ಲೋಕದರ್ಶನ ವರದಿ
ದಲಿತ, ಸುವರ್ಣಿಯರ ನಡುವೆ ಮಾರಾಮಾರಿ; ಅಟ್ರಾಸಿಟಿ ಪ್ರಕರಣ ದಾಖಲು
ಸಂಬರಗಿ, 02; ಗುಂಡೆವಾಡಿ ಗ್ರಾಮದಲ್ಲಿ ದಲಿತ ಹಾಗೂ ಸುವರ್ಣಿಯರ ನಡುವೆ ಮಾರ್ಚ 29 ರಂದು ನಡೆದ ಮಾರಾಮಾರಿಯಲ್ಲಿ ಇಬ್ಬರು ದಲಿತರು ಗಾಯಗೊಂಡಿದ್ದರು, ದಲಿತರು ಸುವರ್ಣಿಯರು ಸೇರಿ ಕ್ರಾಸ್ ಕಂಪ್ಲೆಂಟ್ ಹಾಗೂ ದಲಿತರು ಸುವರ್ಣಿಯರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಮಾರ್ಚ 29ರಂದು ರಾತ್ರಿ ವೇಳೆ ಗುಂಡೆವಾಡಿ ಗ್ರಾಮದಲ್ಲಿ ತಾಯಿಬಾಯಿ ದೇವರ ಜಾತ್ರೆಯ ನಿಮಿತ್ಯ ಊಟದ ಅವಧಿಯಲ್ಲಿ ಅವಾಚ್ಯ ಶಬ್ದಗಳಿಂದ ಜಾತಿಯ ನಿಂದನೆ ಮಾಡಿದ್ದಾನೆ ಅದರಲ್ಲಿ ಮಾರಾಮಾರಿ ಆಯಿತು, ರಾಹುಲ ಮನೋಜ ಕಾಂಬಳೆ ಹಾಗೂ ದೇವೆಂದ್ರ ಸುರೇಶ ಕಾಂಬಳೆ ಇನ್ನೀತರು ಗಾಯಗೊಂಡಿದ್ದಾರೆ ಈ ಮಾಹಿತಿ ತಿಳಿದ ನಂತರ ಸ್ಥಳಕ್ಕೆ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಬಸವರಾಜ ಯಾದವಾಡ ಇವರು ಭೇಟಿ ನೀಡಿ ಪರೀಶೀಲಣೆ ಮಾಡಿ ಆಗಿರುವ ಘಟನೆಯ ಕುರಿತು ಮೇಲಾಧಿಕಾಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.