ಯುಗಾದಿ ಹೋಕುಳಿಯಲ್ಲಿ ಬಣ್ಣ ಬಣ್ಣದ ಕಲರವ
Colorful celebrations at Ugadi Hokuli
ಲೋಕದರ್ಶನ ವರದಿ
ಕಂಪ್ಲಿ 20: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಯುಗಾದಿ ಹಬ್ಬದ ಮರುದಿನವಾದ ಶುಕ್ರವಾರದಂದು ಬಣ್ಣ ಬಣ್ಣ ಹೋಕಳಿಯೊಂದಿಗೆ ಮಕ್ಕಳು, ಯುವಕರು ಸಂಭ್ರಮಿಸಿದರು. ಇಲ್ಲಿನ ಪಟ್ಟಣದ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನ ಬಳಿಯಲ್ಲಿರುವ ಕೊರವರ ಓಣಿಯಲ್ಲಿ ಹೆಣ್ಮಕ್ಕಳು ರಂಗು ರಂಗಿನ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಅಕ್ಕಪಕ್ಕದಲ್ಲಿ ಮಕ್ಕಳು ಜೊತೆಗೆ ವಿವಿಧ ತರನಾದ ಬಣ್ಣವನ್ನು ಪರಸ್ಪರ ಹಚ್ಚಿಕೊಂಡು ಸಂಭ್ರಮದಲ್ಲಿ ತೇಲಾಡಿದರು. ಹೊಸ ಚಿಗುರು ಎಂಬಂತೆ ಯುಗಾದಿ ಹಬ್ಬವನ್ನು ಇಂದಿನಿಂದ ವರ್ಷದಂತೆ ಆಚರಣೆಯೊಂದಿಗೆ ಮರು ದಿನದಲ್ಲಿ ಬಣ್ಣದಾಟವಾಡುತ್ತಾ ಬಂದಿರುವುದು ಕಂಡು ಬಂತು. ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿಯೂ ಹಾಗೂ ಗ್ರಾಮೀಣ ಭಾಗದಲ್ಲಿ ಬಣ್ಣ ಬಣ್ಣದ ಸೊಗಡು ಕಾಣಿಸಿಕೊಂಡಿತು. ಬಣ್ಣದ ಹೋಕುಳಿ ನಂತರ ಪಕ್ಕದ ನದಿ, ಕಾಲುವೆಗಳಿಗೆ ತೆರಳಿ, ಸ್ನಾನ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 