ಚಿಕ್ಕಮಗಳೂರು,ನ 11 : ಉಪ ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರ ಮತ್ತಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಆ ಮೂಲಕ ಕಾಂಗ್ರೆಸ್ ವಿಭಜನೆ ಯಾಗಲಿದೆ ಎಂದು ಸಚಿವ ಸಿಟಿ ರವಿ ಅವರು ಎರಡನೆ ಹಂತದಲ್ಲಿ ಆಪರೇಷನ್ ಕಮಲ ನಡೆಸುತ್ತೇವೆ ಎಂದು ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಗಾಗಲೇ ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ಬರುವ ಆಶಯ ಹೊಂದಿದ್ದಾರೆ.ಯಾವುದನ್ನೂ ಕದ್ದು ಮುಚ್ಚಿ ಮಾಡಲು ಸಾಧ್ಯವಿಲ್ಲ,ಎಷ್ಟು ಮಂದಿ ಬರಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಎಂದು ಅವರು ಸ್ಪೋಟಕ ಹೇಳಿಕೆ ನೀಡಿದರು. ಶಾಸಕರು ಬಿಜೆಪಿ ಬರುತ್ತಿರುವುದು ವೈಚಾರಿಕ ಹಿನ್ನೆಲೆಯಿಂದಷ್ಟೇ ಹೊರತು ವ್ಯವಹಾರಿಕ ದೃಷ್ಟಿಯಿಂದಲ್ಲ.ಕೈ ಶಾಸಕರು ಬಿಜೆಪಿಗೆ ಬರುವ ಮೂಲಕ ಕಾಂಗ್ರೆಸ್ ವಿಭಜನೆಯಾಗಲಿದೆ ಎಂದು ಅವರು ಭವಿಷ್ಯ ನುಡಿದರು. ಸಿದ್ದರಾಮಯ್ಯ ಭವಿಷ್ಯ ಎಷ್ಟು ಬಾರಿ ಸತ್ಯವಾಗಿದೆ. ಮಕಾಡೆ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಸಿದ್ದರಾಮಯ್ಯಗೆ ಅವರಿಗೆ ಅನ್ವಯವಾಗುತ್ತದೆ.ಮೋದಿ ಅಪ್ಪನ ಆಣೆ ಪ್ರಧಾನಿ ಯಾಗಲ್ಲ ಅಂದರು,ಅವರಪ್ಪ ನನ್ನೂ ತಂದರು.2019ರ ಲೋಕಸಭಾ ಚುನಾವಣೆಯನ್ನು ಬಿಜೆಪಿಯನ್ನು ಒಂದಂಕಿಗೆ ಇಳಿಸುತ್ತೇವೆ ಎಂದರು ಆದರೆ ಹೇಳಿದವರೇ ಒಂದಂಕಿಗೆ ಇಳಿ ದರು.ಎದೆ ತಟ್ಟಿಕೊಂಡು ನಾನೇ ಮುಖ್ಯಮಂತ್ರಿ ಎನ್ನುತ್ತಿದರು,ಕೊನೆಗೆ ಏನಾಯ್ತು(?) ಎಂದು ಅವರು ಲೇವಡಿ ಮಾಡಿದರು. ಬಯಲುಸೀಮೆ ನಾಟಕದಲ್ಲಿ ಅಬ್ಬರಿಸುವಂತಷ್ಟೇ ಅವರದ್ದು.ನಾಟಕ ಮಾಡಿದವರೆಲ್ಲ ನಿಜ ಜೀವನದಲ್ಲಿ ಅದೇ ರೀತಿ ಇರುತ್ತಾರೆ ಅಂತಿಲ್ಲ.ನಾನೇ ಮುಖ್ಯಮಂತ್ರಿ ಎಂದು ಎದೆ ತಟ್ಟಿ ಕೊಂಡವರು ಚಾಮುಂಡೇಶ್ವರಿಯಲ್ಲಿ ಸೋಲಬೇಕಾಯಿತು.ಅಪ್ಪನಾಣೆ ಮೋದಿ ಪ್ರಧಾನಿ ಯಾಗಲ್ಲ ಅಂದವರು ಕಣ್ಣ ಮುಂದೆಯೇ ಎರಡೆರಡು ಬಾರಿ ಪ್ರಧಾನಿಯಾಗುವುದನ್ನು ನೋಡಬೇಕಾಯ್ತು. ಪ್ರಜಾಪ್ರಭುತ್ವದಲ್ಲಿ ತೀರ್ಮಾನ ಮಾಡುವುದು ನಾನು-ಸಿದ್ದರಾಮಯ್ಯ ಅಲ್ಲ, ರಾಜ್ಯದ ಹಾಗೂ ದೇಶದ ಜನ.ಪ್ರಜಾಪ್ರಭುತ್ವ ಇವರ ಕೈನಲ್ಲಿ ಇದ್ದಿದರೆ ಅಪ್ಪನ ಆಸ್ತಿ ಮಗನಿಗೆ ಬರದಂತೆ ಬರೆದಿ ಡೋರು,ನನ್ನ ಬಳಿಕ ನನ್ನ ಮಗನೇ ಮುಖ್ಯಮಂತ್ರಿ ಎಂದು ಬರೆದಿಡುತ್ತಿದ್ದರು ಎಂದು ಸಿದ್ದರಾಮಯ್ಯ ನ ಕುಡಿತು ವ್ಯಂಗ್ಯವಾಡಿದರು.