ಚಿತ್ರದುರ್ಗ,ಅ 13: ಶ್ರೀರಾಮುಲು ಉಪ ಮುಖ್ಯಮಂತ್ರಿ ಆಗಬೇಕೆಂಬು ದು ರಾಜ್ಯದ ಎಲ್ಲಾ ಸಮುದಾಯಗಳು,ಮಠಾಧೀಶರ ಆಶಯವಾಗಿತ್ತು.ಆದರೆ ಪಕ್ಷ ಮತ್ತು ಹೈಕಮಾಂಡ್ ಸಚಿವ ಸ್ಥಾನ ನೀಡಿದೆ ಹೀಗಾಗಿ ಅದನ್ನು ಪಕ್ಷದ ನಾಯಕರ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣಾ ಪೂರ್ವ ದಲ್ಲಿ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಹೇಳಿಕೆ ನೀಡಿದ್ದರು. ಆದರೆ ಸಂಪುಟ ರಚನೆಯಾದ ಬಳಿಕ ಆರೋಗ್ಯ ಇಲಾಖೆ ಸಚಿವ ಸ್ಥಾನ ನೀಡಿ ದ್ದಾರೆ. ರಾಜ್ಯದ ವಿವಿಧ ಸಮುದಾಯಗಳ ಮುಖಂಡರು,ಹಾಗೂ ಮಠಾಧೀಶರ ಆಶಯವಾಗಿತ್ತು ಎಂದು ಅವರು ತಮ್ಮ ಬಹಳ ದಿನಗಳ ಆಸೆಯನ್ನು ವ್ಯಕ್ತಪಡಿ ಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.ಅಧಿಕಾರ ಕಳೆದುಕೊಂಡು ಹತಾಶರಾಗಿ ತಮಗೆ ತಿಳಿದ ಹಾಗೇ ಮಾತನಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕಾರ್ಯ ಕೈಗೊಂಡಿದೆ. ಸಿದ್ಧರಾಮಯ್ಯ ಅವರಿಗೆ ಸರ್ಕಾರದ ಕಾರ್ಯ ಸಹಿಸಲಾಗುತ್ತಿಲ್ಲ.ಮತ್ತೆ ಅಧಿಕಾರ ಪಡೆಯಲು ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ಗೌರವ ಕೊಡುವ ಅವಶ್ಯಕತೆ ಇಲ್ಲ.ರಾಜ್ಯ ಸರ್ಕಾರಕ್ಕೆ ಸರ್ವಾಧಿಕಾರಿ ಧೋರಣೆ ಅನುಸರಿಸಿಲ್ಲ.ಅಧಿಕಾರ ಕಳೆದುಕೊಂಡ ಬಳಿಕ ಅವರು ನಮ್ಮ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ .ಪಂಚೇಂದ್ರಿಯ ಇಟ್ಟುಕೊಂಡು ಅವರೇನು ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಎಸ್.ಆರ್.ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದರು.
ಮಾಧ್ಯಮ ನಿರ್ಬಂಧ ವಿಚಾರದಲ್ಲಿ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ. ನಾವೆಲ್ಲರೂ ಇದ್ದರು ಮಾಧ್ಯಮ ನಿರ್ಭಂದ ವಿಚಾರ ಪ್ರಶ್ನಿಸಲಾಗುತ್ತಿ ಲ್ಲ.ಮಾಧ್ಯಮ ನಿರ್ಬಂಧ ಬಗ್ಗೆ ಸ್ಪೀಕರ್ ಅವರನ್ನೇ ಕೇಳಿದರೆ ಉತ್ತಮ ಎಂದು ಅವರು ಉತ್ತರಿಸಿದರು.