ಡಾ.ಎಪಿಜೆ ಅಬ್ದುಲ್ ಕಲಾಂ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯ!

ಡಾ.ಎಪಿಜೆ ಅಬ್ದುಲ್ ಕಲಾಂ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯ! Cleanliness drive by Dr. APJ Abdul Kalam Educational and Religious Service Institute!

ಲೋಕದರ್ಶನ ವರದಿ 

ಮಹಾಲಿಂಗಪುರ  07: ಪಟ್ಟಣದ ಡಾ.ಎಪಿಜೆ ಅಬ್ದುಲ್ ಕಲಾಂ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯಿಂದ ಸ್ಥಳೀಯ ಬಸ್ ನಿಲ್ದಾಣದ ಕೆರೆಯ ಪಕ್ಕದಲ್ಲಿರುವ ಪುರಸಭೆ ವ್ಯಾಪ್ತಿಯ ಖುಲ್ಲಾ ಜಾಗದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. 

ಸಾರ್ವಜನಿಕರಿಂದ ಕಸ ಕಡ್ಡಿಗಳಿಂದ ತುಂಬಿಕೊಂಡು ದುರ್ವಾಸನೆ ಬೀರುತ್ತಿತ್ತು. ಪುರಸಭೆಯವರ ಗಮನಕ್ಕೆ ತಂದು ಅವರ ಅನುಮತಿಯೊಂದಿಗೆ ನಮ್ಮ ಸಂಸ್ಥೆಯ ಸರ್ವ ಸದಸ್ಯರು ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದರು. ಒಂದು ವಿಶಾಲವಾದ ಮೈದಾನದಲ್ಲಿ ಸುತ್ತಮುತ್ತಲಿನ ಅಂಗಡಿಯವರಿಗೆ ಒಂದು ಸುಸಜ್ಜಿತವಾದ ಕಸದ ತೊಟ್ಟಿಯನ್ನು ನಿರ್ಮಿಸುವುದು ಹಾಗೂ ಉಳಿದ ಜಾಗದಲ್ಲಿ ಆಟದ ಮೈದಾನವನ್ನು ನಿರ್ಮಿಸಿ ನಗರದ ಸೌಂದರ್ಯವನ್ನು ಹೆಚ್ಚಿಸಲು ಸಹಕರಿಸಬೇಕೆಂದು ಆಗ್ರಹಿಸಿದರು.  

ಸಂಸ್ಥೆಯ ಅಧ್ಯಕ್ಷ ಡಾ. ಅಝಹರ್ ಕೋಲಾರ್, ಉಪಾಧ್ಯಕ್ಷ ಜಬಿವುಲ್ಲಾ ಮುಲ್ಲಾ, ಕಾರ್ಯದರ್ಶಿ ಯುನುಸ ಬೀಳಗಿ, ಸಹಕಾರ್ಯದರ್ಶಿ ಮುನ್ನಾ ಕರಡಿ, ಖಜಾಂಚಿ ಸೈಯದ್ ನದಾಫ್, ಸದಸ್ಯರಾದ ಭಾಷಾ ಬಿಸ್ತಿ, ಸೈಯದ್ ಹಳಂಗಳಿ, ಮೈಬೂಬ್ ಭಾಗವಾನ, ಶಾರುಖ್ ರೊಣ, ರಿಯಾಜ್ ಯಾದಗುಡ, ಹ್ಯಾರಿಸ್ ಶಿರೋಳ್, ಕುತುಬುದ್ದೀನ್ ಜಲಗೇರಿ, ಇಲಿಯಾಸ್ ಬೀಳಗಿ, ಜಾಕಿರ್ ಶೇಕ್, ಮೈಬೂಬ್ ಗಡ್ಡಿ, ಹಿರಿಯರಾದ ಮೋದಿನ ತಟಗಾರ, ಯುವಕರಾದ ಶಾಹಿದ್ ಕರಡಿ, ಮೂಸಾ ಬೂದಿಹಾಳ,ಗೌಸ್ ಬಿಳಗಿ, ಇಲಾಹಿ ಮುಲ್ಲಾ,ಆರೀಫ್ ಬಿಳಗಿ,ಮೈಬೂಬ್ ಬಿಸ್ತಿ, ಅಬುಬಕರ್ ಜಮಖಂಡಿ, ರಿಯಾಜ್ ಬರ್ಗಿ ಸೇರಿದಂತೆ ಇತರರಿದ್ದರು.