ಫೆಂಜಲ್ ಚಂಡಮಾರುತದಿಂದಾಗಿ ಮೋಡ ಕವಿದ ವಾತಾವರಣ: ಕಡಲೆ ಬೆಳೆಗೆ ಕೀಟ ಬಾಧೆ
ಚಿಕ್ಕೋಡಿ 08:ಫೆಂಜಲ್ ಚಂಡಮಾರುತದಿಂದಾಗಿ ಚಿಕ್ಕೋಡಿ ಉಪ ವಿಭಾಗದಲ್ಲಿ ಬರುವ ಚಿಕ್ಕೋಡಿ ನಿಪ್ಪಾಣಿ ಕಾಗವಾಡ ಅಥಣಿ ರಾಯಬಾಗ್ ತಾಲೂಕಿನಲ್ಲಿ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಆವರಿಸಿತ್ತು, ತುಂತುರು ಮಳೆಯೂ ಸುರಿದಿತ್ತು. ಇದರಿಂದ ಕಡಲೆ ಬೆಳೆಗೆ ಕೀಟ ಬಾಧೆ ಕಂಡುಬಂದಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಚಿಕ್ಕೋಡಿ ಉಪ ವಿಭಾಗದಲ್ಲಿ ಬರುವ ತಾಲೂಕಿನಲ್ಲಿ ಕಡಲೆ ಬಿತ್ತನೆ ಗುರಿ 1,152,75 ಹೆಕ್ಟೇರ್ ಇತ್ತು. ಈ ಬಾರಿ ಉತ್ತಮ ಮಳೆಯಾಗಿದ್ದು, 1,35,086 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆಯಾಗಿದೆ. ನೀರೀಕ್ಷೆಗೂ ಮೀರಿ ಬಿತ್ತನೆ ಮಾಡಲಾಗಿದೆ. ಬೆಳೆ ಚೆನ್ನಾಗಿದೆ, ಆದರೆ ಕೀಟ ಬಾಧೆಯಿಂದಾಗಿ ಇಳುವರಿ ಕಡಿಮೆಯಾಗುವ ಭೀತಿ ಎದುರಾಗಿದೆ.
ಮುಂಗಾರು ಹಂಗಾಮಿನಲ್ಲಿ ಮಳೆ ಹೆಚ್ಚು ಸುರಿದಿತ್ತು. ವಿಪರೀತ ಮಳೆಯಿಂದಾಗಿ ಹಿಂಗಾರು ಬಿತ್ತನೆ ಚಟುವಟಿಕೆ ತಡವಾಗಿತ್ತು. ಕೆಲವೆಡೆ ಬಿತ್ತಿದ್ದ ಬೀಜ ಕೊಚ್ಚಿ ಹೋಗಿ, ಮತ್ತೆ ಬಿತ್ತನೆ ಮಾಡಲಾಗಿದೆ. ಹಿಂಗಾರಿನಲ್ಲಿ ಕಡಲೆ, ಬಿಳಿಜೋಳ, ಕುಸುಬೆ, ಗೋಧಿ ಮೊದಲಾದವನ್ನು ಬಿತ್ತನೆ ಮಾಡಿದ್ದಾರೆ.
ಮೋಡ ಕವಿದ ವಾತಾವರಣ, ತುಂತುರು ಮಳೆ ಸಮಸ್ಯೆಗೆ ಎಡೆಮಾಡಿದೆ. ಈ ವರ್ಷ ಎಳೆಯ ನಾಟಿಗೆ ಮೇಲೆ ಕೀಟಗಳ ಮರಿಗಳು ಹೇರಳವಾಗಿವೆ. ಕಡಲೆ ಎಲೆಗಳ ಮೇಲೆ ಕೀಟಗಳ ಮೊಟ್ಟೆಗಳು ಕಾಣಿಸುತ್ತಿವೆ. ಮೊಟ್ಟೆ ಇರುವ ಎಲೆಗಳು ಒಣಗುತ್ತಿವೆ. ಆರಂಭದಲ್ಲಿಯೇ ಕೀಟನಾಶಕ ಸಿಂಪಡಣೆ ನಿಟ್ಟಿನಲ್ಲಿ ಗಮನಹರಿಸಿ, ಬೆಳೆ ರಕ್ಷಣೆಗೆ ರೈತರು ಯತ್ನ ನಡೆಸಿದ್ದಾರೆ.
ಉತ್ತಮ ಮಳೆಯಿಂದ ಹಿಂಗಾರು ಬೆಳೆ ಚೆನ್ನಾಗಿದೆ. ಈ ಪರಿಸ್ಥಿತಿಯಲ್ಲಿ ಮೋಡ ಕವಿದ ವಾತಾವರಣಕ್ಕೆ ಕಡಲೆಗೆ ಕೀಟ ಬಾಧೆ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಬಿತ್ತನೆ ಬೀಜ, ವ್ಯವಸಾಯ, ಕೂಲಿ ಸಹಿತ ಎಕರೆಗೆ ?12 ಸಾವಿರದಿಂದ ?15 ಸಾವಿರ ಖರ್ಚಾಗಿದೆ. ಓಷಧಿ ಸಿಂಪಡಣೆಗೆ ಮತ್ತೆ ಖರ್ಚು ಮಾಡಬೇಕಾಗಿದೆ' ಎಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ರೈತ ಬಸಪ್ಪ ಮೇಲಿನಮನಿ 'ವಿಜಯವಾಣಿ'ಗೆ ತಿಳಿಸಿದರು.
ಕೋಟ್
ಪಕ್ಷಿ ಆಕರ್ಷಣೆಗೆ ಸಲಹೆ
'ಕಡಲೆ ಬೆಳೆಯಲ್ಲಿ ಕಾಯಿ ಕೊರಕ (ಹೆಲಿಕೋವರ್ಾ) ನಿರ್ವಹಣೆಗೆ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಮಂಡಕ್ಕಿಯನ್ನು ಹೊಲದಲ್ಲಿ ಎಲ್ಲ ಕಡೆ ಚೆಲ್ಲಬೇಕು. ಇದರಿಂದ ಪಕ್ಷಿಗಳು ಆಕರ್ಷಿತವಾಗಿ ಕೀಟಗಳನ್ನು ತಿನ್ನುತ್ತವೆ. 2 ಮಿಲಿ ಲೀಟರ್ ಕೊರಫೆನಾಫೈರ್ ಆಥವಾ 0.075 ಮಿ.ಲೀ ಪ್ರೊಬೆಂಡಿಯಾಮೈಡ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು' ಎಂದು ರಾಯಬಾಗ್ ತಾಲೂಕಿನ ನಸಲಾಪುರ ಪ್ರಗತಿಪರ ರೈತರಾದ ಅಣ್ಣಪ್ಪ ತಪಕಿರೆ ತಿಳಿಸಿದರು.
ಕೋಟ್ 2ಹಿಂಗಾರಿನಲ್ಲಿ ಬಿತ್ತನೆಯಾದ ಕಡಲೆ ಬೆಳೆಗೆ ಕೀಟ ಬಾಧೆ ಕಾಣಿಸಿದೆ. ಓಷಧ ಸಿಂಪಡಣೆ ನಿಟ್ಟಿನಲ್ಲಿ ರೈತರಿಗೆ ಕೃಷಿ ಇಲಾಖೆಯಿಂದ ಸಲಹೆ, ಮಾಹಿತಿ ನೀಡಬೇಕು ಎಂದು ಶಿರಗುಪ್ಪಿ ಗ್ರಾಮದ ರೈತರದ ಪ್ರಕಾಶ್ ಹೇಮಗಿರೆ ತಿಳಿಸಿದ್ದಾರೆ