ಬಣ್ಣಗಳ ದಿನ ವಿದ್ಯಾರ್ಥಿಗಳಿಗೆ ಒಂದು ಮನರಂಜನೆ: ಡಾ. ಪೂಜಾರ
Colors Day is an entertainment for students: Dr. Pujara
ಸಿಂದಗಿ 29: ಶಾಲೆಗಳು ಸಾಮಾನ್ಯವಾಗಿ ಬಣ್ಣಗಳ ದಿನವನ್ನು ಕಿರಿಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶ್ರೇಣಿಗಳ ವಿದ್ಯಾರ್ಥಿಗಳಿಗೆ ಒಂದು ಮನರಂಜನೆ ಮತ್ತು ಶೈಕ್ಷಣಿಕ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂದು ಕ್ರಿತಯೇಟಿವ್ ಕಿಡ್ಸ್ ಹೋಮ್‌ನ ಮುಖ್ಯಗುರುಮಾತೆ ಡಾ.ಜ್ಯೋತಿ ಪೂಜಾರ ಹೇಳಿದರು.
ಪಟ್ಟಣದ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಬಣ್ಣಗಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದ ಶಿಕ್ಷಣದಲ್ಲಿ ಬಣ್ಣಗಳ ದಿನವನ್ನು ಆಚರಿಸುವುದರಿಂದ ಮಕ್ಕಳಿಗೆ ಹಲವಾರು ಬೆಳವಣಿಗೆಯ ಪ್ರಯೋಜನಗಳಿವೆ. ಇದು ಬಣ್ಣ ಗುರುತಿಸುವಿಕೆ, ಅರಿವಿನ ಕೌಶಲ್ಯಗಳು, ಸೃಜನಶೀಲತೆ ಮತ್ತು ಸಂವೇದನಾ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಸಾಮಾಜಿಕ ಸಂವಹನ ಮತ್ತು ಭಾಷಾ ಕೌಶಲ್ಯಗಳನ್ನು ಬೆಳೆಸುತ್ತದೆ. ಬಣ್ಣಗಳ ದಿನದೊಂದಿಗೆ ಸಂಬಂಧಿಸಿದ ಮೋಜಿನ ಮತ್ತು ಆಕರ್ಷಕ ಚಟುವಟಿಕೆಗಳು ಚಿಕ್ಕ ಮಕ್ಕಳಿಗೆ ಕಲಿಕೆಯನ್ನು ಆನಂದದಾಯಕ ಮತ್ತು ಸ್ಮರಣೀಯವಾಗಿಸುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು, ಅದೇ ಬಣ್ಣದ ಮಾದರಿಗಳನ್ನು ತಂದು ಅದರ ಬಗ್ಗೆ ವಿವರಿಸಿ ಸಂಭ್ರಮಿಸಿದರು.
ಸಂಸ್ಥೆ ಅಧ್ಯಕ್ಷ ರಮೇಶ ಪೂಜಾರ, ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಲಾ ಬಮ್ಮಣ್ಣಿ, ಸಾದನಾ ಇಮಡೆ, ದಾನಮ್ಮ ಕೋರಿ, ಪ್ರೀಯಾ ಪವಾಡೆ, ರೇವತಿ ಬಳೂಂಡಗಿ, ಸುಸ್ಮಿತಾ ಕೋರಿ, ಅಕ್ಷತಾ ಹುಮನಾಬಾದ, ಸಿಬ್ಬಂದಿಗಳಾದ ಆನಂದಯ್ಯಸ್ವಾಮಿ ಹಿರೇಮಠ, ಅಂಬಿಕಾ ಕರಿಶೆಟ್ಟಿ, ಹೇಮಾ ಬಡಿಗೇರ, ರೆಹಮತಬಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 