ಜನತೆಗೆ ಮೂಲಸೌಕರ್ಯ ಒದಗಿಸಲೂ ಬದ್ಧ: ಶಾಸಕ ಮನಗೂಳಿ
ಇಂಡಿ 01: ತಾಲೂಕಿನ ಸುರಗಿಹಳ್ಳಿ ಗ್ರಾಮದ ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಬೆರಗಾಗಿದ್ದೇನೆ. ಜನತೆಗೆ ಮೂಲಸೌಕರ್ಯ ಒದಗಿಸಲೂ ಬದ್ಧನಾಗಿದ್ದೇನೆ. ಅವರ ಋಣ ಎಂದಿಗೂ ಮರೆಯೊಲ್ಲ. ನನ್ನ ಕೈಲಾದಮಟ್ಟಿಗೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಸುರಗಿಹಳ್ಳಿ, ತಾಂಬಾ, ಗೂಗಿಹಾಳ, ವಾಡೆ, ಬಂಥನಾಳ ಗ್ರಾಮಗಳ ಸಮಗ್ರ ಅಭಿವೃದ್ಧಿಯ ನನ್ನ ಕನಸಿಗೆ ಜನತೆ ಕೈಜೋಡಿಸಬೇಕು ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಸುರಗಿಹಳ್ಳಿ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಕಟ್ಟಡದ ಕಾಮಗಾರಿ ವೀಕ್ಷಣೆಮಾಡಿ ಮತ್ತು ಸಾರ್ವಜನಿಕರು ನೀಡಿದ ಸನ್ಮಾನ ಸ್ವಿಕರಿಸಿ ಮಾತನಾಡಿ ನನಗೆ ಹೆಚ್ಚಿನ ಮತಗಳನ್ನು ನೀಡಿ ಕೈ ಹಿಡಿದಿದ್ದು ಸುರಗಿಹಳ್ಳಿ ಗ್ರಾಮದ ಜನತೆ ನಿಮ್ಮ ಋಣವನ್ನು ನಾನೆಂದು ಮರೆಯಲಾರೆ. ಶಾಸಕ ಸ್ಥಾನಕ್ಕೇರಲು ಕಾರಣರಾದ ಕ್ಷೇತ್ರದ ಜನರ ಪ್ರೀತಿಗೆ ಪಾತ್ರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದರು.ಕಾಂತನಗೌಡ ಪಾಟೀಲ ಮಾತನಾಡಿ ಶಾಸಕ ಅಶೋಕ ಮನಗೂಳಿ ಅವರು ್ರಚಾರಿಪ್ರಯವಲ್ಲ. ರೈತರಿಗೆ, ಜನತೆಗೆ ಅನೇಕ ಯೋಜನೆ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿದಾರೆ. ಹಳ್ಳಿಗಳು ಈ ದೇಶದ ಸಂಪತ್ತು. ಹಳ್ಳಿಗಳು ಸುಧಾರಣೆಯಾದಲ್ಲಿ ಮಾತ್ರ ಮತಕ್ಷೇತ್ರ ಅಭಿವೃದ್ಧಿ ಸಾದ್ಯ, ಹಳ್ಳಿಗರ ಬದುಕು ನಿಜಕ್ಕೂ ದುಸ್ಥಿತಿಯಾಗಿದೆ ಪ್ರತಿ ಹಳ್ಳಿಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಸಿ ಅವುಗಳ ಅಭಿವೃದ್ಧಿ ಕಾಣುವುದೆ ಅವರ ಮೂಲ ಮಂತ್ರವಾಗಿದೆ. ಮತಕ್ಷೇತ್ರದ ಅನೇಕ ಹಳ್ಳಿಗಳು ಹಲವು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿವೆ ಹಳ್ಳಿಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ ಎಂದರು.ಚನ್ನಮಲಯ್ಯ ಹಿರೇಮಠ, ಪಂಚಯ್ಯ ಹಿರೇಮಠ, ಸಿದ್ದರಾಯ ಪವಾರ, ಕಾಸಪ್ಪ ಬಾಸಗಿ, ರಮೇಶ ಭಾಸಗಿ, ಸಿದ್ದಾರಾಮ ಪವರ, ಷಣ್ಮುಖ ದುರ್ಗದ, ಅಶೋಕ ಭಾಸಗಿ, ಗಡ್ಡೆಪ್ಪ ಹಿರೋಳಿ, ವಿಜು ಸೂರ್ಯವಂಶಿ, ರಜಾಕಸಾಬ ಚಿಕ್ಕಗಸಿ, ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ಸಿದ್ದು ಹತ್ತಳಿ, ಪರಸು ಬೀಸನಾಳ, ಶಾಂತಪ್ಪ ಹಂಚನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.