ಸ್ವಚ್ಛ ಸವರ್ೆಕ್ಷಣ ಗ್ರಾಮೀಣ ತರಬೆೇತಿ ಕಾಯರ್ಾಗಾರ


 ಹೊನ್ನಾವರ : ಗಾಂದೀಜಿಯವರ ಕನಸು ನನಸಾಗಲಿಲ್ಲ. ನೈರ್ಮಲ್ಯದಿಂದ ಇನ್ನು ಮುಕ್ತವಾಗಿಲ್ಲ. ಪ್ರತಿ ಮನೆ- ಮನೆಯಿಂದ ಸ್ವಚ್ಛತಾ ಕಾರ್ಯ ಆರಂಭವಾಗಬೇಕು. ನಮ್ಮ ಗ್ರಾಮ ಸ್ಚಚ್ಛ ಗ್ರಾಮ ಎಂಬ ಹೆಗ್ಗಳಿಕೆ ಗಳಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಗಾಂಧೀಜಿಯವರ ಕನಸು ನನಸು ಮಾಡುವ ದೃಷ್ಟಿಯಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಸಂಘ ಸಂಸ್ಥೆ, ಇಲಾಖೆ, ಜನಪ್ರತಿನಿಧಿಗಳೆಲ್ಲರೂ ಸೇರಿ ಸಕರ್ಾರದ ಉದ್ದೇಶವನ್ನು ಸಫಲಗೊಳಿಸಲು ಕೈಜೋಡಿಸಿ ಎಂದು ಕೆ.ಎ.ಎಸ್ ಅಧಿಕಾರಿ ಹಾಗೂ ವಿಶೇಷ ಪಿ.ಡಿ.ಓ ಅಜಯ್ ಅವರು ಕರೆ ನೀಡಿದರು. 

     ತಾಲೂಕಿನ ಮಾವಿನಕುವರ್ಾ ಗ್ರಾ.ಪಂ ಸಭಾಭವನದಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ  ಜಿ.ಪಂ ಉ.ಕ, ತಾ.ಪಂ ಹೊನ್ನಾವರ, ಗ್ರಾ.ಪಂ ಮಾವಿನಕುವರ್ಾ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಚ್ಛ ಸವರ್ೆಕ್ಷಣ ಗ್ರಾಮೀಣ -2018 ರ ತರಭೇತಿ ಕಾಯರ್ಾಗಾರ ಮಾತನಾಡಿದರು. ಈ ಅಭಿಯಾನದ ಪರಿಕಲ್ಪನೆ  ಗ್ರಾಮ ಸ್ವಚ್ಛತೆಯೊಂದಿಗೆ ಮನೆಯ ಶೌಚಾಲಯ, ಇತರ ತ್ಯಾಜ್ಯ ವಿಲೇವಾರಿಯೊಂದಿಗೆ ಪ್ರತಿ ಕುಟುಂಬಕ್ಕೂ ನೈರ್ಮಲ್ಯದ ಸೌಲಭ್ಯವನ್ನು ಒದಗಿಸಿಕೊಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.  ಪ್ರತಿಯೊಬ್ಬರು ಆರೋಗ್ಯವಂತರಾಗಿರಬೇಕು ಎನ್ನುವುದೇ ಇದರ ಉದ್ದೇಶವಾಗಿದೆ ಎಂದರು. 

     ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ ಅಧ್ಯಕ್ಷ  ತಿಲಕ ಜಟ್ಟಿ ಗೌಡ  ಮಾತನಾಡಿ ಪ್ರತಿ ಗ್ರಾ.ಪಂ ಮಟ್ಟದಲ್ಲಿ ಸಕರ್ಾರ ವಿವಿಧ ಕಾರ್ಯಕ್ರಮವನ್ನು ಸ್ವಚ್ಛತೆಗಾಗಿಯೇ ಕಾಯ್ದಿರಿಸಿದೆ. ಇದರ ಸಂದೇಶವನ್ನು ಮನೆ-ಮನೆಗೆ ಮುಟ್ಟಿಸುವುದರೊಂದಿಗೆ ಶಾಲಾ,ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಜನರು ಈ ನಿಟ್ಟಿನಲ್ಲಿ ಕೈ ಜೋಡಿಸಿ ಎಂದರು.

     ತಾಲೂಕಾ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಮುಖ್ಯೋಧ್ಯಾಪಕರಾದ ಎಮ್.ಜಿ.ನಾಯ್ಕ ಮಾತನಾಡಿ ಗಾಂಧೀಜಿಯವರ ಕನಸು ಇದೇ ಆಗಿತ್ತು. ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಲ್ಲುವಂತಾಗಬೇಕು. ಪ್ರತಿ ಮನೆಯವರು ಈ ಬಗ್ಗೆ ದೃಢ ನಿಧರ್ಾರ ಕೈಗೊಳ್ಳಬೇಕು. ಡೆಂಗ್ಯು, ಚಿಕನ್ ಗುನ್ಯಾದಂತಹ ರೋಗ ಬರಲು ನಮ್ಮಲ್ಲಿರುವ ಅಶುಚಿತ್ವವೇ ಕಾರಣ. ಸಾಂಕ್ರಾಮಿಕ ರೋಗ ಮುಕ್ತ ಗ್ರಾಮೀಣ ಪ್ರದೇಶವನ್ನಾಗಿಸುವಲ್ಲಿ ಸ್ವಚ್ಛತೆಯ ಅರಿವು ಅಗತ್ಯವಾಗಿದೆ. ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.

     ಪ್ರಾಥಮಿಕ  ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಜಾನನ ಹೆಗಡೆ ಆರೋಗ್ಯ ಜಾಗೃತಿ ಕುರಿತು ಮಾಹಿತಿ ನೀಡಿದರು. ಕೆಎಎಸ್ ಅಧಿಕಾರಿ ಅಜಯ್ಯವರ ತಂಡದಿಂದ ಕಾರ್ಯಗಾರ ಹಾಗೂ ಸ್ವಚ್ಛತೆ ಪಾಲನೆಯಲ್ಲಿ ಕೈಗೊಳ್ಳಬೇಕಿರುವ ಕಾರ್ಯಚಟುವಟಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಶಿಕ್ಷಣ ಅಧಿಕಾರಿ ಶಿವಾನಂದ,ಗ್ರಾ.ಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಆಶಾ ಕಾರ್ಯಕತರ್ೆಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಕಾರ್ಯದಶರ್ಿ ಉದಯ ಖಾವರ್ಿ 

ನಿರೂಪಿಸಿದರು.