ಸ್ವಚ್ಚತಾ ಹಿ ಸೇವಾ ವಿದ್ಯಾರ್ಥಿಗಳಿಂದ ಸ್ವಚ್ಚತಾಅಭಿಯಾನ
Cleanliness campaign by Swachhta Hi Seva students
ವಿಜಯಪುರ 26: ಸ್ವಚ್ಚತಾ ಹಿ ಸೇವಾ ಅಭಿಯಾನದ ಅಂಗವಾಗಿ ಬಿಎಲ್‌ಡಿಇ ಸಂಸ್ಥೆಯಎಸ್‌ಬಿ ಕಲಾ ಮತ್ತುಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿಗುರುವಾರ ಸ್ವಚ್ಚತಾಕಾರ್ಯ ಕೈಗೊಳ್ಳಲಾಯಿತು. ಮಹಾವಿದ್ಯಾಲಯದಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಪೊರಕೆ ಹಿಡಿದು ಕಸಗೂಡಿಸಿದರು.
ಸೆ.25 ರಿಂದ ಅ.7 ರ ವರೆಗೂ ಭಾರತೀಯ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಪ್ರವಾಸೋಧ್ಯಮ ಇಲಾಖೆ ಸಹಯೋಗದಲ್ಲಿ ಮಹಾತ್ಮಗಾಂಧಿಯವರ "ಸ್ವಚ್ಛ ಭಾರತ" ಕನಸಿನ ಭಾಗವಾಗಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವುದು, ಸ್ವಚ್ಛ, ಆರೋಗ್ಯಕರ ಸಮಾಜವನ್ನು ನಿರ್ಮಿಸುವಲ್ಲಿ ಸಕ್ರಿಯವಾಗಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೆರೇಪಿಸುವ ಉದ್ದೇಶದಿಂದ ಸ್ವಚ್ಚತಾ ಹೀ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನಕಾಲೇಜು, ಐಕ್ಯೂಎಸಿ, ಎನ್‌ಎಸ್‌ಎಸ್, ಎನ್‌ಸಿಸಿ, ವೈಆರ್‌ಸಿ, ಸ್ಕೌಟ್ಸ್ ಮತ್ತುಗೈಡ್ಸ್ ಸಹಯೋಗದೊಂದಿಗೆ ಸ್ವಚ್ಛತಾ ಹಿ ಸೇವಾ 2025 ರ ವಿಶೇಷ ಅಭಿಯಾನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಗೋಲಗುಮ್ಮಟ,ಕೋಟೆಗೋಡೆಜಿಲ್ಲಾಧಿಕಾರಿಕಚೇರಿ ಸೇರಿದಂತೆ ವಿವಿಧ ಕಡೆಡಗಳಲ್ಲಿ ವಿದ್ಯಾರ್ಥಿಗಳು ಸ್ವಚ್ಚತಾಕಾರ್ಯವನ್ನು ಮಾಡಿದರು.
ಎಸ್‌ಬಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಎನ್‌ಎಸ್‌ಎಸ್ ಸ್ವಯಂ ಸೇವಕ ವಿದ್ಯಾರ್ಥಿನಿಯರುಜಿಲ್ಲಾ ಮಟ್ಟದರಂಗೋಲಿ ಸ್ಪರ್ಧೆಯಲ್ಲಿ 2 ನೇ ಮತ್ತು 4 ನೇ ಬಹುಮಾನ, ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಉಪ ಪ್ರಾಚಾರ್ಯಡಾ.ಅನಿಲ್ ಭೀ.ನಾಯಕ, ಐಕ್ಯೂಎಸಿ ನಿರ್ದೇಶಕಡಾ.ಪಿ.ಎಸ್.ಪಾಟೀಲ್, ಎನ್‌ಎಸ್‌ಎಸ್‌ಅಧಿಕಾರಿಡಾ.ಮಿಲನ್ ರಾಠೋಡ್, ಡಾ.ತರನ್ನುಮ್‌ಜಬೀನ್‌ಖಾನ್, ಎನ್‌ಸಿಸಿ ಅಧಿಕಾರಿಡಾ.ರಾಮಚಂದ್ರ ನಾಯಕ, ವೈಆರ್‌ಸಿ ಮುಖ್ಯಸ್ಥಡಾ.ಅನಿಲ್ ಪಾಟೀಲ್, ಸ್ಕೌಟ್ಸ್ ಮತ್ತುಗೈಡ್ಸ್‌ಅಧಿಕಾರಿಡಾ.ಉಷಾದೇವಿ ಹಿರೇಮಠ,ದೈಹಿಕ ನಿರ್ಧೇಶಕ ಎಸ್.ಕೆ.ಪಾಟೀಲ, ಪ್ರೋ.ರೂಪಾ ಮೋಟಗಿ, ಪ್ರೋ.ಆರ್.ಜಿ.ಕಮತರ, ಪ್ರೊ.ಎಸ್ ಜೋಶಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಮಲಿಕ್‌ಜಮಾದಾರ್, ಇನ್ನಿತರಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ಕೋಶಗಳ ಸ್ವಯಂಸೇವಕರು, ವಿದ್ಯಾರ್ಥಿಗಳು ಸ್ವಚ್ಛತಾಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 