ರೈತರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿ ಶಾಸಕ ಲಮಾಣಿ ಆರೋಪ

ರೈತರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿ ಶಾಸಕ ಲಮಾಣಿ ಆರೋಪ Congress government is cheating farmers, alleges MLA Lamani

ರೈತರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿ ಶಾಸಕ ಲಮಾಣಿ ಆರೋಪ 

ಶಿರಹಟ್ಟಿ 10: ರಾಜ್ಯ ಸರ್ಕಾರ ಮತ್ತು ಕೃಷಿ ಸಚಿವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದು, ತಮ್ಮ ತಪ್ಪನ್ನು ಮರೆ ಮಾಡಲು, ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದರೆ, ಸಮಯಕ್ಕೆ ಸರಿಯಾಗಿ ಯೂರಿಯಾ ಪೂರೈಕೆ ಮಾಡದೇ ರೈತರಿಗೂ ಮೋಸ ಮಾಡುತ್ತಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು. 

ಪಟ್ಟಣದ ಮಾರುತಿ ದೇವಾಲಯದಿಂದ ಪಾದಯಾತ್ರೆ ಪ್ರಾರಂಭಿಸಿ ನೆಹರು ಸರ್ಕಲ್ ಮುಂಭಾಗದಲ್ಲಿ ಭಾನುವಾರ ಯೂರಿಯಾ ರಸಗೊಬ್ಬರವನ್ನು ಸಮರ​‍್ಕವಾಗಿ ಪೂರೈಸದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಕೇವಲ ಜನರ ಹಣ ಲೂಟಿ ಮಾಡಲು ಮಾತ್ರ ಈ ಕ್ರಮ. ಜನರಿಗೆ ಮಂಕುಬೂದಿ ಎರಚಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ. ‘ಖಾತಾ ಬದಲಾವಣೆ’ ಎನ್ನುವುದೇ ದೊಡ್ಡ ಬೋಗಸ್‌. ಈ ಸರಕಾರ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ” ಎಂದು ಕಿಡಿಕಾರಿದರು. 

“ಕಾಂಗ್ರೆಸ್ ಸರ್ಕಾರ ಈ ತೆರಿಗೆಯನ್ನು 1000ಅ ಏರಿಕೆ ಮಾಡಿದೆ. ಅಂದರೆ 3 ರಿಂದ 6 ಲಕ್ಷ ರೂಪಾಯಿ ವರೆಗೆ ಹೆಚ್ಚಿಸಿದೆ. ಜನರಿಂದ ಇಷ್ಟೊಂದು ಹಣ ಕಟ್ಟಲು ಸಾಧ್ಯವೇ?” ಎಂದು ಪ್ರಶ್ನಿಸಿದ ಅವರು, “ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಚೆಲ್ಲಾಟವಾಡಿದಂತೆ ರೈತರ ಜತೆಯೂ ಆಟವಾಡುತ್ತಿದೆ. ಉತ್ತಮ ಮಳೆಯಾಗಿ ಬಿತ್ತನೆ ಚಟುವಟಿಕೆ ಆರಂಭವಾಗುತ್ತಿದ್ದಂತೆಯೇ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ. ಇದಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರೇ ಕಾರಣ” ಎಂದರು. 

ಸಮಾಜ ಸೇವಾ ಸಂಸ್ಥೆಗಳ ಮೂಲಕ ರೈತರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ರಸಗೊಬ್ಬರ, ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಟೀಕಿಸಿದ ಅವರು, “ಕೇವಲ ಗ್ಯಾರಂಟಿಗಳಿಂದ ಜನರಿಗೆ ಟೋಪಿ ಹಾಕುತ್ತಿರುವ ಸರಕಾರ, ಅನ್ನ ಕೊಡುವ ರೈತನಿಗೇ ಮೋಸ ಮಾಡುತ್ತಿದೆ” ಎಂದು ಆರೋಪಿಸಿದರು. 

ಶಿರಹಟ್ಟಿ ಮಂಡಲ ಅದ್ಯಕ್ಷ ಸುನಿಲ ಮಾಂತಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಹಳ್ಳಿ, ಮಂಡಲ ರೈತ ಮೂರ್ಚ ಕಾರ್ಯದರ್ಶಿ ವೀರಣ್ಣ ಅಂಗಡಿ, ರಾಜ್ಯ ರೈತ ಮೂರ್ಚ ಕಾರ್ಯಕಾರಣಿ ಸದ್ಯಸ ರಾಜು ಕುಲಕರ್ಣಿ, ಜಿಲ್ಲಾ ರೈತ ಮೂರ್ಚ ಪ್ರಧಾನಕಾರ್ಯದರ್ಶಿ  ಪಕ್ಕೀರ​‍್ಪ ಗೂಡಿ, ಮಾಜಿ ಜಿಪಂ ಸದ್ಯಸ ಶಿವಪ್ರಕಾಶ ಮಹಾಜನಶೆಟ್ಟರ, ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ಶಿರಹಟ್ಟಿ ನಗರ ಘಟಕದ ಅಧ್ಯಕ್ಷರ ನಾಗರಾಜ ಲಕ್ಕುಂಡಿ, ಬಿ ಡಿ ಪಲ್ಲೇದ, ತಿಪ್ಪಣ್ಣ ಕೊಂಚಿಗೇರಿ, ಸಿಸಿ ನೂರಶೆಟ್ಟರ, ಸಂದೀಪ ಕಪ್ಪತ್ತನವರ, ಶಂಕರ ಮರಾಠೆ, ತಿಮ್ಮರೆಡ್ಡಿ ಮರಡ್ಡಿ, ರಾಜೀವ್ ರೆಡ್ಡಿ ಬೊಮ್ಮನಕಟ್ಟಿ, ಪ್ರವೀಣ ಪಾಟೀಲ, ಪ್ರಶಾಂತ ಗುಡದಪ್ಪನವರ, ರಾಮಣ್ಣ ಕಂಬಳಿ, ಗಂಗಾಧರ ಮೆಣಸಿನಕಾಯಿ, ಅಕ್ಬರಸಾಬ ಯಾದಗಿರಿ ಇತರರಿದ್ದರು.