ದತ್ತಾತ್ರೇಯ ಪಾಟೀಲ್ ವಿರುದ್ಧ ಎಫ್‌ಐಆರ್‌ಗೆ ಖಂಡನೆ
Condemnation of FIR against Dattatreya Patil
ಲೋಕದರ್ಶನ ವರದಿ
ಕಲಬುರಗಿ 05 : ಕೋಮು ಸೌಹಾರ್ದತೆಧಕ್ಕೆ ಹೆಸರಿನಲ್ಲಿ ರಾಜಕೀಯ ದುರುದ್ದೇಶದಿಂದ ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ್‌ರೇವೂರ(ಅಪ್ಪುಗೌಡ) ಅವರ ವಿರುದ್ಧ ಎಫ್‌ಐಆರ್‌ಗೆ ದಾಖಲಿಸಿರುವುದಕ್ಕೆ ಬಿಜೆಪಿ ಕಲಬುರಗಿ ದಕ್ಷಿಣ ಮಂಡಲ ಕಾರ್ಯದರ್ಶಿ ವೀರೇಶ್ ಪಡೋಲಕರ್ ತೀವ್ರವಾಗಿ ಖಂಡಿಸಿದ್ದಾರೆ.
ಜಿಪಂ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿರುವ ಅಪ್ಪುಗೌಡಅವರು, ಕಲಬುರಗಿ ದಕ್ಷಿಣ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಕೆಕೆಆರ್ ಡಿಬಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆದರೆಇವರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ.
ಇವರ ರಾಜಕೀಯ ವಿರೋಧಿಗಳು ನಾಲಾಯಕ್ ಪದ ಬಳಸಿ ತೇಜೋವಧೆ ಮಾಡಿ ಅಪಮಾನವೆಸಗಿರುವುದು ಶುದ್ಧ ತಪ್ಪು. ಕೂಡಲೇ ತೇಜೋವಧೆ ಮಾಡಿರುವವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಅಪ್ಪುಗೌಡರ ಮನೆತನವು ಸುಸಂಸ್ಕೃತ, ಸಂಸ್ಕಾರ ಭರಿತ ಆರೋಗ್ಯಕ ರರಾಜಕೀಯ ಮಾಡಿದವರು. ಆದರೆ ತಮ್ಮ ರಾಜಕೀಯ ಉದ್ದಕ್ಕೂ ಎಂದೆಂದಿಗೂ ಕ್ಷುಲ್ಲಕ ರಾಜಕೀಯ ಮಾಡಿದವರಲ್ಲ.
ಹೀಗಾಗಿ, ತಮ್ಮ ಅಧಿಕಾರಾವಧಿಯಲ್ಲಿ ಯಾರಿಗೂ ಹೀಯಾಳಿಸುವ ಕೆಲಸ ಮಾಡಿಲ್ಲ. ಬದಲಾಗಿ ಸರ್ವ ಸಮಾಜಗಳ ಸಂಕಷ್ಟಗಳಿಗೆ ಸ್ಪಂದಿಸುವ ಗುಣವುಳ್ಳವರಾಗಿದ್ದಾರೆ. ಅಪ್ಪುಗೌಡರ ಬೆನ್ನೆಲುಬು ಆಗಿ ಮರಾಠ ಸಮಾಜ ಅವರ ಬೆನ್ನಿಗೆ ನಿಂತು, ಸಂಪೂರ್ಣವಾಗಿ ಬೆಂಬಲಕ್ಕೆ ಬರಲಿದೆ.
ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಗುಲಬರ್ಗಾ ನಗರವನ್ನು ಮಿನಿ ಪಾಕಿಸ್ತಾನ ಮಾಡಲು ಯತ್ನಿಸಿದ್ದರು ಎಂಬ ಹೇಳಿಕೆ ಮುಂದಿಟ್ಟುಕೊಂಡು ಕೇಸ್ ಹಾಕಿರುವುದನ್ನು ಕೂಡಲೇ ಹಿಂಪಡೆಯಬೇಕು. ಒಂದು ವೇಳೆ ಎಫ್‌ಐಆರ್‌ಗೆ ರದ್ದುಪಡಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 