ಸಹಬಾಳ್ವೆ ಮಲ್ಲಮ್ಮರ ಬೋದನೆಯಾಗಿತ್ತು: ಶಿವರಾಜ ಶಿವಪುರ

Coexistence was Mallamma's teaching: Shivaraja Shivapura

ಕಂಪ್ಲಿ 10: ಹೇಮರೆಡ್ಡಿ ಮಲ್ಲಮ್ಮ ಅವರು ಸೂರ್ಯ- ಚಂದ್ರ ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾಮಾತೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ತಹಶೀಲ್ದಾರ್ ಶಿವರಾಜ ಶಿವಪುರ ಹೇಳಿದರು.

ಸ್ಥಳೀಯ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಶನಿವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಎಲ್ಲಾ ಸಮುದಾಯಗಳೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಮಲ್ಲಮ್ಮ ಬೋಧಿಸಿದರು’ ಎಂದರು. ಹೇಮ ವೇಮ ಕಂಪ್ಲಿ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಇಟಗಿ ಬಸವಲಿಂಗಪ್ಪ ಮಾತನಾಡಿ, ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮ ಅವರು ಮೋಕ್ಷದ ಮಾರ್ಗ ತೋರಿದ ಮಹಾಸಾಧ್ವಿ. ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕು ಎಂದರು.

ಇಲ್ಲಿ ಮಲ್ಲಮ್ಮ ಭಾವಚಿತ್ರಕ್ಕೆ ಪುಜೆ ಮತ್ತು ಪುಷ್ಪ ಅರ​‍್ಿಸುವ ಮೂಲಕ ಜಯಂತಿ ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮುಖಂಡ ವೆಂಕಟರೆಡ್ಡಿ, ಆನಂದರೆಡ್ಡಿ, ವೀರಾರೆಡ್ಡಿ, ಹನುಮಂತರೆಡ್ಡಿ, ಮುರಳಿ ಮೋಹನರೆಡ್ಡಿ, ರಾಜಶೇಖರರೆಡ್ಡಿ, ಇಟಗಿ ಬಸವರಾಜಗೌಡ, ಚಂದ್ರಶೇಖರ, ರಮೇಶರೆಡ್ಡಿ, ವೆಂಕಟೇಶ ರೆಡ್ಡಿ, ಶೇಖರಗೌಡ, ಪಿ.ಮೂಕಯ್ಯಸ್ವಾಮಿ, ಹೊನ್ನಳ್ಳಿ ಶಂಕ್ರ​‍್ಪ, ಹೊನ್ನಳ್ಳಿ ಗಂಗಾಧರ, ಕೃಷ್ಣ ರೆಡ್ಡಿ, ಲಕ್ಷ್ಮಣರೆಡ್ಡಿ, ಹೊಸಕೋಟೆ ಜಗದೀಶ, ಬಳೆ ಮಲ್ಲಿಕಾರ್ಜುನ, ಮಂಜುನಾಥ, ಎಸ್‌.ಡಿ.ಬಸವರಾಜ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.