ನೌಕರರ ಹಿತ ಕಾಪಾಡಲು ಬದ್ಧ : ಬಾಬಾ ಸಾಹೇಬ ಪಾಟೀಲ

ನೌಕರರ ಹಿತ ಕಾಪಾಡಲು ಬದ್ಧ  : ಬಾಬಾ ಸಾಹೇಬ ಪಾಟೀಲ Committed to protecting the interests of employees: Babasaheb Patil

ನೌಕರರ ಹಿತ ಕಾಪಾಡಲು ಬದ್ಧ  : ಬಾಬಾ ಸಾಹೇಬ ಪಾಟೀಲ 

ಕಿತ್ತೂರು 03: ಕಿತ್ತೂರು ಮತ ಕ್ಷೇತ್ರದ ಶಾಸಕರು, ಶಿಕ್ಷಣ ಕ್ರಾಂತಿಯ ಹರಿಕಾರದ ಬಾಬಾಸಾಹೇಬ ಪಾಟೀಲ ರವರು ಇಂದು ನೇಗಿನಹಾಳದ ಗೃಹ ಕಚೇರಿಯಲ್ಲಿ ಜರುಗಿದ ಕಿತ್ತೂರು ತಾಲೂಕಾ ಶಿಕ್ಷಕರ ಹಾಗೂ ನೌಕರರ ಸಂಘಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ ಜರುಗಿತು ಶಿಕ್ಷಣ ಇಲಾಖೆಯ ನೌಕರರ ಸಂಘದ ನಿರ್ದೇಶಕರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು  ಕಿತ್ತೂರು ತಾಲೂಕಾ. ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಶಾಸಕರು 5 ಲಕ್ಷ  ರೂಗಳ ಅನುದಾನ ಬಿಡುಗಡೆ ಮಾಡಿದ ಪ್ರಯುಕ್ತ ನೌಕರರ ಸಂಘದ ಹಿಂದಿನ ಆಡಳಿತ ಮಂಡಳಿಯ ನಿಪೂ ಅಧ್ಯಕ್ಷರಾದ ಸಿದ್ದಣ್ಣ ಹುಲಮನಿ, ವಿ ಎಸ್ ಬರಗಾಲಿ, ಕೆ ಎ ಜಯಕ್ಕನವರ, ಕೆ ಜಿ ಗಡಾದ  ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಡಾ ಶೇಖರ ಹಲಸಗಿ  ಮನವಿ ಮೇರೆಗೆ  ಅನುದಾನ ನೀಡಿದ ಮಾನ್ಯ ಶಾಸಕರಾದ ಬಾಬಾಸಾಹೇಬ ಪಾಟೀಲ ರವರನ್ನು ಹಾಗೂ ಶ್ರೀಮತಿ ರೋಹಿಣಿತಾಯಿ ದಂಪತಿಗಳಿಗೆ ಸಮಸ್ತ ಕಿತ್ತೂರು ತಾಲೂಕಾ ಸರಕಾರಿ ನೌಕರರ ಮತ್ತು ಶಿಕ್ಷಕರ ಬಳಗದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.  

ಪ್ರತಿಕ್ರಿಯಿಸಿದ ಮಾನ್ಯ ಶಾಸಕರು  ವಗ್ಗಟ್ಟಿನಿಂದ ಕಾರ್ಯ ಮಾಡಿದರೆ  ತಾಲೂಕಿಗೆ ಹೆಚ್ಚು ಅನುದಾನ ತಂದು ಸಾರ್ವಜನಿಕ ಸೇವೆ ಮಾಡಲು ಅನುಕೂಲ ವಾಗುತ್ತದೆ.ಈ ಕಾರ್ಯದಲ್ಲಿ ಎಲ್ಲ ನೌಕರರ ವರ್ಗದವರು ಪ್ರಾಮಾಣಿಕ ಪ್ರಯತ್ನ ಮಾಡಲು ಕರೆ ನೀಡಿದರು. ಮುಬರುವ ಇನ್ನಷ್ಟು ಅನುದಾನ ನೌಕರರ ಭವನದ ಕಾರ್ಯಕ್ಕೆ ನೀಡುವುದಾಗಿ ಭರವಸೆ ನೀಡಿದರು . ಇದೆ ಸಂದರ್ಭದಲ್ಲಿ  ಕಿತ್ತೂರು ತಾಲ್ಲೂಕಿನ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆ ಯಾದ ಸಾಹಿತಿ ಶಿಕ್ಷಕರಾದ ಡಾ ಶೇಖರ ಹಲಸಗಿ ಯವರನ್ನು  ಸಮಸ್ತ ಗುರುಬಳಗದ ಪರವಾಗಿ ಶಾಸಕರಾದ ಬಾಬಾಸಾಹೇಬ ಪಾಟೀಲ ರವರು ಗೌರವಿಸಿ ಸನ್ಮಾನಿಸಿದರು.  

ಪ್ರಾರಂಭದಲ್ಲಿ  ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್ ಎಸ್ ಹುಲಮನಿ ಪ್ರಾಸ್ತವಿಕ ವಾಗಿ ಮಾತನಾಡಿದರು ಸಿದ್ದಯ್ಯ ಹಿರೇಮಠ ಪ್ರಾರ್ಥಿಸಿದರು, ಎನ್ ಪಿ ಎಸ್ ಕಾರ್ಯದರ್ಶಿ ರೂಮೋಜಿ  ನಿರೂಪಿಸಿದರು ಶ್ರೀಮತಿ ಎಂ ಕೆ ಸೂಡಿ, ವೀಣಾ ಹಿರೇಮಠ, ಶ್ರೀಮತಿ. ಜುಟ್ಟನವರ, ಶ್ರೀಮತಿ ತಾವಲಗಿ, ಬಾಬು ಹಿರೇಮಠ, ಎಸ್ ಎಸ್ ಪಾಟೀಲ, ಈರಣ್ಣ ಮಜ್ಜಗಿ, ರಾಜು ಮೆಳದ, ಜಿ ಜಿ ತಳವಾರ, ಬಿ ಡಿ ಹಾಲಿಗೆಪ್ಪನವರ, ಶೌಕತ,ನದಾಪ, ವಿಠ್ಠಲ ನನ್ನೊರ, ರಾಘವೇಂದ್ರ ಮುಂಡೇವಾಡಿ,ಮಂಜು ಶಟನ್ನವರ, ಎಚ್ ಎಸ್ ಪಾಟೀಲ್ , ಉಮೇಶ್ ಹಿರೇಮಠ, ಎಂಬತ್ತಕ್ಕೂ ಹೆಚ್ಚು ಶಿಕ್ಷಕರು ನೌಕರರ. ವರ್ಗದವರು ಉಪಸ್ಥಿತರಿದ್ದರು.