ಉದ್ಯಮಿಗೆ ಬೆದರಿಕೆವೊಡ್ಡಿದವನ ವಿರುದ್ಧ ದೂರು

 ಬೆಂಗಳೂರು, ಅ 14:     ಉದ್ಯಮಿಯೋರ್ವನಿಗೆ ಬೆದರಿಕೆಯೊಡ್ಡಿ 10 ಲಕ್ಷ ರೂಗೆ ಬೇಡಿಕೆ ಇಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ ರಾಜೀವ್ ಜೈನ್ ಎಂಬುವರಿಗೆ ಕೆ. ಚಂದ್ರಶೇಖರ್ ಎಂಬಾತ 10 ಲಕ್ಷ ರೂ ಹಣ ನೀಡದಿದ್ದರೇ, ಅವರ ವಿರುದ್ಧ ಐಟಿ, ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ  ಅವರನ್ನು ಸಿಲುಕಿ ಹಾಕಿಸುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಹುಣಸೂರಿನ ಕೆ. ಚಂದ್ರಶೇಖರ್ ವಿರುದ್ಧ ಉದ್ಯಮಿ ರಾಜೀವ್ ಜೈನ್, ನಗರದ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.