ಒಳ ಮೀಸಲಾತಿ ಜಾರಿಗಾಗಿಆ 18 ಕ್ಕೆ ಬೆಂಗಳೂರು ಚಲೋ: ಮಾದಿಗ ದಂಡೋರ
Come to Bengaluru on August 18 to implement internal reservation: Madiga Dandora
ಒಳ ಮೀಸಲಾತಿ ಜಾರಿಗಾಗಿಆ 18 ಕ್ಕೆ ಬೆಂಗಳೂರು ಚಲೋ: ಮಾದಿಗ ದಂಡೋರ
ಬಳ್ಳಾರಿ 05: ರಂದು ಇತರೇ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಕೂಡಲೇ ಸುಪ್ರಿಂ ಕೋರ್ಟಿನ ಆದೇಶದಂತೆ ಒಳ ಮೀಸಲಾತಿಯನ್ನು ಜಾರಿಗೆ ತನ್ನಿ ಎಂದು ಆ.18 ಕ್ಕೆ ಬೆಂಗಳೂರು ಚಲೋ ನಡೆಸಲಿದೆಂದು ಮಾದಿಗ ದಂಡೋರ ಹೇಳಿದೆ.ಸಂಘಟನೆಯ ಜಿಲ್ಲಾ ಅಧ್ಯಕ್ಷ ಎ. ನೆಟ್ಟಪ್ಪ, ರಾಜ್ಯ ಉಪಾಧ್ಯಕ್ಷ ಎ.ಕೆ.ಹುಲುಗಪ್ಪ, ದುರ್ಗಪ್ಪ ತಳವಾರ್ ಮೊದಲಾದವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ. ಒಳ ಮೀಸಲಾತಿ ಹೋರಾಟಕ್ಕಾಗಿ ಜೀವನವನ್ನೇ ಮುಡುಪಿಟ್ಡ ಮಂದಕೃಷ್ಣ ಈ ಹೋರಾಟಕ್ಕೆ ಆಗಮಿಸಲಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಸಾಮಾಜಿಕ ನ್ಯಾಯಾಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿಯನ್ನು ಕಳೆದ 30 ವರ್ಷಗಳಿಂದ ಮಾದಿಗ ದಂಡೋರ ರಾಜ್ಯದಲ್ಲಿ ಅನೇಕ ಕ್ರಾಂತಿಕಾರಿ ಹೋರಾಟಗಳನ್ನು ನಡೆಸಿದೆ. ಅದರಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಹೋರಾಟಕ್ಕೆ ಜಿಲ್ಲೆಯ ನೂರಾರು ಜನತೆ ಆಗಮಿಸಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ದಾನಪ್ಪ ಗುತ್ತೇವಾರು,ವೀರ ಸ್ವಾಮಿ, ಗಂಗಾಧರ ಸಂಗನಕಲ್ಲು, ಮಲ್ಲಿಕಾರ್ಜುನ ಜಾಲಿಹಾಳ,ದುರ್ಗೇಶ, ಗಂಗಾಧರ ಇಂದ್ರಾನಗರ್, ಸುಂಕಪ್ಪ, ವಿಜಯಕುಮಾರ್, ಎರಿಸ್ವಾಮಿ, ಆರ್ ಶಿವಶಂಕರ್ ಹೊಸಯರ ಗುಡಿ ಮೊದಲಾದವರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 