ವಸಾಹತುಶಾಹಿ ಎಂಬುದು ದೇಶದ ಅಭಿವೃದ್ಧಿಗೆ ಮಾರಕ: ನಾಡೋಜ ಡಾ. ಮನು ಬಳಿಗಾರ
ಬೆಳಗಾವಿ 28: ವಸಾಹತುಶಾಹಿ ಎಂಬುದು ದೇಶದ ಅಭಿವೃದ್ಧಿಗೆ ಮಾರಕ. ಹಣ ರಾಜನೀತಿ ಶಕ್ತಿಗಳು ಓದ್ಯೋಗಿಕ ಸಣ್ಣ ಗುಡಿ ಕೈಗಾರಿಕೆಗಳು, ವ್ಯಾಪಾರಿಗಳು, ಕುಗ್ಗಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಣಿಚನ್ನಮ್ಮ ಬ್ರಿಟಿಷರ ಪರಮಾಧಿಕಾರವನ್ನು ಧಿಕ್ಕರಿಸಿ ಶಸತ್ರ ಪ್ರತಿರೋಧವನ್ನು ನಡೆಸಿದಳು. ಇದು ವಸಾಹತುಶಾಹಿ ವಿರುದ್ಧ ಮೊದಲ ಪ್ರತಿಕ್ರಿಯೆಯಾಗಿದ್ದು ವಿಶೇಷ ಎಂದು ನಾಡೋಜ ಡಾ. ಮನು ಬಳಿಗಾರ ನುಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಣಿ ಚನ್ನಮ್ಮ ಅಧ್ಯಯನ ಪೀಠ “ರಾಣಿ ಚನ್ನಮ್ಮನ ವಸಾಹತುಶಾಹಿ ವಿರೋಧಿ ನಿಲುವುಗಳ ಇಂದಿನ ಅಗತ್ಯತೆಗಳು. ಕುರಿತ ಆಯೋಜಿಸಲಾಗಿದ್ದ ಒಂದು ದಿನದ ವಿಚಾರಣ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂರ್ವ ಹಿನ್ನೆಲೆ ಕುರಿತು ಹಾಗೂ ಪ್ರಪಂಚದ ವಸಾಹತು ನೀತಿ ಸಾಮ್ರಾಜ್ಯ ವಿಸ್ತಾರ ಯುದ್ಧ ಪರ ವಿರೋಧ ವಾದಗಳ ಕುರಿತು ಪ್ರಸ್ತುತ ಪಡಿಸಿದರು. ಇದೇ ಸಮಾರಂಭದಲ್ಲಿ “ನಾನು(ನೂ)” ಚನ್ನಮ್ಮ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅಧ್ಯಕ್ಷೀಯ ನುಡಿಗಳನ್ನಾಡುತ್ತ ರಾಣಿ ಚನ್ನಮ್ಮನ ಧ್ಯೇಯ ಆದರ್ಶ ಧೈರ್ಯವನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬ ಹೆಣ್ಣು ಮಕ್ಕಳು “ನಾನು(ನೂ) ಚೆನ್ನಮ್ಮ” ಆಗಬೇಕೆಂಬ ದೃಢ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ನಾವು ಏನಾದರೂ ಸಾಧನೆ ಮಾಡಬೇಕು ಅಂದರೆ ಮೊದಲು ವಿದ್ಯಾರ್ಥಿಯಾಗಿ ಕಲಿಯಬೇಕು, ಕಲಿಕೆಯು ಪೂರ್ಣವಾದರೆ ಸಾಧನೆಯು ಸರಳವಾಗುತ್ತದೆ ಎಂದರು.
ಪ್ರೊ.ವ್ಹಿ ಅನುರಾಧ ಅವರು ರಾಣಿ ಚನ್ನಮ್ಮನ ಸಂಸ್ಥಾನ ಎಷ್ಟು ಸಂಪತ್ಭರಿತವಾಗಿತ್ತು ಮತ್ತು ಅವರ ವಸಾಹತುಸಾಹಿ ವಿರೋಧಿ ಹೋರಾಟದ ಕುರಿತು ಸಾಕಷ್ಟು ದಾಖಲೆಗಳ ಲಭ್ಯವಿರುವ ಬಗ್ಗೆ ಮಾತನಾಡಿದರು.
ಅರವಿಂದ ಚೊಕ್ಕಾಡಿ ಅವರು ರಾಣಿ ಚನ್ನಮ್ಮ ಬದುಕಿನುದ್ದಕ್ಕೂ ಮಾಡಿದ ಹೋರಾಟ ಹಾಗೂ ವಸಾಹತುಶಾಹಿ ವಿರೋಧಿ ನಿಲುವುಗಳ ಕುರಿತು ಚರ್ಚಿಸಿದರು. ಸಮಾರೋಪ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಎಂ.ಎ ಸ್ವಪ್ನ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಾಣಿ ಚನ್ನಮ್ಮನ ಕುರಿತು ಮಾತನಾಡಿದರು. ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ನಾಗರತ್ನ ವಿ ಪರಾಂಡೆ ಅವರು ಕೃತಿ ಪರಿಚಯಿಸಿ, ಸ್ವಾಗತಿಸಿದರು. ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕ ಡಾ. ಮಹೇಶ ಗಾಜಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಮತ್ತು ಸ್ನಾತಕೋತ್ತರ ವಿಭಾಗದ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.