ಭರ್ಜರಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು: ಎಂ. ಎಂ. ಹಿರೇಮಠ
Congratulations to the Central Government for the great gift: M. M. Hiremath
ಗದಗ 04 : ಕೇಂದ್ರದ ಎನ್.ಡಿ.ಎ ಸರಕಾರ ಜನ ಸಮಾನ್ಯರಿಗೆ ತೆರಿಗೆ ಇಳಿಕೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ 15 ರಂದು ಕೆಂಪು ಕೋಟೆಯ ಮೇಲೆ ದ್ವಜ ಏರಿಸಿ ಮಾತನಾಡುತ್ತಾ ದೀಪಾವಳಿ ಕೊಡುಗೆಯಾಗಿ ಜಿ.ಎಸ್.ಟಿ ತೆರಿಗೆಯನ್ನು ಬಹಳಷ್ಟು ಕಡಿಮೆ ಮಾಡಿ ನುಡಿದಂತೆ ನಡೆದ ಕೇಂದ್ರ ಸರ್ಕಾರಕ್ಕೆ ಜಿಲ್ಲಾ ಬಿ.ಜೆ.ಪಿ. ವಕ್ತಾರರಾದ ಎಂ. ಎಂ. ಹಿರೇಮಠ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮ ರವರ ಅಧ್ಯಕ್ಷತೆಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಸಭೆಯಲ್ಲಿ 175ಕ್ಕೂ ಹೆಚ್ಚು ಸರಕುಗಳಿಗೆ ತೆರಿಗೆ ಇಳಿಸುವ ನಿರ್ಧಾರ ಮಾಡಿದ್ದು, ಇದೊಂದು ಐತಿಹಾಸಿಕ ದಾಖಲೆ ಆಗಿದೆ. 12ಅ ಹಾಗೂ 28ಅರಷ್ಟಿದ್ದ ತೆರಿಗೆಯನ್ನು ರದ್ದು ಮಾಡಿ 5ಅ ಹಾಗೂ 12ಅರ ಶ್ರೇಣಿಗೆ ತರಲಾಗಿದ್ದು, ಇದರಿಂದ ಜನಸಾಮಾನ್ಯರಿಗೆ ಬಡವರಿಗೆ ರೈತರಿಗೆ ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಜರಿಗೆ ಅನುಕೂಲವಾಗಲಿದ್ದು, ಐಸ್ ಕ್ರೀಮ, ಬೆಣ್ಣೆ, ತುಪ್ಪ, ಕಾಫಿ, ಚಾಕಲೇಟ್, ಜೂಸ್, ಜಾಮೂನ್, ಕೆಚಪ್, ಹೇರ್ ಐಲ್, ಸಾಬೂನು, ಪ್ಯಾಕೇಜ್ ನೀರು, ಟೂತ್ ಪೇಸ್ಟ, ಸಿದ್ದ ಉಡುಪು, ಖಾರದ ತಿಂಡಿಗಳು, ಪಾದರಕ್ಷೆಗಳು, ಸೌಂರಕ್ಷಿಸಿದ ತರಕಾರಿ, ಹಣ್ಣು, ಮೀನು, ಬಹುತೇಕ ಓಷಧಿಗಳು, ಸೈಕಲ್, ಛತ್ರಿ, ರಸಗೊಬ್ಬರ, ಕೀಟ ನಾಶಕ ಹಾಗೂ ಇನ್ನೂ ಅನೇಕ ವಸ್ತುಗಳ ಬೆಲೆಗಳು ಬಹಳಷ್ಟು ಕಡಿಮೆ ಆಗಿವೆ. ಕೆವೊಂದು ತಿನ್ನುವ ಪದಾರ್ಥಗಳಿಗೆ ತೆರಿಗೆ ವಿನಾಯತಿಯನ್ನು ಘೋಷಿಸಿರುವರು.
ಸಣ್ಣ ಕಾರುಗಳು, ಬೈಕ, ಸ್ಕೂಟರ್, ಟಿವ್ಹಿ, ಎ.ಸಿ, ವಾಶಿಂಗ್ ಮಷೀನ್, ಫ್ರಿಜ್, ಸಿಮೆಂಟ್ ಇವುಗಳ ತೆರಿಗೆಯನ್ನು 28ಅರಿಂದ 18ಅಕ್ಕೆ ಇಳಿಕೆ ಮಾಡಿರುವರು. ವೈಯಕ್ತಿಕ ಆರೋಗ್ಯ ವಿಮೆ, ಜೀವ ವಿಮೆಗೆ ಸಂಪೂರ್ಣ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಜನಸಾಮಾನ್ಯರ ಪಾಲಿಗೆ ದುಬಾರಿಯಾಗಿರುವ ವೈದ್ಯಕೀಯ ವಿಮೆಯನ್ನು ಎಲ್ಲರಿಗೂ ಕೈಗೆಟಕುವಂತೆ ಕ್ರಮ ಕೈಗೊಂಡಿದೆ. ಆರೋಗ್ಯಕ್ಕೆ ಸಂಬಂಧಪಟ್ಟ ತೆರಿಗೆಯನ್ನು ಕೂಡಾ ಬಹಳಷ್ಟು ಕಡಿಮೆ ಮಾಡಿ ಕೇಂದ್ರ ಸರಕಾರ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಲ್ಲ ಸಾಮಾನ್ಯ ಜನರು ಪ್ರತಿನಿತ್ಯ ಬಳಸುವ ವಸ್ತುಗಳ ತೆರಿಗೆಯನ್ನು ಕಡಿಮೆ ಮಾಡಿದ್ದು, ಇದರಿಂದ ಬಡವರ ಹಾಗೂ ಮಧ್ಯಮ ವರ್ಗದವರಿಗೆ ಬಹಳಷ್ಟು ಅನಕೂಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ 15 ರಂದು ಹೇಳಿದಂತೆ ತೆರಿಗೆಯನ್ನು ಕಡಿಮೆ ಮಾಡಿ ಜನರು ನಿಟ್ಟುಸಿರು ಬಿಟ್ಟಿರುವರು. ನವರಾತ್ರಿ ಹಬ್ಬದಿಂದ ಹೊಸ ತೆರಿಗೆ ಪದ್ದತಿ ಜಾರಿಗೆ ಬರುವುದರಿಂದ ಈ ವರ್ಷದ ದಸರಾ ಹಾಗೂ ದೀಪಾವಳಿಗೆ ಕೇಂದ್ರ ಸರಕಾರ ತೆರಿಗೆ ಇಳಿಕೆಯ ಕೊಡುಗೆಯನ್ನು ನೀಡಿದ್ದಕ್ಕಾಗಿ ಎಂ. ಎಂ. ಹಿರೇಮಠ ರವರು ಕೇಂದ್ರ ಸರ್ಕಾರವನ್ನು ಅಭಿನಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 