ಚಂದನವನದ ತಾರೆಯರ ಕ್ರಿಸ್ಮಸ್‍

ಬೆಂಗಳೂರು, ಡಿ 25 ದೇಶ ವಿದೇಶಗಳಲ್ಲಿ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದ್ದು, ಸ್ಯಾಂಡಲ್‍ವುಡ್ ತಾರೆಯರೂ, ಸಹ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.  ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್‍, ನಟ ಅನಿರುದ್ಧ, ನಟಿ ಅಮೂಲ್ಯ ಸಾಮಾಜಿಕಜಾಲತಾಣದ ಮೂಲಕ ಕ್ರೈಸ್ತ ಬಾಂಧವರಿಗೆ ಶುಭಾಶಯ ಕೋರಿದ್ದಾರೆ. ಇನ್ನು ನಟಿ, ಸಂಜನಾ ಗಲ್ರಾನಿ ಇಂದಿರಾನಗರದ ಜೋನಸ್ ರೆಸ್ಟೋಬಾರ್‍ನಲ್ಲಿ ಅನಾಥ ಮಕ್ಕಳ ಜತೆ ಕ್ರಿಸ್ಮಸ್ ಆಚರಿಸಿದ್ದಾರೆ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಫಸ್ಟ ಲುಕ್ ಮೋಷನ್ ಮೋಸ್ಟರ್ ಯೂಟ್ಯೂಬ್‍ ನಲ್ಲಿ ಬಿಡುಗಡೆಯಾಗಿದ್ದು, ಹಲವು ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗಿದ್ದಾರೆ.