ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಹಿನ್ನಡೆ: ಶಾಸಕ ಕೃಷ್ಣನಾಯ್ಕ
Congress government has setback development: MLA Krishna Nayak
ಹೂವಿನಹಡಗಲಿ 19: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ಯಾರಂಟಿ ಯೋಜನೆಯಿಂದ ಕ್ಷೇತ್ರದ ಅಭಿವೃದ್ಧಿ ಹಿನ್ನಡೆಯಾಗಿದೆ ಶಾಸಕ ಕೃಷ್ಣನಾಯ್ಕ ಹೇಳಿದರು. ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ. ಗ್ರಾ.ಪಂ. ಎಂಪಿ.ಪ್ರಕಾಶ ಕುಟುಂಬದ ಸಹಯೋಗದಲ್ಲಿ ನಿರ್ಮಿಸಿದ ಶುದ್ಧ ಗಂಗಾ ಘಟಕ ಉದ್ಘಾಟಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ಕುಡಿವ ನೀರಿನ ಘಟಕಕ್ಕೆ ಜಾಗ, ಕಟ್ಟಡ ನೀಡುತ್ತೇವೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುದ್ದ ಗಂಗಾ ಘಟಕಗಳನ್ನು ನೀಡಬೇಕು ಎಂದು ಮನವಿ ಮಾಡಿದರು. ಉತ್ತಂಗಿ ಗ್ರಾಮದಜನ ಕಳೆದ 2 ವರ್ಷಗಳಿಂದ ಮುದೇನೂರು ಕೆರೆಯ ನೀರನ್ನು ಶುದ್ದೀಕರಿಸದೇ ನೇರವಾಗಿಕುಡಿಯುತ್ತಿದ್ದಾರೆಎಂದಅವರುಈಗ್ರಾಮಕ್ಕೆ ಮುಂಬರುವ ದಿನಗಳಲ್ಲಿ 4 ಶುದ್ದಕುಡಿಯುವ ನೀರಿನಘಟಕ ಮಂಜೂರು ಮಾಡುತ್ತೇನೆ. ಧರ್ಮಸ್ಥಳ ಸಂಘದಿಂದ ಹತ್ತು ಹಲವು ಜನಪರ ಯೋಜನೆಗಳನ್ನು ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ ಎಂದರು.ರಂಗಭಾರತಿ ಸಂಸ್ಥೆ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ಮಾತನಾಡಿ, ತಾಲೂಕಿನದಲ್ಲಿ ಧರ್ಮಸ್ಥಳ ಸಂಘದಿಂದ ಹತ್ತು ಹಲವು ಜನಪರ ಯೋಜನೆಗಳನ್ನು ಡಾ.ವೀರೇಂದ್ರ ಹೆಗ್ಗಡೆಅವರು ಮಾಡುತ್ತಿದ್ದಾರೆ. ಇಟಗಿ ಬಹು ದೊಡ್ಡಗ್ರಾಮ.ಮಹಿಳೆಯರು ಶುದ್ಧ ನೀರಿಗಾಗಿ ಪರದಾಡುವ ಸ್ಥಿತಿ ಇತ್ತು.ಶುದ್ದಗಂಗಾಘಟಕ ನಿರ್ಮಾಣಮಾಡುತ್ತೇವೆ, ಆದರೆ ನಮಗೆ ನಿವೇಶನ ಮತ್ತುಕಟ್ಟಡದಕೊರತೆಕಾಡುತ್ತಿದೆಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಅಧಿಕಾರಿಗಳು ಹೇಳಿದರು.ಕಟ್ಟಡದ ಸಂಪೂರ್ಣ ವೆಚ್ಚವನ್ನು ಎಂ.ಪಿ.ಪ್ರಕಾಶಕುಟುಂಬ ಭರಿಸಿದೆ ಎಂದರು.
ಧರ್ಮಸ್ಥಳ ಸಂಘದವರು ಶುದ್ಧ ಗಂಗಾ ಘಟಕ ನಿರ್ಮಿಸಿದ್ದಾರೆ ಎಂದರು.ಧರ್ಮಸ್ಥಳ ಸಂಘದ ನಿರ್ದೇಶಕ ಸತೀಶ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ 518 ಶುದ್ಧ ಗಂಗಾ ಘಟಕ ನಿರ್ಮಿಸಿದ್ದು, 1.35 ಲಕ್ಷಜನರಿಗೆಉಪಯೋಗವಾಗಿದೆ.780 ಕೆರೆಅಭಿವೃದ್ಧಿ, ವಿದ್ಯಾರ್ಥಿ ವೇತನ, ದೇವಸ್ಥಾನಗಳ ಜೀರ್ಣೋದ್ದಾರ, ಹೀಗೆ ಹಲವಾರು ಯೋಜನೆಗಳನ್ನು ಮಾಡುತ್ತಿದೆ. ?? ಗ್ರಾಮದಜನಾರೋಗ್ಯಕಾಪಾಡಬೇಕೆಂಬ ಕಾರಣಕ್ಕಾಗಿ 5 ಲಕ್ಷ ವೆಚ್ಚದಲ್ಲಿ ಶುದ್ದ ಗಂಗಾ ಘಟಕ ನಿರ್ಮಿಸಿ, ನಾವೇ ನಿರ್ವಹಣೆ ಮಾಡುತ್ತೇವೆಎಂದು ಹೇಳಿದರು. ಹಗ್ರಾಪಂ ಅಧ್ಯಕ್ಷ ಮರ್ದನ್ ಸ್ವಾಮಿ ಮಾತನಾಡಿದರು. ಗ್ರಾಪಂಉಪಾಧ್ಯಕ್ಷೆ ಲಕ್ಷ್ಮಮ್ಮ, ಸಂತೋಷಜೈನ್, ಕೋಡಿಹಳ್ಳಿ ಕೊಟ್ರೇಶ, ಬಿ.ರಾಮನಗೌಡ, ಸುನೀತಾ, ಕೆ.ಆರ್.ರೂಪಾ, ಕೆ.ಪರಿಮಳಾ, ಷಣ್ಮುಖಪ್ಪಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 