ಜನಸಾಮಾನ್ಯರು ಕನ್ನಡ ಕಟ್ಟವ ಕೆಲಸಕ್ಕೆ ಮುಂದಾಗಬೇಕು: ಮಂಜುಳಾ ದೇಗಿನಾಳ
Common people should take the lead in building Kannada: Manjula Deginala
ಜನಸಾಮಾನ್ಯರು ಕನ್ನಡ ಕಟ್ಟವ ಕೆಲಸಕ್ಕೆ ಮುಂದಾಗಬೇಕು: ಮಂಜುಳಾ ದೇಗಿನಾಳ
ಗದಗ 02 : ಕರ್ನಾಟಕ ಏಕೀಕರಣಗೊಂಡು 69 ವರ್ಷಗಳು ಪೂರ್ಣಗೊಂಡಿದ್ದು, ಎಲ್ಲ ಕಡೆ ಸುಖ ಶಾಂತಿ ನೆಲೆಸುವಂತಾಗಲಿ. ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಶಿವರಾಂ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ ಹೀಗೆ ಅನೇಕರು ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಹೇಳಿದರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳುಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚಿ ಚಾಲನೆ ನೀಡಿ ಮಾತನಾಡಿದ ಅವರು,ಪ್ರತಿಯೊಬ್ಬರು ದಿನನಿತ್ಯ ವ್ಯವಹಾರ ಮತ್ತು ಚಟುವಟಿಕೆಗಳನಲ್ಲಿ ಹೆಚೆಚ್ಚು ಕನ್ನಡ ಬಳಸುದರೊಂದಿಗೆ ಜನಸಾಮಾನ್ಯರೂ ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕು ಎಂದರು.ಕನ್ನಡ ನಾಡು-ನುಡಿ, ನೆಲ, ಜಲ, ಸಂಸ್ಕೃತಿ ಬಗೆಗೆ ಹೆಮ್ಮೆ ಮತ್ತು ಕಾಳಜಿ ತೋರಬೇಕು. ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಕನ್ನಡ ನಾಡು ಮುಂಚೂಣಿ ಸ್ಞಾನ ಗಿಟ್ಟಿಸಿಕೊಂಡಿರುವದು ಹೆಮ್ಮೆಯ ತಂದಿದೆ ಎಂದರು.ಉಪ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ, ವೀರಣ್ಣ ಅಂಗಡಿ, ವೆಂಕಟೇಶ ಆಕಳವಾಡಿ, ಸಾವಿತ್ರ ಮಲ್ಲಾಡದ, ಸೌಮ್ಯ, ಯಂಕಪ್ಪ ಗುಗ್ಗರಿ, ಸಿದ್ಧಲಿಂಗೇಶ ಯಂಡಿಗೇರಿ, ಮಂಜುನಾಥ ಪಾಮೇನಹಳ್ಳಿ, ವಾಣಿ ಮಾಂಡ್ರೆ ಸರೋಜ ಪಟ್ಟಣಶೆಟ್ಟಿ, ವಿದ್ಯಾ ಗದಗ, ಶ್ರೀದೇವಿ ಕಲಕೇರಿ, ಬಸವರಾಜ ಮೊರಬದ, ಜಾಫರ್ ನದಾಫ್, ಉಮೇಶ ಸಂದಿಮನಿ, ರವಿ ಜಾದವ, ಶಿವಕುಮಾರ ಸುಳ್ಳದ,ಶಿವರಾಜ ಕ್ಷತ್ರಿಯವರ, ಕುಮಾರ ಅರಿಸಿದ್ಧಿ ಮತ್ತಿತರರು ಪಾಲ್ಗೊಂಡಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 