ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ: ತರಬೇತಿ ಕಾರ್ಯಾಗಾರ

ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ: ತರಬೇತಿ ಕಾರ್ಯಾಗಾರ  Comprehensive revision of voter list: Training workshop

ಬೆಳಗಾವಿ 19: ಮತದಾರರ ಪಟ್ಟಿ ತೀವ್ರ ಸಮಗ್ರ ಪರಿಷ್ಕರಣೆ (ಎಸ್‌.ಆಯ್‌.ಆರ್) ಕುರಿತಂತೆ ಜಿಲ್ಲಾಧಿಕಾರಿಗಳು ಬೆಳಗಾವಿ ಇವರು ಬೆಳಗಾವಿ ವಿಭಾಗದ ಎಲ್ಲ ಅಪರ ಜಿಲ್ಲಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ, ಚುನಾವಣಾ ತಹಶೀಲದಾರ ಹಾಗೂ ಟೆಕ್ನಕಲ್ ಪ್ರೋಗ್ರಾಮರ್‌ಗಳ ವಿಭಾಗ ಮಟ್ಟದ ಸಭೆಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್ ದಲ್ಲಿ ಏರಿ​‍್ಡಸಲಾಗಿತ್ತು. 

 ಕಾರ್ಯಾಗಾರವನ್ನು ಉದ್ಘಾಟಿಸಿ ಚುನಾವಣೆ ಹಾಗೂ ಮತದಾರರ ಪಟ್ಟಿ ತೀವ್ರ ಸಮಗ್ರ ಪರಿಷ್ಕರಣೆ (ಎಸ್‌.ಆಯ್‌.ಆರ್) ಕುರಿತಂತೆ ಭಾರತ ಚುನಾವಣಾ ಆಯೋಗ ನೀಡುವ ನಿರ್ದೇಶನಗಳನ್ನು ಪಾಲಿಸಿ ನಿಯಮಾನುಸಾರ ಸದರಿ ಪ್ರಕ್ರೀಯೆಯನ್ನು ಜರುಗಿಸಲು ಸೂಚಿಸಿ, ಬೆಳಗಾವಿ ಜಿಲ್ಲೆಯ  ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಮತಕ್ಷೇತ್ರಗಳಲ್ಲಿ  ಈಗಾಗಲೇ ಬಹು ನೋಂದಣಿಗಳನ್ನು ಮ್ಯಾಪಿಂಗ್ ಮಾಡಲಾಗಿದೆ.

ಇನ್ನೂ ಸಾಕಷ್ಟು ಜನ ಮ್ಯಾಪಿಂಗ್ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ ಬಾಕಿ ಮ್ಯಾಪಿಂಗ್ ಮತ್ತು ಮತದಾರ ಪಟ್ಟಿಯಲ್ಲಿ ಕೈಬಿಟ್ಟು ಹೋದ ವ್ಯಕ್ತಿಗಳನ್ನು ಕೂಡಲೇ ಸಮೀಕ್ಷೆ ಮೂಲಕ ಮತದಾರ ಪಟ್ಟಿಗೆ ಸೇರೆ​‍್ಡಗೊಳಿಸುವಂತೆ, ಯಾವೊಬ್ಬ ವ್ಯಕ್ತಿಯೂ ಮತದಾನ ಹಕ್ಕಿನಿಂದ ವಂಚಿತರಾಗಬಾರದು. ಮತದಾನವು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವ ಹಕ್ಕಾಗಿದ್ದು, ಎಲ್ಲರಿಗೂ ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಹಾಗೂ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಕಡ್ಡಾಯವಾಗಿ ಚಾಚು ತಪ್ಪದೇ ಪಾಲಿಸುವಂತೆ  ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಇವರು ಸೂಚಿಸಿದರು.   

ಈ ಕುರಿತು ಮತದಾರರ ಪಟ್ಟಿ ತೀವ್ರ ಸಮಗ್ರ ಪರಿಷ್ಕರಣೆ (ಎಸ್‌.ಆಯ್‌.ಆರ್) ಕುರಿತಂತೆ ಜಂಟಿ ಮುಖ್ಯ ಚುನಾವಣಾಧಿಕಾರಿ ಶ್ರೀ,ವಿ. ರಾಘವೇಂದ್ರ ಇವರು ನೀಡುವ ತರಬೇತಿಯನ್ನು ಪಡೆದು ಅದರಂತೆ ಕ್ರಮ ವಹಿಸಲು ತಿಳಿಸಿದರು.  

ಮುಂದುವರೆದು, ಜಂಟಿ ಮುಖ್ಯ ಚುನಾವಣಾಧಿಕಾರಿ ಶ್ರೀ,ವಿ. ರಾಘವೇಂದ್ರ ಇವರು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ದೋಷರಹಿವಾಗಿ ನಡೆಸಬೇಕು. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ಸಾಕಷ್ಟು ಬಾರಿ ಚುನಾವಣಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಉದಾಹರಣೆಗಳಿವೆ. ಆದ್ದರಿಂದ ಪ್ರತಿಯೊಬ್ಬರು ಜಾಗೃತೆಯಿಂದ ಕಾರ್ಯ ಚುನಾವಣಾ ಕರ್ತವ್ಯ ನಿರ್ವಹಿಸಬೇಕು   

ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರೆ​‍್ಡ ಹಾಗೂ ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕುರಿತು ಕ್ರಮ ವಹಿಸುವಂತೆ  ಗೈರು, ವಲಸೆ ಮತದಾರರ ಕುರಿತು ಪರೀಶೀಲಿಸಿ ಕ್ರಮ ವಹಿಸುವಂತೆ ಜಂಟಿ ಮುಖ್ಯ ಚುನಾವಣಾಧಿಕಾರಿ ವಿ. ರಾಘವೇಂದ್ರ ತಿಳಿಸಿದರು.  

ಅದೇ ರೀತಿಯಲ್ಲಿ ಕಾರ್ಯಾಗಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ, ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಮೃತ ಹಾಗೂ ನಕಲಿ ಮತದಾರರ ಹೆಸರು ಕೈಬಿಡುವ ವಿಧಾನ, ಆನ್ಲೈನ್ ಸೇವೆಗಳ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು.  ತರಬೇತಿಗೆ ಹಾಜರಾದ ಅಧಿಕಾರಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಜಂಟಿ ಮುಖ್ಯ ಚುನಾವಣಾಧಿಕಾರಿ ವಿ. ರಾಘವೇಂದ್ರ ಇವರಿಂದ ಪಡೆದುಕೊಂಡರು.   

ಸದರಿ ಕಾರ್ಯಾಗಾರದಲ್ಲಿ ಬೆಳಗಾವಿ ವಿಭಾಗದ ಎಲ್ಲ ಅಪರ ಜಿಲ್ಲಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ, ಚುನಾವಣಾ ತಹಶೀಲದಾರ ಹಾಗೂ ಟೆಕ್ನಕಲ್ ಪ್ರೋಗ್ರಾಮರ್ ಗಳು ಹಾಜರ ಇದ್ದರು ಬೆಳಗಾವಿ ಅಪರ ಜಿಲ್ಲಾಧಿಕಾರಿ, ವಿಜಯಕುಮಾರ ಹೊನಕೇರಿ,  ಇವರು  ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.