ತಪ್ಪೊಪ್ಪಿಗೆ, ಎಚ್ಚರಿಕೆ ಇಂದಿನ ತುರ್ತ : ರಾಘವೇಂದ್ರರಾವ್

ಧಾರವಾಡ 7: ತಪ್ಪೊಪ್ಪಿಗೆ ಮತ್ತು ಎಚ್ಚರಿಕೆ ಯಾವುದೇ ವ್ಯಕ್ತಿ, ಸಮಾಜ, ಸಮುದಾಯ ಹಾಗೂ ತಲೆಮಾರನ್ನು ಕಾಡಬೇಕಾದ ತುರ್ತ ಇಂದಿನ ಅಗತ್ಯ ಎಂದು ಹಿರಿಯ ವಿಮರ್ಶಕ, ಲೇಖಕ ಎಚ್.ಎಸ್. ರಾಘವೇಂದ್ರರಾವ್ ಹೇಳಿದರು. 'ಸಂಗಾತ' ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಎರಡನೇ ವಷರ್ಾಚರಣೆ, ಸಂಗಾತ ಕಥಾ ಬಹುಮಾನ ವಿತರಣೆ ಹಾಗೂ ಐದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಿಷ್ಣುತೆ ಎನ್ನುವುದು ಪ್ರತಿಗಾಮಿಗಳಲ್ಲೂ ಕಾಣಿಸುತ್ತಿಲ್ಲ, ಪ್ರಗತಿಪರರಲ್ಲಿಯೂ ಕಾಣಿಸುತ್ತಿಲ್ಲ. ಇದು ನಮ್ಮ ನಡುವಿನ ದುರಂತ. ವಿಚಾರಧಾರೆಗಳು ಒಳಗಿರುವ, ಹೊರಗಿಡುವ ಆಲೋಚನೆಗಳನ್ನು ಬದಲಾಯಿಸಿಕೊಳ್ಳದಿದ್ದರೆ, ಕೇಳಿಕೊಳ್ಳದಿದ್ದರೆ, ಆತ್ಮವಿಮಶರ್ೆ ಮಾಡಿಕೊಳ್ಳದಿದ್ದರೆ ನಮ್ಮ ಚಿಂತನೆಗಳು ಬಂಡವಾಳಶಾಹಿಗಳಿಗೆ ಆಹಾರವಾಗುವ ಅಪಾಯಗಳಿವೆ ಎಂದರು. ಕಳೆದುಹೋಗುತ್ತಿರುವ ದೇಸಿಯತೆ, ಬರುತ್ತಿರುವ ಆಧುನಿಕತೆ ಇವುಗಳಲ್ಲಿ ನಮ್ಮ ಆಯ್ಕೆ ಯಾವುದಾಗಿರಬೇಕು ಎನ್ನುವ ಸ್ಪಷ್ಟ ತಿಳಿವಳಿಕೆ ನಮ್ಮದಾಗಿರಬೇಕು. ಇವೆರಡರಲ್ಲಿ ಯಾವುದನ್ನು ವಿರೋಧಿಸಬೇಕು ಎಂಬುದರ ಎಚ್ಚರ ನಮ್ಮೆಲ್ಲರದ್ದಾಗಬೇಕು ಎಂದು ಹೇಳಿದರು. ಇಂದಿನ ಸಂದರ್ಭದಲ್ಲಿ ವೈಚಾರಿಕತೆ ಯಾವುದು, ನಾಯಕಪೂಜೆ ಯಾವುದು ಎಂಬುದನ್ನು ನಾವು ಸ್ಪಷ್ಟವಾಗಿ ಹುಡುಕದೆ ಹೋದರೆ, ನಾಯಕತ್ವವನ್ನು ಆಯ್ಕೆ ಮಾಡುವಾಗ ತಿಳಿವಳಿಕೆಯನ್ನು ಪಡೆದುಕೊಳ್ಳದಿದ್ದರೆ ದಶಾವತಾರದ ಕಲ್ಪನೆಯಲ್ಲಿಯೇ ಕಳೆದುಹೋಗುತ್ತೇವೆ ಎಂದು ಎಚ್ಚರಿಸಿದರು. ಕೇಶವ ಮಳಗಿ ಅವರ ಅಕಥಾ ಕಥಾ, ಮಂಜುನಾಥ್ಲತಾ ಅವರ ಕಥಾಗತ, ಶಾಂತಿ ಕೆ. ಅಪ್ಪಣ್ಣ ಅವರ ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು, ನರಸಿಂಹಮೂತರ್ಿ ಪ್ಯಾಟಿ ಅವರ ಬ್ರಾಹ್ಮಣ ಕುರುಬ, ವಿಜಯ್ ಹೂಗಾರ್ ಅವರ ಒಂದು ಖಾಲಿ ಕುಚರ್ಿ ಕೃತಿಗಳು ಬಿಡುಗಡೆಗೊಂಡವು. ಕೃತಿಗಳ ಕುರಿತು ರಂಗನಾಥ ಕಂಟನಕುಂಟೆ, ನರಸಿಂಹಮೂತರ್ಿ ಹಳೇಹಟ್ಟಿ, ಜಹಾನ್ ಅರಾ ಕೋಳೂರು ಮಾತನಾಡಿದರು. ಸಂಗಾತ ಕಥಾ ಬಹುಮಾನ ಪಡೆದ ದಾದಾಪೀರ್ ಜೈಮನ್, ಅಮರೇಶ ಗಿಣಿವಾರ, ಸಂಗನಗೌಡ ಹಿರೇಗೌಡ ಅವರಿಗೆ ಜಿ.ಪಿ. ಬಸವರಾಜು ಲೇಖಕಿ ವಿನಯಾ ಒಕ್ಕುಂದ ಬಹುಮಾನ ಪ್ರದಾನ ಮಾಡಿದರು. ಸಂಗಾತ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಸಂಪಾದಕ ಟಿ.ಎಸ್. ಗೊರವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ ಕೈದಾಳ್ ಕೃಷ್ಣಮೂರ್ತಿ , ವಿಠ್ಠಲ ದಳವಾಯಿ ನಿರೂಪಿಸಿದರು.