ಗದಗ 21: ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಗದಗನ ನಗರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜ್ದಲ್ಲಿ ದಿ. 20ರಂದು ಸಂಜೆ. 6.00 ರಿಂದ ರಾತ್ರಿ 8.00ರವರೆಗೆ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಆನಂದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮಕ್ಕಳ ಕರೆಗಳನ್ನು ಸ್ವೀಕರಿಸಿ ಅವರಿಗೆ ಇಂಗ್ಲೀಷ್ ವಿಷಯದಲ್ಲಿ ಇರುವ ಕಲಿಕಾ ಸಮಸ್ಯೆಗಳನ್ನು ಕೇಳಿದರು ಮತ್ತು ಅವರಿಗೆ ಪರಿಹಾರವನ್ನು ತಿಳಿಸಿದರು. ನಂತರ ಅವರು ಕಲಿಕೆ ಮಾಡುತ್ತಿರುವ ವಿಧಾನದ ಬಗೆಗೆ ಕೇಳಿ ತಿಳಿದರು. ಉತ್ತಮ ಅಭ್ಯಾಸ ಮಾಡುವ ವಿಧಾನವನ್ನು ತಿಳಿಸಿದರು. ಅವರಿಗೆ ಕಠಿಣವೆನಿಸುತ್ತಿರುವ ವಿಷಯಗಳ ಬಗಗೆ ಕೇಳಿದರು. ಅಂತಹ ವಿಷಯಗಳ ಬಗೆಗೆ ನಿರ್ಲಕ್ಷ ಮಾಡದೆ ಪದೇ ಪದೇ ಹೆಚ್ಚು ಅಧ್ಯಯನ ಮಾಡಿ ಮನನ ಮಾಡಬಹುದೆಂದು ಡಾ. ಆನಂದ್ ಕೆ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ಎಚ್. ನಾಗೂರ ಅವರು ಎಲ್ಲರನ್ನು ಸ್ವಾಗತಿಸಿ ಎಸ್.ಎಸ್.ಎಲ್.ಸಿ.ಫಲಿತಾಂಶ ಸುಧಾರಣೆಗಾಗಿ ನಡೆಸಿದ ಫೋನ್ ಇನ್ ಕಾರ್ಯಕ್ರಮದ ಕುರಿತು. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್. ಎಸ್. ಕೆಳದಿಮಠ ಬಿಇಓ ಗದಗ ಶಹರ ಮುಳಗುಂದ ಮಠ ಬಿ.ಆರ್.ಸಿ.ಓ. ಗದಗ ಶಹರ ಮತ್ತು ನೋಡಲ್ ಆಧಿಕಾರಿಗಳು ಹಾಗೂ 8 ಜನ ಇಂಗ್ಲೀಷ್ ವಿಷಯದ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು. ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿದರು. ಒಟ್ಟು 124 ಪ್ರಶ್ನೆಗಳು ಬಂದಿದ್ದು ಅವುಗಳಿಗೆ ಉತ್ತರ ನೀಡಿದರು.
ವ್ಯಾಕರಣ ಸಂಬಂಧಿತ, ನಿಬಂಧ, ಪತ್ರ ಲೇಖನದ ವಿಧಾನ, ಇತರೆ ವ್ಯಾಕರಣ ಪ್ರಶ್ನೆಗಳು ಬಂದಿದ್ದವು. ಮೂರನೇ ಸುತ್ತಿನ ಮೊದಲ ಕಾರ್ಯಕ್ರಮ ಇದಾಗಿತ್ತು ಗದಗ ಶಹರ ತಾಲೂಕಿನ ತಂಡವು ನಡೆಸಿಕೊಟ್ಟಿತು. ಮುಂದಿನ ಶುಕ್ರುವಾರ ದಿ. 27ರಂದು ಸಾಯಂಕಾಲ: 6.00 ರಿಂದ 8.00ರವರೆಗೆ ಮುಂಡರಗಿ ತಾಲೂಕಿನವರು ಗಣಿತ ವಿಷಯದ ಬಗೆಗೆ ಪೋನ್ ಇನ್ ಕಾರ್ಯಕ್ರಮ ನಡೆಸಿಕೊಡುತ್ತದೆ. ಮಕ್ಕಳು ಪಾಲಕರು ತಮಗೆ ಇರುವ ಸದರಿ ವಿಷಯದ ಕಲಿಕಾ ತೊಂದರೆಗಳ ಬಗೆಗೆ ಕೇಳಲು ಕೋರಲಾಗಿದೆ. ಕೊನೆಗೆ ಬಿ.ಆರ್.ಸಿ. ಸಮನ್ವಯಾಧಿಕಾರಿಗಳಾದ ಮುಳಗುಂದಮಠ ರವರು ವಂದನಾರ್ಪಣೆ ಮಾಡಿದರು.