ಶೀಘ್ರ ರಾಜ್ಯಗಳಲ್ಲಿ ವಾಣಿಜ್ಯ ಚಟುವಟಿಕೆ ಸಹಜ ಸ್ಥಿತಿಗೆ : ಟ್ರಂಪ್ ಆಶಯ

ವಾಷಿಂಗ್ಟನ್, ಎಪ್ರಿಲ್ 15,  ಕರೋನ  ಸೊಂಕಿನ ಕಾರಣದಿಂದ ಸ್ಥಗಿತವಾಗಿರುವ   ಅಮೆರಿಕದ ಕೆಲವು ರಾಜ್ಯಗಳಲ್ಲಿ ಮೇ 1 ರ ಮೊದಲು ಪರಿಸ್ಥಿತಿ  ಸಧಾರಿಸಿ , ವಾಣಿಜ್ಯ ಚಟುವಟಿಕೆ ಸಹಜ ಸ್ಥತಿಗೆ ಮರಳಲಿದೆ  ಎಂಬ  ಆಶಯವನ್ನು ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ವ್ಯಕ್ತಪಡಿಸಿದ್ದಾರೆ. "ಇದು ಬಹಳ ಹತ್ತಿರದಲ್ಲಿದೆ, ಬಹುಶಃ ಮೇ 1 ರ ದಿನಾಂಕಕ್ಕಿಂತ ಮುಂಚೆಯೇ, ಅದು ಕೆಲವು ರಾಜ್ಯಗಳಲ್ಲಿ ಜನಜೀವನ ಮೊದಲಿನಂತೆ ಚಲಿಸಲಿದೆ ದೇಶದ  ಆರ್ಥಿಕ ಚಟುವಟಿಕೆ ಮತ್ತೆ  ಪುನರಾರಂಭಗೊಳ್ಳುವ   ಯೋಜನೆಗಳ ಬಗ್ಗೆ ಟ್ರಂಪ್ ಮುನ್ಸೂಚನೆ ನೀಡಿದರು. ದೇಶದ  ಆರ್ಥಿಕತೆಯನ್ನು ಪುನಃ ತೆರೆಯುವ ಯೋಜನೆಗಳನ್ನು ಅಂತಿಮಗೊಳಿಸಲು ಟ್ರಂಪ್  ಆಡಳಿತ ಈ ವಾರದಲ್ಲಿ ಎಲ್ಲಾ ಗೌರ್ನರ್ ಜೊತೆ  ವಿವರಗಳನ್ನು ಚರ್ಚಿಸಲಿದೆ ಎಂದೂ  ಅಧ್ಯಕ್ಷರು ಹೇಳಿದರು. ಪ್ರತಿ ರಾಜ್ಯದ ಗೌರ್ನರ್ ಗಳು  ಸೂಕ್ತವಾದಾಗ ತಮ್ಮ ರಾಜ್ಯಗಳಲ್ಲಿ  ವಾಣಿಜ್ಯ ಚಟುವಟಿಕೆ  ತೆರೆಯುವ ಯೋಜನೆಯನ್ನು ಜಾರಿಗೆ ತರಲು ಅಧಿಕಾರ ನೀಡಲಾಗುವುದು ಎಂದು ಟ್ರಂಪ್ ಹೇಳಿದರು.ಈ ನಡುವೆ ಮಂಗಳವಾರದ ವೇಳೆಗೆ ದೇಶದಲ್ಲಿ  598,000 ಕ್ಕೂ ಹೆಚ್ಚು ಕರೋನ  ಪ್ರಕರಣಗಳನ್ನು ದೃಡಪಟ್ಟಿದ್ದು, 25,ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರ ತಿಳಿಸಿದೆ.