ಮಠದ ಅಂಗಳದಲ್ಲಿ ತೇಲಾಡಿದ ಬಣ್ಣ ಬಣ್ಣದ ಪಟಗಳು
Colorful banners floated in the courtyard of the monastery
ಮಠದ ಅಂಗಳದಲ್ಲಿ ತೇಲಾಡಿದ ಬಣ್ಣ ಬಣ್ಣದ ಪಟಗಳು
ಕೊಪ್ಪಳ 17: ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಠದ ಆವರಣದ ಮೈದಾನದಲ್ಲಿ ಅತ್ಯಾಕರ್ಷಕ ಗಾಳಿಪಟಗಳ ಪ್ರದರ್ಶನ ನಡೆಯಿತು. ಗವಿಮಠದ ಅಂಗಳದಲ್ಲಿನ ಗಾಳಿಯಲ್ಲಿ ತೇಲಾಡುವ ಹತ್ತು ಹಲವು ಬಣ್ಣ ಬಣ್ಣದ ಪಟಗಳು ಜಾತ್ರೆಯಲ್ಲಿ ಸೇರಿದ ದೊಡ್ಡವರ ಹಾಗೂ ಚಿಕ್ಕ ಮಕ್ಕಳ ಮತ್ತು ಜಾತ್ರೆಗೆ ಆಗಮಿಸಿದ ಭಕ್ತರ ಮನಸ್ಸಿಗೆ ಸಂತಸದ ಕ್ಷಣಗಳನ್ನು ತಂದಿತು.
ಬೆಳಗ್ಗೆ 11ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆದ ಗಾಳಿಪಟ ಪ್ರದರ್ಶನದಲ್ಲಿ ಬೆರೇ ರಾಜ್ಯದ ಕೇರಳ, ಗುಜರಾಜ, ಒರಿಸ್ಸಾ ಮತ್ತು ಕರ್ನಾಟಕದ ದೊಡ್ಡಬಳ್ಳಪುರ ಹಾಗೂ ಬೆಂಗಳೂರಿ ಹವ್ಯಾಸಿ ಗಾಳಿಪಟ ಪ್ರದರ್ಶನ ತಂಡಗಳು ಭಾಗವಸಿದ್ದರು. ಸಾಲುಪಠ, ರಿಂಗ್, ಡ್ರಾಗನ್, ಅಕ್ಟೋಪಸ್, ಸ್ಟಂಟ್ ಕ್ಯ್ರಾಕ್, ಪೈಲೆಟ್, ಹುಲಿ, ಚಿರತೆ, ಬಾತುಕೋಳಿ ಮುಂತಾದ ಗಾಳಿಪಟಗಳು ಗಾಳಿಯಲ್ಲಿ ತೇಲಾಡುತ್ತ ನೈಜತೆಯಂತೆ ಗೋಚರಿಸಿ ನೋಡುಗರಿಗೆ ಆತ್ಯಾಕರ್ಷಕವಾಗಿ ಕಂಡುಬಂದವು. ಗಾಳಿಪಟ ಪ್ರದರ್ಶನವು ಈ ವರ್ಷದ ಜಾತ್ರಾ ಮಹೋತ್ಸವದ ಆಕರ್ಷಣೆಗಳಲ್ಲಿ ಒಂದಗಿದೆ ಎಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 