ಸ್ವಚ್ಛತಾ ಕಾರ್ಯ, ನಶಾ ಮುಕ್ತ ಭಾರತ, ಸ್ವದೇಶ ಸಂಕಲ್ಪ ಪ್ರತಿಜ್ಞಾ ಅಭಿಯಾನ : ಸರ್ದಾರ್

 ಸ್ವಚ್ಛತಾ ಕಾರ್ಯ, ನಶಾ ಮುಕ್ತ ಭಾರತ, ಸ್ವದೇಶ ಸಂಕಲ್ಪ ಪ್ರತಿಜ್ಞಾ ಅಭಿಯಾನ : ಸರ್ದಾರ್ Cleanliness work, drug-free India, Swadesh Sankalp Pratigna campaign: Sardar

ಲೋಕದರ್ಶನ ವರದಿ 

ಸ್ವಚ್ಛತಾ ಕಾರ್ಯ, ನಶಾ ಮುಕ್ತ ಭಾರತ, ಸ್ವದೇಶ ಸಂಕಲ್ಪ ಪ್ರತಿಜ್ಞಾ ಅಭಿಯಾನ : ಸರ್ದಾರ್ 

ಗದಗ 09: ನಗರದ ಕೆಎಲ್‌ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ದಿ. 9ರವಿವಾರ ರಂದು (ಖಚಿಡಿಜಚಿಡಿಅ150) (ಸರ್ದಾರ್ ಅ150) ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ಸ್ವಚ್ಛತಾ ಕಾರ್ಯ, ನಶಾ ಮುಕ್ತ ಭಾರತ ಮತ್ತು ಸ್ವದೇಶ ಸಂಕಲ್ಪ ಪ್ರತಿಜ್ಞಾ ಅಭಿಯಾನ ಆಯೋಜಿಸಲಾಗಿತ್ತು.  

ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ, ಆದಿತ್ಯನಗರದ ಗಡೇದ್ ದುರ್ಗಾ ದೇವಿ ದೇವಸ್ತಾನದ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛತೆ ಮಾಡಲಾಯಿತು ಮತ್ತು ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡಲಾಯಿತು ಮತ್ತು ನಂತರ ನಶಾ ಮುಕ್ತ ಭಾರತ ಮತ್ತು ಸ್ವದೇಶ ಸಂಕಲ್ಪ ಪ್ರತಿಜ್ಞಾ ಅಭಿಯಾನವನ್ನು ಕೈಗೊಳ್ಳಲಾಯಿತು.     

ಈ ಚಟುವಟಿಕೆಯಲ್ಲಿ ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿ ಪ್ರೋ. ವಾಗೀಶ ಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕ, ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿ ಐಶ್ವರ್ಯ ಶಲವಡಿ, ಸಹನಾ ನಾಲ್ವಾಡದ, ಆಕಾಶ ಕಳಗಣ್ಣನವರ, ಎನ್‌. ಎಸ್‌. ಎಸ್‌. ತಂಡಗಳ ನಾಯಕ ಶಶಿಕುಮಾರ ಎಸ್‌., ಮಹಾದೇವಪ್ಪ ಬೋಳನವರ, ನಾಗರತ್ನ ಹಾಲನವರ್ ಮತ್ತು ಎನ್‌. ಎಸ್‌. ಎಸ್‌. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.