ಆಗಸ್ಟ್ 17 ರಂದು ನಮ್ಮೂರ ಮಸೀದಿ ನೋಡಬನ್ನಿ
Come and see our mosque on August 17th
ಬಳ್ಳಾರಿ 14 : ರಂದು ನಗರದ ಜಾಗೃತಿ ನಗರ, ಕೌಲ್ ಬಜಾರ್ ಬಳ್ಳಾರಿಯಮಸ್ಟಿದ್-ಎ-ಅಬ್ದುತ್ತವ್ವಾಬ್ ಅಹ್ಲೆ ಹದೀಸ್ ಮಸೀದಿಯಲ್ಲಿನಮ್ಮೂರ ಮಸೀದಿ ನೋಡ ಬನ್ನಿಸಂದರ್ಶನ ಕಾರ್ಯಕ್ರಮ ಆಗಸ್ಟ್ 17ರಂದು ಬೆಳಿಗ್ಗೆ 10:00 ರಿಂದ ಸಂಜೆ 7:00 ರವರಿಗೆ ಸರ್ವಧರ್ಮಿಯರ ಸಂದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.\
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾನಾಡಿದ ಅವರು, ಮಾನವೀಯ ಮನೋಭಾವವನ್ನು ಎತ್ತಿ ಹಿಡಿಯುವ, ಪರಸ್ಪರ ಪ್ರೀತಿ ಮತ್ತು ಸಹೋದರತೆಯ ಬ್ರಾತೃತ್ವ ಸಂದೇಶವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಸರ್ವ ಧರ್ಮಿಯ ಸ್ತ್ರೀ ಪುರುಷರಿಗೆ ಅವಕಾಶವಿರುತ್ತದೆ.ಆತ್ಮೀಯ ಬಾಂಧವರೆ ನಮ್ಮ ಸಮಾಜದ ಶಾಂತಿ ಹಾಗೂ ಸಹಬಾಳ್ವೆಯ ಸಂಬಂಧಗಳನ್ನು ಬಲಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಸೀದಿಯೊಳಗಾಗುವ ಕಾರ್ಯಕ್ರಮಗಳನ್ನು ಪರಿಚಯಿಸಲು, ಸೌಹಾರ್ದತೆ ಹಾಗೂ ಏಕತೆಯ ವಾತಾವರಣವನ್ನು ನಿರ್ಮಾಣ ಮಾಡಲು ಈ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ತಮ್ಮ ಬಂಧು-ಬಳಗದೊಂದಿಗೆ ಭಾಗವಹಿಸಬೇಕೆಂದು ಈ ಸಂರ್ಭದಲ್ಲಿ ಸಾರ್ವಜನಿಕರಿಗೆಮನವಿ ಮಾಡಿದರು.ಈ ಪತ್ರಿಕಾಗೋಷ್ಟಿಯಲ್ಲಿ ತೌಹೀದ್ ಭಾಷಾ, ನಿಸಾರ್ ಅಹಮದ್, ಮುನಿರ್, ಅಹಮದ್ , ಅಕ್ರಮ್, ಉಮರ್, ಇಮ್ರಾನ್, ನೂರುಲ್ಲ, ಇಲ್ಯಾಸ್ ಖಾನ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 