ಪ್ರಧಾನಮಂತ್ರಿಗೆ ಅಭಿನಂದನೆ ಸಲ್ಲಿಕೆ

ಧಾರವಾಡ: ದೇಶ ರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವ ನಮ್ಮ ವೀರಯೋಧರ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಸೌಲಭ್ಯಗಳನ್ನು ಘೋಷಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಇಲ್ಲಿಯ ಉತ್ತರ ಕನರ್ಾಟಕ ಸೈನಿಕರ ಕಲ್ಯಾಣ ಸಮಿತಿಯು ಹಾಧರ್ಿಕವಾಗಿ ಅಭಿನಂದಿಸಿದೆ. 

ಸಿಯಾಚಿನದಲ್ಲಿ ಕೊರೆಯುತ್ತಿರುವ ಹಿಮದಲ್ಲೂ ಅಹೋರಾತ್ರಿ ಸೇವೆ ಮಾಡುತ್ತಲಿರುವ ಸೈನಿಕರನ್ನು ಭೆಟ್ಟಿಯಾಗಿ ಅವರಿಗೆ ಮಾನಸಿಕ ಧೈರ್ಯವನ್ನು ತುಂಬಿದ ನೂತನ ರಕ್ಷಣಾ ಸಚಿವ  ರಾಜನಾಥಸಿಂಗರವರನ್ನು ಅಭಿನಂದಿಸಲಾಯಿತು. 

ಸೈನ್ಯ ಸೇರ ಬಯಸುವ ಯುವಕರಿಗೆ ಮಾರ್ಗದರ್ಶನ ಮಾಡಲು ನಿವೃತ್ತ ಸೇನಾಧಿಕಾರಿಗಳಾದ ಲೆ.ಕ. ಮೇದಾರ, ಮೇಜರ ಶಿವರೆಡ್ಡಿ ದಾನರೆಡ್ಡಿ ಅವರ ಮಾರ್ಗದರ್ಶನವನ್ನು ಪಡೆಯ ಬೇಕೆಂದೂ ನಿರ್ಧರಿಸಲಾಯಿತು. 

ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದಶರ್ಿ ಕೃಷ್ಣ ಜೋಶಿ, ಪ್ರಾಣೇಶ ಪಾಶ್ಚಾಪೂರ, ವೀರಣ್ಣ ಹಿರೇಮಠ, ಅಶೋಕ ಕುಂಬಾರಿ, ಏಳುಕೊಟೆಪ್ಪ ಬಾಲೆಹೊಸೂರ, ಎಂ.ಬಿ. ಬೇನಪ್ಪನವರ, ಮಹೇಶ ಕಲ್ಲಿಕರೆಣ್ಣವರ, ಮಹದೇವಪ್ಪ ಬಡಿಗೇರ, ಭೀಮಪ್ಪ ಜಾಧವ, ಎ.ಆರ್. ಜೋಶಿ, ಪ್ರಕಾಶ ಕುಲಕಣರ್ಿ, ಪಂಡಿತ ಮುಂಜಿ, ಎಸ್.ಬಿ. ಗುತ್ತಲ, ಮುರಳಿಧರರಾವ್, ರಮೇಶ ಪಾಟೀಲ, ಕರಿಯಪ್ಪ ಸುಣಗಾರ ಮತ್ತಿತರರು ಭಾಗವಹಿಸಿದ್ದರು.