ಮೆಕ್ಸಿಕೋ, ಏ 5,ಕೊಲಂಬಿಯಾದ ಕುಡಿನಾಮರ್ಕಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟಿಸಿ ಸಮೀಪದ ಮೂರು ಗಣಿಗಳಿಗೆ ಹಾನಿಯಾಗಿದೆ. ಒಂದು ಗಣಿ ಕುಸಿದಿದ್ದು ಹನ್ನೊಂದು ಜನರು ಸಾವನ್ನಪ್ಪಿದ್ದು ನಾಲ್ವರಿಗೆ ಗಾಯಗಳಾಗಿವೆ. ಮೃತ ದೇಹಗಳನ್ನು ತಾಂತ್ರಿಕ ತನಿಖಾ ತಂಡದ ಸಿಬ್ಬಂದಿ ಹೊರತೆಗೆದಿದ್ದಾರೆ. ಮೀಥೇನ್ ಅನಿಲ ಮತ್ತು ಕಲ್ಲಿದ್ದಲು ಧೂಳಿನಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.