ಟಿಪ್ಪರ್ ಹರಿದು ಪೌರಕಾರ್ಮಿಕ ಮಹಿಳೆ ಸಾವು
Civil servant dies after tipper overturns
ಬೆಳಗಾವಿ 28: ಬೆಳಗಾವಿ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಮಹಿಳೆ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗಾವಿ- ಖಾನಾಪುರ ರಸ್ತೆಯಲ್ಲಿ ನಡೆದಿದೆ. ಅವಕ್ಕಾ ಕೋಲ್ಕಾರ್ (50) ಮೃತ ಪೌರಕಾರ್ಮಿಕ ಮಹಿಳೆ ಎಂದು ಗುರುತಿಸಲಾಗಿದೆ. ಇಂದು ಬೆಳ್ಳಂ ಬೆಳಗ್ಗೆ ನಗರವನ್ನು ಶುಚಿಗೊಳಿಸುತ್ತಿದ್ದ ವೇಳೆ ಬೆಳಗಾವಿ ನಗರದಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಅವಕ್ಕಾಗೆ ಅಪ್ಪಳಿಸಿ ಹೋಗಿದೆ.
ಇನ್ನು ಘಟನೆ ವೇಳೆ ಮಾತನಾಡಿದ ಮಾಜಿ ಉಪಮೇಯರ್ ವಾಣಿ ಜೋಶಿ, ಬೆಳಗಾವಿ ಪಾಲಿಕೆಯ ಪೌರಕಾರ್ಮಿಕೆ ಅವಕ್ಕಾಗಿ ಟಿಪ್ಪರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತ ಮಾಡಿ ಪರಾರಿಯಾದ ವಾಹನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.
ಪಾಲಿಕೆ ಪರಿಸರ ಅಭಿಯಂತ ಹನುಮಂತ ಕಲಾದಗಿ ಮಾತನಾಡಿ, ಪೌರಕಾರ್ಮಿಕೆ ಅವಕ್ಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರಕಾರದಿಂದ ಸಿಗುವ ಎಲ್ಲ ಸೌಲಭ್ಯ ಅವರಿಗೆ ಕೊಡಲಾಗುವುದು. ಅಲ್ಲದೆ ಅವರ ಅಂತ್ಯಸಂಸ್ಕಾರಕ್ಕೆ ಪಾಲಿಕೆಯಿಂದ ಆರ್ಥಿಕ ಸಹಾಯ ಮಾಡಲಾಗುವುದು. ರಸ್ತೆ ಅಪಘಾತದಲ್ಲಿ ಬಲಿಯಾಗಿರುವುದು ಇದು ಎರಡನೇ ಪೌರಕಾರ್ಮಿಕರು ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 