ಅಧಿಕಾರ ಹಂಚಿಕೆ ಕಿತ್ತಾಟದಲ್ಲಿ ಬಿದ್ದೋಯ್ತು ಕಾಂಗ್ರೆಸ್
Congress caught in power-sharing tussle
ಹೂವಿನಹಡಗಲಿ 08: ಕರ್ನಾಟಕ ಕಾಂಗ್ರೆಸ್ನಲ್ಲಿನ ಅಧಿಕಾರ ಹಂಚಿಕೆ ಕಿತ್ತಾಟದಿಂದ ಸಿದ್ದರಾಮಯ್ಯ ಸರ್ಕಾರದ ವರ್ಚಸ್ಸು ಕುಸಿದಿರುವುದು ಸಿ-ವೋಟರ್ ಸಮೀಕ್ಷೆಯಿಂದ ಬಹಿರಂಗವಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ರಾದ ಎಂ.ಬಿ.ಬಸವರಾಜ ಆರೋಪಿಸಿದರು.ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿ 2024ರ ಜನವರಿಯಿಂದ 2025ರ ನವೆಂಬರ್ ಅವಧಿಯಲ್ಲಿ ಸರ್ಕಾರದ ಜನಪ್ರಿಯತೆ ಗಣನೀಯವಾಗಿ ಇಳಿದಿದೆ ಮತ್ತು ಅತೃಪ್ತಿ ಹೆಚ್ಚಾಗಿದೆ.ಜತೆಗೆ ಆಡಳಿತ ದಿಢೀರ್ ಕುಸಿದಿದೆ.ಸಿಎಂ ಕುರ್ಚಿ ಕಾದಾಟ, ರಾಜ್ಯದ ಆಡಳಿತ ವ್ಯವಸ್ಥೆ ಇಲ್ಲ ದಂತಾಗಿದೆ. , ಹೂವಿನಹಡಗಲಿ. ಸಿಎಂ ಕುರ್ಚಿ ಕಾದಾಟದಿಂದ ರಾಜ್ಯದ ಆಡಳಿತ ವ್ಯವಸ್ಥೆ ಬುಡಮೇಲಾಗಿದೆ ಎಂದು ವಿಜಯನಗರ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡ ಎಂ ಬಿ ಬಸವರಾಜ ಹೇಳಿದರು ಅವರು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆ ಭಾನು ವಾರ ಸಂಜೆ ಪತ್ರಿಕಾ ಹೇಳಿಕೆ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಕಟ್ಟುನಿಟ್ಟಾದ ಸಮಯ ಪಾಲನೆ ಮಾಡುತ್ತಿಲ್ಲ, ಗಿಗ್ ಕಾರ್ಮಿಕರಿಗೆ ಕನಿಷ್ಠ ಗಂಟೆಗಳ ವೇತನವನ್ನು ಕಡ್ಡಾಯಗೊಳಿಸದೆ ಇರುವುದು, ಕರ್ನಾಟಕ ಅಪಾರ್ಟ್ಮಂಟ್ ಮಾಲೀಕತ್ವ ಕಾಯ್ದೆ ಅನುಷ್ಠಾನಕ್ಕೆ ಕೈ ಹಾಕಿಲ್ಲ. ನಮ್ಮ ಮೆಟ್ರೋ, ಉಪನಗರ ರೈಲು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸುಗಮ ಏಕೀಕರಣವನ್ನು ಕೈಗೆ ಎತ್ತದಿರುವುದು. ಇನ್ನು ರೈತರ ಬಗ್ಗೆ ಕಾಳಜಿ ಇಲ್ಲದ ಸಿದ್ದರಾಮಯ್ಯ ಸರ್ಕಾರ ಮಳೆನೀರು ಕೊಯ್ಲಿಗೆ ಶೇ.50 ಸಬ್ಸಿಡಿ ಒದಗಿಸಿಲ್ಲ,ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಪ್ರತಿ 100 ಕಿ.ಮೀ.ಗಳಲ್ಲಿ ಅಪಘಾತ ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸದೆ ಇಂತಹ ಭರವಸೆಗಳು ಕಾಗದಲ್ಲೇ ಉಳಿದಿವೆ. ನಗರಾಭಿವೃದ್ಧಿ ಇಲಾಖೆಯಡಿ ಶೇ.70 ರಷ್ಟು ಮತ್ತು ಆರೋಗ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಲಾ ಶೇ.64.3 ಭರವಸೆಗಳು ಇನ್ನೂ ಪ್ರಾರಂಭವೇ ಆಗಿಲ್ಲ. ಸರ್ಕಾರವು ಇವುಗಳ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕಾಗಿದೆ.
ಸಾವಿರಾರು ಲಕ್ಷ ಕೋಟಿ ಹಣವನ್ನು ಭರಿ ಗ್ಯಾರಂಟಿ ಯೊಜನೆಗೆ ನೀಡಿ ಅಭಿವೃದ್ಧಿ ಜಪ ಮಾಡುತ್ತಿರುವ ರಾಜ್ಯ ಸರ್ಕಾರ ಸುಳ್ಳು ಭರವಸೆ ನೀಡಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಅನ್ನದಾತರು ರಾಜ್ಯದ ತುಂಬಾ ಪ್ರತಿಭಟನೆ ನಡೆಸಿದರು. ಕಿವುಡು ರಾಗಿರುವ ಮುಖ್ಯ ಮಂತ್ರಿಗಳು ರೈತರ ಹಿತ ಕಾಪಾಡಲಿ, ಇತ್ತ ರಸ್ತೆಗಳಿಗೆ ಹಿಡಿ ಮಣ್ಣು ಹಾಕಿದೆ. ಮಂತ್ರಿಗಳು ತಮ್ಮ ಸಂಪತ್ತನ್ನು ವೃದ್ಧಿಸಿಕೊಂಡು. ಜನರ ಜೀವನದ ಜೋತೆ ಆಟಾಡುತ್ತಾ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ರಾಜ್ಯದ ಮತದಾರರ ರೋಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಜನರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಎಂ ಬಿ ಬಸವರಾಜ ಹರಿಹಾಯ್ದದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 