ಹಳಕಟ್ಟಿ ಪ್ರೌಢಶಾಲೆಗೆ ಸಮಗ್ರ ಶಿಕ್ಷಣ ಸಮನ್ವಯಾಧಿಕಾರಿ ಬೇಟಿಮಕ್ಕಳಲ್ಲಿ ಜ್ಞಾನ ಪಣತೆ ಬೆಳಗಿಸಿ: ಎಂ.ಎ.ಗುಳೇದಗುಡ್ಡ

ಹಳಕಟ್ಟಿ ಪ್ರೌಢಶಾಲೆಗೆ ಸಮಗ್ರ ಶಿಕ್ಷಣ ಸಮನ್ವಯಾಧಿಕಾರಿ ಬೇಟಿಮಕ್ಕಳಲ್ಲಿ ಜ್ಞಾನ ಪಣತೆ ಬೆಳಗಿಸಿ: ಎಂ.ಎ.ಗುಳೇದಗುಡ್ಡ Comprehensive Education Coordinator for Halakatti High School, enlighten the children with knowledge

ಹಳಕಟ್ಟಿ ಪ್ರೌಢಶಾಲೆಗೆ ಸಮಗ್ರ ಶಿಕ್ಷಣ ಸಮನ್ವಯಾಧಿಕಾರಿ ಬೇಟಿಮಕ್ಕಳಲ್ಲಿ ಜ್ಞಾನ ಪಣತೆ ಬೆಳಗಿಸಿ: ಎಂ.ಎ.ಗುಳೇದಗುಡ್ಡ 

ಆಲಮಟ್ಟಿ, 10 : ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರೇ ಆಧಾರಸ್ತಂಭ.ಗುರುಬಳಗವೇ ಸ್ಪೂತಿ9ದಾತರು.ಮೊಗ್ಗಿನ ಮನಸ್ಸುಗಳ ಶೈಕ್ಷಣಿಕ ಪ್ರಗತಿ ರೂಪಿಸುವಲ್ಲಿ ಗುರುದೇವೋಭವದ ಪಾತ್ರ ಹಿರಿದು ಎಂದು ಕನಾ9ಟಕ ಸಮಗ್ರ ಶಿಕ್ಷಣ ವಿಜಯಪುರ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಎಂ.ಎ.ಗುಳೇದಗುಡ್ಡ ಹೇಳಿದರು.   

  ಸ್ಥಳೀಯ ಎಸ್‌.ವಿ.ವಿ.ಸಂಸ್ಥೆಯ ಆರ್‌.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಗೆ ಅನೀರೀಕ್ಷಿತ ಬೇಟಿ ನೀಡಿ ಮಾತನಾಡಿದ ಅವರು, ವಿದ್ಯಾಥಿ9ಗಳಲ್ಲಿ ಅಕ್ಷರ ಪ್ರಕಾಶನದ ಜ್ಞಾನ ಜ್ಯೋತಿ ಬೆಳಗಲು ಗುಣಮಟ್ಟದ ಶಿಕ್ಷಣವೇ ಕಾರಣ ಎಂದರು.   

  ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವರನ್ನು ತಿದ್ದಿ,ತೀಡಿ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು. ಆ ದಿಸೆಯಲ್ಲಿ ಕಲಿಕಾಸಕ್ತಿಯಿಂದ ದೂರಿರುವ ಮಕ್ಕಳಲ್ಲಿ ಓದಾಸಕ್ತಿ- ಬರಹಾಸಕ್ತಿ ಮೂಡಿಸಿ ಪ್ರೋತ್ಸಾಹಿಸಬೇಕು. ಓದುವ ಹವ್ಯಾಸ ಹಾಗೂ ಬರವಣಿಗೆ ಕೌಶಲ್ಯ ಮೂಡಿಸಿದರೆ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ ಎಂದರು.  

  ನಿರಂತರ ಓದು,ಬರಹ ಅಭ್ಯಾಸದ ಅಭಿರುಚಿ ಮಕ್ಕಳಲ್ಲಿ ರೂಢಿಗತವಾದರೆ ಪಠ್ಯ ವಿಷಯದ ಜ್ಞಾಪಕ ಸ್ತುತಿ ವೃದ್ಧಿಸುತ್ತದೆ. ಮಕ್ಕಳ ಜ್ಞಾನ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳು ಒಳಗೊಂಡಂತೆ ಶಿಕ್ಷಕರು ತಮ್ಮ ವೃತ್ತಿಪರ ಕಾಯಕ ಉತ್ಕಟತೆಯ ಇಚ್ಛಾಶಕ್ತಿ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣದ ಗುರಿ ಪ್ರಗತಿಯಡೆಗೆ ಕೊಂಡೋಯ್ಯಬೇಕು. ಸಮಗ್ರ ಮಕ್ಕಳ ಶೈಕ್ಷಣಿಕ ಕಲಿಕೆ ಗುಣಾತ್ಮಕ ವಿಮರ್ಶೆಗಳೊಂದಿಗೆ ಸಾಗಬೇಕು.ಶಿಕ್ಷಣ ಆಶಯ ಈಡೇರಿಕೆಗೆ ಕೈಜೋಡಿಸಿ ಶ್ರಮಿಸಬೇಕು ಎಂದರು.  

  ಮಕ್ಕಳ ಬಗ್ಗೆ ಮುತುವರ್ಜಿ ಅಗತ್ಯ : ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಎಲ್ಲ ಶಿಕ್ಷಕರ ಪಾಠ ಪ್ರವಚನ ಬೋಧನಾ ಕೋಣೆಗಳಲ್ಲಿ ಬದ್ದತೆಯಿಂದ ರಚನಾತ್ಮಕವಾಗಿ ನಡೆಯಬೇಕು. ಅದರಲ್ಲೂ ಕಲಿಕೆಯಲ್ಲಿ ಅನಾಸಕ್ತಿ ತೋರುವ ಮಕ್ಕಳ ಮನ ಗೆಲ್ಲಲು ವಿಶೇಷ ಮುತುವರ್ಜಿ ವಹಿಸಬೇಕು. ಅಂಥ ಮಕ್ಕಳನ್ನು ಪ್ರೀತಿಯಿಂದ ಕಂಡು ಓದಾಭ್ಯಾಸದ ಒಲವು ಮೂಡಿಸಬೇಕು. ಕಲಿಕಾ ಹಿಂದುಳಿದ ಮಕ್ಕಳಲ್ಲಿ ಆತ್ಮಸ್ಥೈರ್ಯ ಜಾಗೃತಗೊಳಿಸಿ ವಿದ್ಯಾಸಕ್ತಿಯ ಕೌಶಲ್ಯ ಅರಳಿಸಬೇಕು. ಈಗಿಂದಲೇ ನಿತ್ಯ ನಾಲ್ಕೈದು ಪುಟಗಳ ಬರವಣಿಗೆಯ ಗ್ರಹಪಾಠ ನೀಡಿ ಅವರಿಂದಲೇ ಪದಗಳ ಲೋಪಗಳನ್ನು ಕಂಡು ಹಿಡಿಯಲು ಅವಕಾಶ ಕಲ್ಪಿಸಬೇಕು.ಆರಂಭದಲ್ಲಿ ಒಂದು ಪುಟ ಬರವಣಿಗೆಗೆ ತಗೆದುಕೊಂಡ ಸಮಯ, ಹತ್ತು ಹದಿನೈದು ದಿನಗಳ ನಂತರ ತಗೆದುಕೊಂಡ ಸಮಯ ಪ್ರತಿ ಪುಟದಲ್ಲಿ ನಮೂದಿಸಲು ಸೂಚಿಸಬೇಕು. ಓದು, ಬರಹ ಚೆನ್ನಾಗಿದ್ದರೆ ಮಾತ್ರ ಮಕ್ಕಳಲ್ಲಿ ವಿದ್ಯೆ ಪ್ರಗತಿ ಕಾಣಬಹುದು, ಜ್ಞಾನದ ಗದ್ದೆಯಾಗಿರುವ ಓದು ಬರಹ ಓರೆಗೆ ಹಚ್ಚುವ ಕಾಲಘಟ್ಟಯಿದು.ಇದು ಕಲಿಕೆಯ ಮಾನದಂಡವೂ ಆಗುತ್ತಿದೆ. ಕಾರಣ ಶಿಕ್ಷಕರ ಬೋಧನಾ ಚಿಂತನೆಗಳು ಬರೀ ಮಾತಿಗೆ ಮೀಸಲಾಗದೇ ಅವರ ಭಾವಕೋಶದಲ್ಲಿ ಉತ್ಕರ್ಷ ಸ್ಥಿತಿಯಲ್ಲಿ ಮೌಲ್ಯಯುತವಾಗಿರಬೇಕು.ಕಲಿಸುವಿಕೆ ಹಾಗೂ ಕಲಿಯುವಿಕೆಯ ಕಲಿಕಾಜ್ಞಾನ ಸದಾಚಾರದಿಂದ ನಡೆಯಬೇಕು. ಆ ದಿಸೆಯಲ್ಲಿ ಹೆಚ್ಚು ಹೆಚ್ಚು ಓದು,ಬರಹಕ್ಕೆ ಆದ್ಯತೆ ನೀಡಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಗುಣಾತ್ಮಕ ಫಲಿತಾಂಶ ಪಡೆಯಲು ಸಾಧ್ಯ ಎಂದರು.  

   ವಿದ್ಯಾರ್ಥಿಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಾಗಬೇಕು ಅಂದಾಗ ಶಾಲೆ ಫಲಿತಾಂಶ ಉತ್ತಮವಾಗಲು ಸಾಧ್ಯ. ಕಳೆದ ವರ್ಷ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಹಿನ್ನಡೆಯಾಗಿದೆ.ಈ ಬಾರಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಗಂಭೀರ ಚಿಂತನೆ,ಚಚೆ9 ಪ್ರತಿ ಶಾಲೆಯವರು ನಡೆಸಬೇಕು.ಕಳಪೆ ಫಲಿತಾಂಶ ಪಟ್ಟ ಕಳಚಲು ಸಂಕಲ್ಪ ಮಾಡಬೇಕು. ತಮ್ಮ ಶಾಲೆಗಳ ಫಲಿತಾಂಶ ಉತ್ತಮ ಪಡಿಸಲು ಈಗಿಂದಲೇ ನಿರಂತರ ಪ್ರಯತ್ನಿಸಬೇಕು. ಇವೆಲ್ಲವೂ ಶಿಕ್ಷಕರ ಬೋಧನೆ ರೀತಿ,ನೀತಿಗಳ ಮೇಲೆ ಅವಲಂಬಿತವಾಗಿವೆ.  

ಶಾಲೆಗಳ ಭವಿಷ್ಯವೂ ಇದರಲ್ಲಿ ಅಡಗಿವೆ ಎಂದು ಸೂಕ್ಷ್ಮವಾಗಿ ಎಂ.ಎ.ಗುಳೇದಗುಡ್ಡ ನುಡಿದರು.  ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಸಿಬ್ಬಂದಿ ಹಾಜರಾತಿ, ಪಠ್ಯ ಯೋಜನೆಯ ಮಕ್ಕಳ ಕಲಿಕಾ ಗುಣಮಟ್ಟ ಸೇರಿದಂತೆ ಶೈಕ್ಷಣಿಕ ಯೋಜನೆಗಳ ಅನುಷ್ಟಾನ ಪರೀಶೀಲಿಸಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಶಿಕ್ಷಣದ ಗುಣಮಟ್ಟ ಅರಿತರು. ಮಕ್ಕಳಿಗೆ ಪದಗಳ ವಾಕ್ಯಗಳನ್ನು ನೀಡಿ ಬರಹಗಳನ್ನು ಪರೀಶೀಲಿಸಿದರು.ಲೋಪಗಳನ್ನು ತಿದ್ದಿ ಹೇಳಿದರು.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ಕಾಳಜಿ ವಹಿಸಿ ಎಂದರು.ಪೋಷಕರೊಂದಿಗೆ ಸಮಾಲೋಚಿಸಿ ಮಕ್ಕಳ ಶೈಕ್ಷಣಿಕ ಚೈತನ್ಯಕ್ಕೆ ಮುನ್ನುಡಿ ಬರೆಯಿರಿ ಎಂದು ಶಿಕ್ಷಕರಿಗೆ ಪೂರಕ ಸಲಹೆ ಸೂಚನೆಗಳನ್ನು ನೀಡಿದರು.  

 ಫಸ್ಟ್‌ ಬೆಂಚ್, ಲಾಸ್ಟ್‌ ಬೆಂಚ್ ಸಮಸ್ಯೆ ಪರಿಹರಿಸಲು ಕೇರಳ ಮಾದರಿ ಕೊಠಡಿಯಲ್ಲಿನ ಬೆಂಚ್ ಗಳನ್ನು ವಿನ್ಯಾಸಗೊಳಿಸಬೇಕು ಎಂದು ಈ ಹಿಂದೆ ಅಧಿಕಾರಿಗಳಾದ ಎಂ.ಎ.ಗುಳೇದಗುಡ್ಡ ಅವರು ಶಾಲೆಗೆ ಭೇಟಿ ನೀಡಿದಾಗ ತಮಗೆ ಸಲಹೆ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳ ಕೊಠಡಿಯಲ್ಲಿ ಕಳೆದ ಮೂರು ತಿಂಗಳ ಹಿಂದೆಯೇ ಪ್ರಯೋಗ ಅನುಷ್ಠಾನಕ್ಕೆ ಬಂದಿದೆ. ಮಕ್ಕಳಲ್ವಿ ಬೆಂಚ್ ತಾರತಮ್ಯ ಭಾವನೆ ನೀಗಿಸಲು "ಗ" ಶೇಪ್ ನಲ್ಲಿ ಶಾಲೆಯ ಕ್ಲಾಸ್ ರೂಮ್ ನಲ್ಲಿ ಸೀಟಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.ಈ ನುಡಿಮಾತಿಗೆ ಎಂ.ಎ.ಗುಳೇದಗುಡ್ಡ ಮೆಚ್ಚುಗೆ ಸೂಚಿಸಿದರು. ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಶಿಕ್ಷಕರಾದ ಎನ್‌.ಎಸ್‌.ಬಿರಾದಾರ, ಎಸ್‌.ಎಚ್‌.ನಾಗಣಿ, ಜಿ.ಆರ್‌.ಜಾಧವ, ಆರ್‌.ಎಂ.ರಾಠೋಡ, ಎಂ.ಬಿ.ದಶವಂತ, ಎಲ್‌.ಆರ್‌.ಸಿಂಧೆ, ಶ್ರೀಧರ ಚಿಮ್ಮಲಗಿ, ಕರುಣಿಕ ಸತೀನ ಹೆಬ್ಬಾಳ ಇತರರಿದ್ದರು.