ಮುರಗಾಯಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಮುರಗಾಯಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ Cleanliness program at Murugai temple

ಬೆಳಗಾವಿ. 18 :  ಜೂನ್  18 ರಂದು  ಮಹಾರಾಣಾ ಪ್ರತಾಪ ಸಿಂಗ್ ಮಹಾರಾಜರ ಜಯಂತಿಯ ನಿಮಿತ್ಯವಾಗಿ ಸರ್ವಲೋಕ ಸೇವಾ ಫೌಂಡೇಶನ, ರೇವಣಸಿದ್ದೇಶ್ವರ ಜ್ಯೋತಿ ಶಾಲೆಯ ಮತ್ತು ಇನ್ನೋವೇಟಿವ ಪ್ರಿಂಟಿಂಗ್ ಪ್ರೆಸ್, ಇವುಗಳ  ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಮಹಾನಗರದ ಸದಾಶಿವನಗರದಲ್ಲಿ ಮರಗಾಯಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕಾರ್ಯಕ್ರಮವನ್ನು ನೆರವೇರಿಸಲಾಯಿತು.  ಈ ಕಾರ್ಯಕ್ರಮದಲ್ಲಿ ನೀಲಕಂಠಯ್ಯ ಆರ್ ಹಿರೇಮಠ, ಸರ್ವಲೋಕ ಸೇವಾ ಫೌಂಡೇಶನ್ ಅಧ್ಯಕ್ಷ  ವೀರೇಶ ಬಸಯ್ಯ ಹಿರೇಮಠ, ಸಂತೋಷ ದೇಶನೂರ, ದೇವಪ್ಪ ಕಾಂಬಳೆ, ರವಿಕಿರಣ್ ಹೆಗ್ಗೇರಿ, ಗೌರೀಶ್ ಹಿರೇಮಠ ಮತ್ತು ಇತರರು ಭಾಗವಹಿಸಿದ್ದರು.