ಬಾಗಲಕೋಟೆ: ಜಿಲ್ಲೆಯಲ್ಲಿರುವ ಒಟ್ಟು 2221 ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳಿಗೆ ಸಂಪೂರ್ಣ ಸಮತೋಲನ ಹಾಗೂ ಸುರಕ್ಷಿತ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಶುಚಿತ್ವ ಮತ್ತು ಮಿತವ್ಯಯ ಸೂತ್ರ ಅನುಸರಿಸಲಾಗುತ್ತಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳ ಕಚೇರಿಯಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂಗವನವಾಡಿ ಮಕ್ಕಳಿಗೆ ವೈವಿದ್ಯಮಯ ಆಹಾರ ಪದ್ದತಿ ಬಳಸಲಾಗುತ್ತಿದ್ದು, ಸೋಮವಾರ ಅನ್ನ ಸಾಂಬರ, ಮಂಗಳವಾರ ಇಡ್ಲಿ, ಬುಧವಾರ ಫಲಾವು, ಬಿಸಿ ಬೇಳೆಬಾತ್, ಗುರುವಾರ ಅನ್ನ ಸಾಂಬರ, ಶುಕ್ರವಾರ ಸಿಹಿ ಪೊಂಗಲ್ ಮತ್ತು ಶನಿವಾರ ಉಪ್ಪಿಟ್ಟು, ಪುರಿ ಅಥವಾ ಸಜ್ಜಕದಂತಹ ರುಚಿಕರವಾಗಿ ಆಹಾರವನ್ನು ವಾರದ 6 ದಿನಗಳ ಮೆನ್ಯೂ ತಯಾರಿಸಲಾಗಿದೆ ಎಂದು ತಿಳಿಸಿದರು.
1 ರಿಂದ 10 ನೇ ತರಗತಿಯ ವಿದ್ಯಾಥರ್ಿಗಳಿಗೂ ಸಹ ಮೆನ್ಯೂ ಅನುಸರಿಸಲಾಗುತ್ತಿದೆ. ಸಾಂಬಾರ ತಯಾರಿಸುವಾಗ ಹೇರಳವಾಗಿ ವಿಟಾಮಿನ್-ಎ ಹೊಂದಿರುವ ನುಗ್ಗೆ ಸೊಪ್ಪನ್ನು ಬಳಸಲು ಸೂಚಿಸಲಾಗಿದೆ. ಆಹಾರದಲ್ಲಿ ಎಲ್ಲ ಹಂತದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು. ಅಲ್ಲದೇ 3 ರಿಂದ 6 ವರ್ಷದ ಮಕ್ಕಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಪಾಲಕರ ಅಪೇಕ್ಷೆಯಂತೆ ಸಮವಸ್ತ ಧರಿಸಲು ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕತರ್ೆಯರ ಸಭೆ ನಡೆಸಿ ಪ್ರೇರಣೆ ನೀಡಲಾಗಿದೆ.
ಗೊಬ್ಬರ ತಯಾರಿಕೆ :
ಪ್ರತಿಯೊಂದು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಮಧ್ಯಾಹ್ನದ ಬಿಸಿ ಊಟದ ನಂತರ ಉಳಿದ ಆಹಾರ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವತರ್ಿಸಲು ಸ್ವಚ್ಛ ಭಾರತ ಅಭಿಯಾನದಡಿ ಪೈಪ್ ಕಾಂಪೋಸ್ಟ ತಗ್ಗುಗಳ ಘಟಕಗಳನ್ನು ಅನುಷ್ಠಾನಗೊಳಿಸಲು ಕ್ರಮ ಜರುಗಿಸಲಾಗುತ್ತಿದೆ. ಗ್ರಾಮ ಪಂಚಾಯತಿ ವತಿಯಿಂದ ಈಗಾಗಲೇ 2 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಗೊಬ್ಬರ ತಯಾರಿಸಿ ತೋರಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ಆಯಾ ಶಾಲೆಯ ಎಸ್.ಡಿ.ಎಂಸಿ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ಸಂಗ್ರಹ :
ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಗ್ರಾ.ಪಂಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಘನ ಮತ್ತು ದ್ರವ್ಯ ತ್ಯಾಜ್ಯವನ್ನು ಮನೆ ಮನೆ ಸಂಗ್ರಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯ ಯಡಹಳ್ಳಿ ಮತ್ತು ಹಿರೇಪಡಸಲಗಿ ಗ್ರಾಮದಲ್ಲಿ ನಡೆದಿದೆ. ತ್ಯಾಜ್ಯ ಸಂಗ್ರಹಿಸಲು 15 ಗ್ರಾಮ ಪಂಚಾಯತಿಗಳಲ್ಲಿ ಸ್ಥಳ ಗುರುತಿಸಲಾಗಿದೆ. ಅಲ್ಲದೇ ತ್ಯಾಜ್ಯ ಬೇರ್ಪಡಿಸುವ ಘಟಕ, ಕಸ ಸಾಗಾಣಿಕೆ ವಾಹನ ಖರೀದಿಸಲು ಹಾಗೂ ಪ್ರತಿ ಮನೆಗೆ ಕಸದ ಬುಟ್ಟಿ ಖರೀದಿಸಲು ಪ್ರತಿ ಪಂಚಾಯತಿಗೆ 10 ಲಕ್ಷ ರೂ.ಗಳಂತೆ ಒಟ್ಟು 150 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಖಾತರಿ ಯೋಜನೆ :
ಮಹಾತ್ಮಾಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿಗೆ 38.50 ಲಕ್ಷ ಮಾನವ ಗುರಿ ಪೈಕಿ 23.37 ಲಕ್ಷ ಸೃಜನೆ ಮಾಡಿ ಶೇ.60.17 ರಷ್ಟು ಪ್ರಗತಿ ಸಾಧಿಸಲಾಗಿದೆ. ಅಕ್ಟೋಬರ ಮಾಹೆಯಲ್ಲಿ 19.75 ಲಕ್ಷ ಗುರಿಗೆ ಶೇ.118.34 ರಷ್ಟು ಪ್ರಗತಿ ಸಾಧಿಸಿ ರಾಜ್ಯಕ್ಕೆ 8ನೇ ಸ್ಥಾನದಲ್ಲಿರುವುದಾಗಿ ತಿಳಿಸಿದರು. ಕಳೆದ ಜೂನ್ ಮತ್ತು ಜುಲೈ ಮಾಹೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು ಎಂದು ತಿಳಿಸಿದರು.
ಮಾತೃಪೂರ್ಣ ಯೋಜನೆ :
ಗಭರ್ಿಣಿ ಮತ್ತು ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಟಿಕ ಬಿಸಿ ಊಟ ನೀಡುವ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿ 2221 ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 20166 ಗಭರ್ಿನಿಯರು ಹಾಗೂ 19508 ಬಾಣಂತಿಯರು ನೋಂದಾಯಿಸಿಕೊಂಡಿದ್ದು, ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕಳೆದ 10 ತಿಂಗಳಲ್ಲಿ ಯೋಜನೆ ಅನುಷ್ಟಾನದಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದುಕೊಂಡಿತ್ತು ಎಂದರು.
ಮಾತೃವಂದನಾ, ಮಾತೃಶ್ರೀ ಯೋಜನೆ :
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ 5 ಸಾವಿರ ರೂ.ಗಳ ಸಹಾಯಧನವನ್ನು ಗಭರ್ಿಣಿ ಸ್ತ್ರೀಯರಿಗೆ ಮೂರು ಹಂತಗಳಲ್ಲಿ ಸಹಾಯಧನ ನೀಡಲಾಗುತ್ತಿದೆ. ಆಗಸ್ಟ 30 ವರೆಗೆ ಒಟ್ಟು 5578 ಫಲಾನುಭವಿಗಳು ನೋಂದಾಯಿಸಿದ್ದು, ಶೇ.93.72 ರಷ್ಟು ಪ್ರಗತಿ ಸಾಧಿಸಲಾಗಿದೆ. ಇಲ್ಲಿವರೆಗೆ 9.36 ಕೋಟಿ ರೂ. ನೀಡಲಾಗಿದೆ ಎಂದರು.
ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಆದ್ಯತಾ ಕುಟುಂಬದ ಗಭರ್ಿಣಿ, ಭಾಣಂತಿಯರಿಗೆ ಸೌಲಭ್ಯ ಒದಗಿಸಲಾಗುತ್ತಿದ್ದು, ಹೆರಿಗೆ ಪೂರ್ವದ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ 1 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಈ ಯೋಜನೆ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಇಲ್ಲಿವರೆಗೆ 10225 ಫಲಾನುಭವಿಗಳು ಇದರ ಪ್ರಯೋಜನ ಪಡೆದು ಶೇ.95.16 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಮುಕ್ತ ಗ್ರಾಮ :
ಎನ್.ಆರ್.ಎಲ್.ಎಮ್, ಸಂಜೀವಿನಿ ಯೋಜನೆಯಡಿಯಲ್ಲಿ ರಚಿಸಲಾದ ಗ್ರಾಮ ಪಂಚಾಯತ ಒಕ್ಕೂಟಗಳು ಹಾಗೂ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತಗಳಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯತಿಗಳನ್ನಾಗಿಸಲು ಪೂರಕವಾಗಿ ಪ್ಲಾಸ್ಟಿಕ್ ಚೀಲ ಬದಲಾಗಿ ಬಟ್ಟೆ ಚೀಲವನ್ನು ಸಂಘದ ಮಹಿಳೆಯರಿಂದ ತಯಾರಿಸಲು ತರಬೇತಿ ಹಾಗೂ ಸಾಲದ ನೆರವು ನೀಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸುವದರ ಜೊತೆಗೆ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಮಹಿಳೆಯರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಅಬಿಯಾನದಲ್ಲಿಯೂ ಕೂಡಾ ಮಹಿಳೆಯರನ್ನು ತೊಗಡಿಸಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.