ಚಿತ್ರಕಲಾ ಶಿಲ್ಪಿ ಶ್ರೀ. ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
Concluding ceremony of the children's summer camp of the National Memorial Trust of Sri. D.V.H. Hala
ಧಾರವಾಡ 07: ಚಿತ್ರಕಲಾ ಶಿಲ್ಪಿ ಶ್ರೀ. ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ-2026 ನ್ನು ಒಂದು ತಿಂಗಳವರೆಗೆ ಆಯೋಜಿಸಿದ್ದು, ನಿನ್ನೆ (ಮೇ 6) ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡಿ, ದೀಪ ಬೆಳಗಿಸುವುದರ ಮೂಲಕ ಸಮಾರೋಪ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಕಲಾವಿದ ವಿಜಯ ರಾಮಚಂದ್ರ ದೊಂಗಡೆ ಅವರು ಮಾತನಾಡುತ್ತಾ, ಚಿಕ್ಕ ಮಕ್ಕಳಿಗಾಗಿ ಇಂತಹ ಕಾರ್ಯಕ್ರಮ ಮತ್ತು ಶಿಬಿರಗಳನ್ನು ಮೇಲಿಂದ ಮೇಲೆ ಆಯೋಜಿಸಬೇಕು ಅದರ ಜೊತೆಗೆ ಪಾಲಕರು ಕೂಡ ಮಕ್ಕಳಲ್ಲಿರುವ ಕಲೆಯನ್ನು ಹೊರತರುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಮನೆಯವರಿಂದ ಮಕ್ಕಳಿಗೆ ದಿನನಿತ್ಯ ಆಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದರು.
ಶಿಬಿರದ ಶಿಕ್ಷಕರಾದ ಮಾಧವಿ ಅವರು ಮಾತನಾಡುತ್ತಾ ಶಿಬಿರದಲ್ಲಿ ಚಿತ್ರವನ್ನು ರಚಿಸಲು ಬೇಕಾಗುವ ಸಾಮಗ್ರಿಗಳನ್ನು ಟ್ರಸ್ಟ್ ವತಿಯಿಂದ ಪೂರೈಸಿದ್ದು, ಇದು ಮಕ್ಕಳಲ್ಲಿ ಏಕರೂಪತೆ ಮೂಡಿಸಿತು ಮತ್ತು ಮಕ್ಕಳನ್ನು ಶಿಬಿರಕ್ಕೆ ಕಳಿಸುವಲ್ಲಿ ಪಾಲಕರ ಆಸಕ್ತಿ ಬಗ್ಗೆ ಮೆಚ್ಚಿ ಮಾತನಾಡಿದರು.
ಟ್ರಸ್ಟಿನ ಅಧ್ಯಕ್ಷ ಬಿ ಮಾರುತಿ ಅವರು ಶ್ರೀ ಡಿ.ವ್ಹಿ. ಹಾಲಭಾವಿ ಅವರಿಗೆ ಇದ್ದಂತಹ ಕಲಾಸಕ್ತಿಯ ಕುರಿತಾದ ಚಿಂತನೆಯನ್ನು ವಿವರಿಸುತ್ತಾ, ಅವರ ಅನಿಸಿಕೆಗಳನ್ನು ಸಾದರ ಪಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳು ಮತ್ತು ಶಿಬಿರವನ್ನು ಪ್ರತಿ ವರ್ಷ ಆಯೋಜಿಸುತ್ತಾ ಬಂದಿದೆ. ಈ ಶಿಬಿರದಲ್ಲಿ ಎಲ್ಲ ಮಕ್ಕಳು ತುಂಬಾ ಆಸಕ್ತಿಯಿಂದ ಚಿತ್ರವನ್ನು ರಚಿಸಿ ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ. ಇದೆ ರೀತಿ ಮುಂದಿನ ವರ್ಷವೂ ಸಹ ಶಿಬಿರದಲ್ಲಿ ಮಕ್ಕಳು ಭಾಗವಹಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಾಗೂ ಶಿಬಿರದಿಂದ ತಮಗಾದ ಅನುಭವಗಳನ್ನು ಹಂಚಿಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಅತಿಥಿ-ಗಣ್ಯರು ಹಾಗೂ ಟ್ರಸ್ಟ್ ಸದಸ್ಯರು ಪ್ರದಾನ ಮಾಡಿದರು.
ಸುರೇಶ ಹಾಲಭಾವಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹಾಲಭಾವಿ ಟ್ರಸ್ಟ್ ಕಾರ್ಯಕ್ರಮಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಬಿ.ಎಚ್.ಕುರಿಯವರ ಅವರು ಸ್ವಾಗತಿಸಿದರು. ಎಫ್. ವ್ಹಿ. ಚಿಕ್ಕಮಠ ನಿರೂಪಿಸಿದರು. ಮತ್ತು ಡಿ. ಎಂ. ಬಡಿಗೇರ್ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಎಸ್.ಕೆ ಪತ್ತಾರ, ಶಿಬಿರದ ಶಿಕ್ಷಕರಾದ ಸುಹಾನಿ ದುಂದುರ್, ಏ.ಜಿ.ಮಾಧವಿ ಹಾಗೂ ಹಿರಿಯ ಕಲಾವಿದರು ಹಾಗೂ ಕಲಾಸಕ್ತರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 