ನಿಲ್ ಜಿಎಸ್‌ಟಇ’ ರಿಟರ್ನ್ ಫೈಲ್ ಮಾಡಲು ಕ್ಲಿಯರ್ ಟ್ಯಾಕ್ಸ್ ಹೊಸ ಸೌಲಭ್ಯ

ಬೆಂಗಳೂರು, ಡಿ.24, ತೆರಿಗೆ ಮತ್ತು ಹೂಡಿಕೆಗೆ ಭಾರತದ ಪ್ರಮುಖ ವೇದಿಕೆಯಾದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು ‘ನಿಲ್ ಜಿಎಸ್‌ಟಿ’ (Nil GST) ರಿಟರ್ನ್ ಫೈಲ್ ಮಾಡಲು ಸೌಲಭ್ಯ ಒದಗಿಸಿದೆ. ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ಉದ್ಯಮಗಳು ಈ ಹೊಸ ಸೌಲಭ್ಯ ಬಳಸಿ ಕೇವಲ 30 ಸೆಕೆಂಡ್ ನಲ್ಲಿ ‘ನಿಲ್ ಜಿಎಸ್‌ಟಿ’ ರಿಟರ್ನ್ ಫೈಲ್ ಮಾಡಬಹುದು.   ಭಾರತದಲ್ಲಿ ಪ್ರತಿ ತಿಂಗಳು ಸುಮಾರು 20 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇ ಸೇರಿದಂತೆ ವಿವಿಧ ಉದ್ಯಮಗಳು ‘ನಿಲ್ ಜಿಎಸ್‌ಟಿ’ ರಿಟರ್ನ್ ಫೈಲ್ ಮಾಡುತ್ತಾರೆ. ಇದರಲ್ಲಿ ಬಹಳಷ್ಟು ಉದ್ಯಮಗಳು ಚಾರ್ಟರ್ಡ್ ಅಕೌಂಟೆಂಟ್ಸ್ ಮೂಲಕ ಫೈಲ್ ಮಾಡಿದರೆ ಉಳಿದವರು ಸ್ವಂತವಾಗಿ ರಿಟರ್ನ್ ಫೈಲ್ ಮಾಡುತ್ತಾರೆ. ಇಂಥ ಸಣ್ಣ ಉದ್ಯಮಗಳ ನೆರವಿಗಾಗಿ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು ‘ನಿಲ್ ಜಿಎಸ್ಟಿ’ ರಿಟರ್ನ್ಸ್ ಫೈಲ್ ಮಾಡುವ ಸೌಲಭ್ಯ ಒದಗಿಸಿದೆ.   “ಜಿಎಸ್‌ಟಿ ಅನ್ನು ಅರ್ಥಮಾಡಿಕೊಂಡು ಕಾರ್ಯಗತಗೊಳಿಸುವುದು ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ಉದ್ಯಮಗಳಿಗೆ ಸವಾಲಿನ ವಿಷಯವಾಗಿದೆ. ಆದ್ದರಿಂದ ಅವರ ಆರ್ಥಿಕ ಜೀವನವನ್ನು ಸರಳಗೊಳಿಸುವ ಸಲುವಾಗಿ ನಾವು ವಿಶ್ವಾಸಾರ್ಹ ರಿಟರ್ನ್ ಫೈಲಿಂಗ್ ಅನ್ನು ಪ್ರಾರಂಭಿಸಿದ್ದೇವೆ, ಸಿಎಗಳು ಮತ್ತು ವ್ಯವಹಾರಗಳಿಗೆ ಅನುಕೂಲಕರ ರೀತಿಯಲ್ಲಿ ಜಿಎಸ್‌ಟಿ ರಿಟರ್ನ್ ಫೈಲಿಂಗ್ ಸಲ್ಲಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಜಿಎಸ್‌ಟಿ ಮಾನದಂಡಗಳನ್ನು ಸುಲಭವಾಗಿ ಅನುಸರಿಸಲು ಸಹಾಯ ಮಾಡುತ್ತದೆ” ಎಂದು ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.