ಗದುಗಿನಲ್ಲಿ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಕಾಮನವೆಲ್ತ್ ದೇಶಗಳ ವಾಲಿಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿ
Commonwealth Volleyball Championship to be held in Gaduguri in September and October
ಗದಗ 03 : ಕಳೆದ 18 ದಿನಗಳ ಕಾಲ ನಡೆದ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಜನ್-2ರ ಕ್ರಿಕೆಟ್ ಪಂದ್ಯಾವಳಿ ಮನರಂಜನೆ ಮಾತ್ರವಲ್ಲ. ಕ್ರಿಕೆಟ್ ಆಟದಲ್ಲಿ ಗದುಗಿನ ಆಟಗಾರರು ಯಾವ ರೀತಿ ನೈಪುಣ್ಯತೆ ಹೊಂದಿದ್ದಾರೆಂದು ತೋರಿಸಿದ್ದೀರಿ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಜನ್-2ರ ಚಾಂಪಿಯನ್ ಎಲೈಟ್ ಇಲೆವೆನ್ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದ ಅವರು, ಒಂದೆಡೆ ಐಪಿಎಲ್ ಪಂದ್ಯಾವಳಿ ಅಬ್ಬರದಿಂದ ನಡೆಯುತ್ತಿದ್ದರೆ, ಗದುಗಿನಲ್ಲಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಯುತ್ತಿದ್ದರೂ ಗದುಗಿನ ಆಟಗಾರರು ಯಾವುದಕ್ಕೂ ಕಡಿಮೆ ಏನಿಲ್ಲ ಎನಿಸುತ್ತಿತ್ತು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಗದುಗಿನ ಆಟಗಾರರು ಬಹಳ ಉತ್ತಮ ದರ್ಜೆಯ ಆಟವನ್ನು ಪ್ರದರ್ಶನ ಮಾಡಿದ್ದು, ಖ್ಯಾತ ಕ್ರಿಕೆಟಿಗ ಸುನಿಲ್ ಜೋಶಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಈಗಾಗಲೇ 2030ರ ವೇಳೆಗೆ ಗದುಗಿನಲ್ಲಿ ರಣಜಿ ಪಂದ್ಯ ನಡೆಯಬೇಕು ಎನ್ನುವ ಸಂಕಲ್ಪ ಮಾಡಿದ್ದು, ಅದನ್ನು ಮತ್ತಷ್ಟು ಕಾರ್ಯಗತಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಗದಗ ಜಿಲ್ಲೆಯು ಕ್ರೀಡಾ ನಗರವಾಗಲು ಸ್ವಲ್ಪ ಹತ್ತಿರದಲ್ಲಿದ್ದು, ಮುಂದಿನ ದಿನಗಳಲ್ಲಿ ಕ್ರೀಡಾನಗರವನ್ನಾಗಿಸೋಣ. ಸೂಕ್ತ ತರಬೇತಿಗಾಗಿ ಸಿದ್ಧತೆ ಮಾಡಿಕೊಳ್ಳೋಣ ಎಂದರು.
ಮುಂದಿನ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಕಾಮನವೆಲ್ತ್ ದೇಶಗಳ ವಾಲಿಬಾಲ್ ಚಾಂಪಿಯನ್ಶಿಪ್ ನಡೆಸಲು ರಾಷ್ಟ್ರೀಯ ವಾಲಿಬಾಲ್ ಸಂಸ್ಥೆ ಇಚ್ಛಿಸಿದ್ದು, ನಿಮ್ಮೆಲ್ಲರ ಇಚ್ಛಾಶಕ್ತಿಯಿಂದ ನಡೆಯುವಂತಾಗಲಿ ಎಂದು ಹಾರೈಸಿದರು.ರಾಜ್ಯ ವೀಕೆಂದ್ರಿಕಾರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ. ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ನ ಸಂಘಟಿಕರಾದ ಕೃಷ್ಣಗೌಡ ಎಚ್. ಪಾಟೀಲ, ಸಚಿನ್ ಪಾಟೀಲ, ಸರ್ಫರಾಜ್ ಶೇಖ್, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಮಿಥುನ್ ಪಾಟೀಲ, ಅಕ್ಷಯ ಪಾಟೀಲ, ಅಶೋಕ ಮಂದಾಲಿ ಸೇರಿ 20 ತಂಡಗಳ ಮಾಲೀಕರು, ಕ್ರಿಕೆಟ್ ಅಭಿಮಾನಿಗಳು ಪಾಲ್ಗೊಂಡಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 