ವ್ಯತ್ಯಯವಾಗುತ್ತಿರುವುದರಿಂದ ಜನರು ಮತ್ತೆ ಕಟ್ಟಿಗೆ ಒಲೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.