ಕಾಂಗೋ ವಿಮಾನ ಪತನ; ಮೃತರ ಸಂಖ್ಯೆ 29ಕ್ಕೇರಿಕೆ

ಮಾಸ್ಕೋ, 25 ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ ಸಿ)ದ ಪೂರ್ವ ಭಾಗದ ಅತಿ ಹೆಚ್ಚು ಜನಸಂಖ್ಯೆಯ ಗೋಮಾ ನಗರದಲ್ಲಿ ಸಣ್ಣ ನಾಗರಿಕ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೇರಿದೆ.    ಆರಂಭದಲ್ಲಿ ಆರು ಜನರು ಮೃತಪಟ್ಟಿರುವುದು ದೃಢಪಟ್ಟಿತ್ತು. ನಂತರ, 24 ಮೃತದೇಹಗಳನ್ನು ಹೊರತೆಗೆಯಲಾಯಿತು.    ಇಲ್ಲಿನ ಆಕ್ಟ್ವಲೈಟ್ ಸುದ್ದಿ ಸಂಸ್ಥೆ ಪ್ರಕಾರ, ಇಲ್ಲಿಯವರೆಗೆ ಒಂದೇ ಕುಟುಂಬದ ಏಳು ಸದಸ್ಯರು ಸೇರಿದಂತೆ 29 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.    ಭಾನುವಾರ ಹಾರಾಟ ಆರಂಭಿಸಿದ್ದ ಈ ವಿಮಾನ ಪತನಗೊಂಡು ನಗರದ ಮನೆಯೊಂದಕ್ಕೆ ನುಗ್ಗಿತ್ತು. ವಿಮಾನದಲ್ಲಿ 17 ಪ್ರಯಾಣಿಕರು ಹಾಗೂ ಸಿಬ್ಬಂದಿಯಿದ್ದರು. ವಿಮಾನ ಪತನದಿಂದ  ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ  ಸುತ್ತಮುತ್ತಲಿನ ಪ್ರದೇಶಕ್ಕೂ ವ್ಯಾಪಿಸಿತ್ತು.