ಸರ್ಕಾರದ ವೈಫಲ್ಯತೆ ಖಂಡಿಸಿ ಅ. 27ರಂದು ಜೈಲು ಭರೋ ಚಳುವಳಿ

ಸರ್ಕಾರದ ವೈಫಲ್ಯತೆ ಖಂಡಿಸಿ ಅ. 27ರಂದು ಜೈಲು ಭರೋ ಚಳುವಳಿ Condemnation of government failure

ವಿಜಯಪುರ 04: ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಸಾರ್ವಜನಿಕರಿಗೆ ವಿದ್ಯುತ್ತ ಸಂಪರ್ಕ ನೀಡುವಲ್ಲಿ ಕರ್ನಾಟಕ ಸರಕಾರ ವಿಫಲವಾಗಿದ್ದು ಹುಬ್ಬಳ್ಳಿಯ ಚನ್ನಮ್ಮ ಸರ್ಕಲನಿಂದ ಹೆಸ್ಕಾಂ ನಿಗಮ ಕಛೇರಿಯವರೆಗೆ ಸಾರ್ವಜನಿಕರೊಂದಿಗೆ ಸೇರಿ ದಿ. 27ರಂದು ಜೈಲು ಭರೊ ಚಳುವಳಿಯನ್ನು ಹಮ್ಮಿಕೊಳ್ಳಲಾಗುವದು. ದಿ. 16 ರಂದು ವಿಜಯಪುರ ನಗರದ ಬುದ್ಧ ವಿಹಾರದಿಂದ ಹೆಸ್ಕಾಂ ವಿಭಾಗೀಯ ಕಛೇರಿಯವರೆಗೆ ಪಾದಯಾತ್ರೆ ಮುಖಾಂತರ ಬಂದು ಇಂಧನ ಸಚಿವರ ಪ್ರತಿಕೃತಿ ದಹಿಸಿ ಇಂಧನ ಸಚಿವರು ಕರ್ನಾಟಕ ಸರಕಾರ ಬೆಂಗಳೂರು ಅವರಿಗೆ ವಿಜಯಪುರ ಅಪರ ಜಿಲ್ಲಾಧಿಕಾರಿ ಅವರ ಮೂಲಕ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ರೈತ ಭಾರತ ಪಕ್ಷ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ  ಬಿ. ಕೆಂಗನಾಳ ಮಾತನಾಡಿ, ಹೊಸ ಮನೆ ಕಟ್ಟಲು ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸುಪ್ರೀಂ ಕೋರ್ಟ್‌ 2024 ರಂದು ಆದೇಶಿಸಿದ್ದು ಅದನ್ನು ರಾಜ್ಯ ಸರ್ಕಾರ ಎಪ್ರಿಲ 2025 ರಂದು ಕೆ.ಇ.ಆರ್‌.ಸಿ, ಇಂದನ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಸೇರಿ ಜಂಟಿಯಾಗಿ ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನೀಡದೆ ಓ.ಸಿ. ಸಿ.ಸಿ. ಎಂಬ ನೆಪವನ್ನು ಹೇಳಿ ಸಾರ್ವಜನಿಕರಿಗೆ ತೊಂದರೆಕೊಡುತ್ತಿದ್ದಾರೆ, ಶೀಘ್ರವೇ ವಿದ್ಯುತ್ ಸಂಪರ್ಕ ಕೊಡುವ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು. ಒ. ಸಿ. ಹಾಗೂ ಸಿ. ಸಿ. ಸಲುವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕರಿಗೆ ಎಲ್ಲಾ ಮಾದರಿಯ ವಿದ್ಯುತ್ ಸಂಪರ್ಕವನ್ನು ನೀಡದೆ ಇರುವ ಸರಕಾರದ ನಡೆಯನ್ನು ಖಂಡಿಸಿದರು ಎಂದರು. ಕರ್ನಾಟಕ ರಾಜ್ಯದ ರೈತರ ಪಂಪ್ಪೆಟ್ಟುಗಳಿಗೆ ಸರ್ವಿಸ್ ಮೇನಗಳಲ್ಲಿ ಬರುವ ಸ್ಥಾವರಗಳಿಗೆ ದಂಡವನ್ನು ತುಂಬಿಸಿಕೊಳ್ಳದೆ ಡೆಪಾಸಿಟ್ ತುಂಬಿಸಿಕೊಂಡು ವಿದ್ಯುತ್ ಸಂಪರ್ಕವನು ನೀಡಬೇಕು ಎಂದರು.   

ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಡೆಪಾಸಿಟ್ ಹಣವನ್ನು ಎರಡು ಪಟ್ಟು ತುಂಬಿಸಿಕೊಳ್ಳುತ್ತಿದ್ದು ಮೊದಲಿನ ಹಾಗೆ ಮಾಡಬೇಕು. ಎ.ಎಸ್‌.ಡಿ ಹಣವನ್ನು ವಂದೇ ಹೆಡ್ಡಿನಲ್ಲಿ ಅಂದರೆ(48.101) ತುಂಬಿಸಿಕೊಳ್ಳಬೇಕು. ಕರ್ನಾಟಕ ರಾಜ್ಯದ ರೈತರು ತಮ್ಮ ಪಂಪಸೆಟ್ ವಿದ್ಯುತ್ ಸಂಪರ್ಕಕ್ಕಾಗಿ ಸ್ವಯಂ ಕಾರ್ಯನಿರ್ವಹಣೆ ಹಾಗೂ ಶೀಘ್ರ ಸಂಪರ್ಕ ಯೋಜನೆ ಅಡಿಯಲ್ಲಿ ವಿದ್ಯುತ್ ಪರೀವೀಕ್ಷಕರ ಶುಲ್ಕವನ್ನು ರೂ 3600 ರಿಂದ್ ರೂ 10400 ವರೆಗೆ ಜಾಸ್ತಿ ಮಾಡಿದ್ದು ಕೂಡಲೇ ಅದನ್ನು ಹಿಂಪಡೆದು ಮೊದಲಿನ ಹಾಗೆ ಮಾಡಬೇಕು. ಮಹದಾಯಿ ಹಾಗೂ ಕಳಸ ಬಂಡೂರಿ ಯೋಜನೆಯ ಜಾರಿ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ನಡೆಯನ್ನು ಖಂಡಿಸುವೆ ಎಂದರು. 

ಈ ಸಂದರ್ಭದಲ್ಲಿ ಸಿದ್ದಪ್ಪ ಪೂಜಾರಿ, ಮಲ್ಲಿಕಾರ್ಜುನ್ ಬಟಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.