ಕಂಪ್ಲಿ ಯುವಕ ಕನಕಪುರಕ್ಕೆ ಗಡಿಪಾರು
Compliant youth exiled to Kanakapura
ಲೋಕದರ್ಶನ ವರದಿ
ಕಂಪ್ಲಿ ಯುವಕ ಕನಕಪುರಕ್ಕೆ ಗಡಿಪಾರು
ಕಂಪ್ಲಿ 03: ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಂದಿದ್ದ,ಪಟ್ಟಣದ ಎಂಡಿ ಕ್ಯಾಂಪ್ ನಿವಾಸಿ ಯುವಕನ್ನೊಬ್ಬನನ್ನು ಕಂಪ್ಲಿ ಪೊಲೀಸರು ರಾಮನಗರ ಜಿಲ್ಲೆ ಕನಕಪುರಕ್ಕೆ ಗಡಿಪಾರು ಮಾಡಿದ್ದಾರೆ.
22ನೇ ವಾರ್ಡಿನ ಎಂಡಿಕ್ಯಾಂಪ್ ನಿವಾಸಿ ಮುವತ್ತು ವರ್ಷದ ದೌಲಸಾಬ್ 2014 ರಲ್ಲಿ ಅಪ್ರಾಪ್ತ ದಲಿತ ಬಾಲಿಕೆ ಮೇಲೆ ಅತ್ಯಾಚಾರ ನೆಡೆಸಿದ್ದು,ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿ ಆರೋಪ ಸಾಬೀತಾಗಿ 2014 ರಿಂದ 2023ರವರೆಗೆ ಶಿಕ್ಷೆ ಅನುಭವಿಸಿ ಬಂದಿದ್ದನು.
ನಂತರ ಪಟ್ಟಣದಲ್ಲಿ ಅಲ್ಲಲ್ಲಿ ಪುಂಡಾಟಿಕೆ ನೆಡೆಸುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದನಲ್ಲದೇ 10-05-2025ರಂದು ಪಟ್ಟಣದ ಶಿಕಾರಿ ಕಾಲೋನಿಯ ಬಾಲಕನ ಮೇಲೆ ಹಲ್ಲೆ ನೆಡೆಸಿದ್ದು, ಈ ಬಗ್ಗೆ ಕಂಪ್ಲಿ ಠಾಣೆಯಲ್ಲಿ ವಿವಿಧ ಕಲಂನಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಈತನ ಚಡುವಟಿಕೆಯಲ್ಲಿ ಯಾವುದೇ ಬದಲಾವಣೆ ಕಾಣದೇ ಇದ್ದುದರಿಂದ , ಸಮಾಜದ ಸ್ವಾಸ್ಥ್ಯ ಕಾಪಾಡುವ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆಯಡಿಯಲ್ಲಿ ದೌಲಸಾಬನನ್ನು ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕಂಪ್ಲಿ ಪೊಲೀಸರು ಮನವಿ ಮಾಡಿದ್ದರು.
ಪೊಲೀಸರ ಮನವಿ ಪುರಸ್ಕರಿಸಿರುವ ಬಳ್ಳಾರಿ ಜಿಲ್ಲಾಧಿಕಾರಿಗಳು ಮೂರು ತಿಂಗಳ ಕಾಲ ದೌಲಸಾಬನನ್ನು ರಾಮನಗರ ಜಿಲ್ಲೆಯ ಕನಕಪುರಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೌಲಸಾಬನ ಮೇಲೆ ನಿಗಾ ಇರಿಸುವಂತೆ ಕನಕಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
03-ಕಂಪ್ಲಿ-02: ಕಂಪ್ಲಿಯಿಂದ ರಾಮನಗರ ಜಿಲ್ಲೆ ಕನಕಪುರಕ್ಕೆ ಗಡಿಪಾರಾದ ದೌಲಸಾಬ್.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 