ಸ್ವಚ್ಛ ದೇಶ, ಸ್ವಚ್ಛ ದೇಹ : ಸ್ವಚ್ಛತಾ ಕಾರ್ಯಕ್ರಮ

ಸ್ವಚ್ಛ ದೇಶ, ಸ್ವಚ್ಛ ದೇಹ : ಸ್ವಚ್ಛತಾ ಕಾರ್ಯಕ್ರಮ  Clean country, clean body: cleanliness program

ಗದಗ  27 ನಗರದ ಪ್ರತಿಷ್ಠತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ದಿನಾಂಕ 27-09-2025 ಶನಿವಾರ ರಂದು ಗದಗ ನಗರದ ಶ್ರೀ. ರಾಮಕೃಷ್ಣ ಆಶ್ರಮ(ಸ್ವಾಮಿ ವಿವೇಕಾನಂದ ಆಶ್ರಮ) ದಲ್ಲಿ ಸ್ವಚ್ಛ ದೇಶ, ಸ್ವಚ್ಛ ದೇಹ ಎಂಬ ವಾಖ್ಯದ ಅಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಹಿತು. ನಂತರ ಆಶ್ರಮದ ಸ್ವಾಮಿಗಳಾದ ಶ್ರೀ. ಈಶ್ವರದಾಸ ಕೊಪ್ಪೇಸರ್ ಅವರು ಎಸ್‌. ಎಸ್‌. ಘಟಕದ ಸ್ವಯಂ ಸೇವಕರೊಂದಿಗೆ ಸಂವಾದವನ್ನು ಮಾಡಿದರು ಜೊತೆಗೆ ಶಿಕ್ಷಣ ಮತ್ತು ದೇಶದ ಬಗ್ಗೆ ಹಲವಾರು ವಿಚಾರಗಳನ್ನು ಚರ್ಚಿಸಿದರು.  

ಈ ಚಟುವಟಿಕೆಯಲ್ಲಿಶ್ರೀ. ರಾಮಕೃಷ್ಣ ಆಶ್ರಮ(ಸ್ವಾಮಿ ವಿವೇಕಾನಂದ ಆಶ್ರಮ) ದಸ್ವಾಮಿಗಳಾದ ಶ್ರೀ. ಈಶ್ವರದಾಸ ಕೊಪ್ಪೇಸರ್, ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕನಾದ ಕುಮಾರ. ಅಪ್ಪಣ್ಣ ಹಡಪದ, ಕುಮಾರಿ. ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಯಾದ ಕುಮಾರಿ. ಐಶ್ವರ್ಯ ಶಲವಡಿ, ಕುಮಾರಿ. ಸಹನಾ ನಾಲ್ವಾಡದ, ಎನ್‌. ಎಸ್‌. ಎಸ್‌. ತಂಡ 03,9, ಮತ್ತು 10 ರ ನಾಯಕರಾದ ಕುಮಾರ. ಶಶಿಕುಮಾರ ಎಸ್‌., ಕುಮಾರ. ಫಕ್ಕೀರೇಶ ಒಂಟಿ, ಕುಮಾರಿ. ಶಹನಾಜ ನಧಾಪ ಮತ್ತುಎನ್‌. ಎಸ್‌. ಎಸ್‌. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.