ಕಲಿಸಿದ ಗುರುಗಳನ್ನು ಸನ್ಮಾನಿಸಿ ಸಂಭ್ರಮಿಸಿದ ಹಳೆ ವಿದ್ಯಾರ್ಥಿಗಳು..!!
ಕಾಗವಾಡ 12: ಸುಮಾರು 25 ವರ್ಷಗಳ ಬಳಿಕ ಒಂದೇ ಕಡೆ ಸೇರಿ, ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತ, ತಮಗೆ ಕಲಿಸಿದ ಗುರುಗಳನ್ನು ಸನ್ಮಾನಿಸುವ ಸಮಾರಂಭ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಸನ್ 1999-2000 ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ 25 ನೇ ವರ್ಷದ ರಜತ ಮಹೋತ್ಸವದ ಸ್ನೇಹ-ಸಮ್ಮಿಲನ ಕಾರ್ಯಕ್ರಮವು ರವಿವಾರ ದಿ.11 ರಂದು ಸಮ್ಮತಿ ವಿದ್ಯಾಲಯ ಸಾಂಸ್ಕೃತಿಕ ಭವನದಲ್ಲಿ ಸಂಪನ್ನಗೊಂಡಿತು.
ನಿವೃತ್ತ ಶಿಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡರು. ಜೊತೆಗೆ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದರು.
ಈ ಕಾರ್ಯಕ್ರಮವು ಶ್ರೀಮಂಧರ ನಾಂದ್ರೆ, ಕಪಿಲ ಗಸ್ತೆ, ನಾರಾಯಣ ಯಾದವ ಗೆಳೆಯರ ಬಳಗ ಹಾಗೂ ಅನುರಾಧ ಬರಗಾಲೆ, ಸಾವಿತ್ರಿ ತಳವಾರ ಗೆಳತಿಯರ ಬಳಗದ ಸತತ ಪ್ರಯತ್ನದಿಂದಾಗಿ ಯಶಸ್ವಿಯಾಯಿತು.
ಈ ವೇಳೆ ನಿವೃತ್ತ ಮುಖ್ಯೋದ್ಯಾಪಕ ಎಂ.ಎ. ಗಣೆ, ನಿವೃತ್ ಶಿಕ್ಷಕರಾದ ಬಿ.ಜೆ. ಕುರುಂದವಾಡೆ, ಎಚ್.ಎಸ್. ಐನಾಪುರೆ, ಬಿ.ಪಿ. ಕಾಂಬಳೆ, ಜೆ.ಡಿ. ಮುರುಗುಂಡೆ, ಕೆ.ಕೆ. ಕಾಂಬಳೆ, ಬಿ.ಆರ್. ಜೆಟರ್, ಬಿ.ಬಿ. ಪಾಟೀಲ, ಟಿ.ಡಿ. ಉಪಾದ್ಯೆ, ಮಮದಾಪುರೆ, ಬಿ.ಪಿ. ಗೌಡಪ್ಪನವರ, ಟಿ.ಎಂ. ಪಾಯಗೌಡರ, ಎಂ.ಡಿ. ಅಲಾಸೆ, ಹಾಲಿ ಶಿಕ್ಷಕರಾದ ಪಿ.ಎಂ. ಕಂಧಾರೆ, ಎಸ್.ಬಿ. ಇರಾಜ್, ಎಸ್.ಪಿ. ಕಾಂಬಳೆ, ಎಂ.ಕೆ. ಕಾಂಬಳೆ ಸೇರಿದಂತೆ ನಿವೃತ್ತ ಮತ್ತು ಹಾಲಿ ಶಿಕ್ಷಕ-ಶಿಕ್ಷಕಿಯರು ಮತ್ತು ಕನ್ನಡ ಹಾಗೂ ಮರಾಠಿ ಮಾಧ್ಯಮ ಪ್ರಾಥಮಿಕ-ಫ್ರೌಡ ಶಾಲೆ 72 ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಎಸ್.ಆರ್. ಪರುತಗಾಲೆ ಸ್ವಾಗತಿಸಿದರು. ಡಿ.ಬಿ. ಚಾಳಕೆ ನಿರೂಪಿಸಿದರು. ಡಿ.ಎಸ್. ಐನಾಪುರೆ ವಂದಿಸಿದರು.