ಎಲ್ಲೆಡೆ ಕ್ರಿಸ್ಮಸ್ ಸಂಭ್ರಮ: ಚರ್ಚಗಳಲ್ಲಿ ಸಂಪ್ರದಾಯಿಕ ವಿಧಿ ವಿಧಾನ
ಕಾರವಾರ : ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕ್ರಿಸ್ಮಸ್ನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಯೇಸುಕ್ರಿಸ್ತನ ಜನ್ಮದಿನದ ನಿಮಿತ್ತ ಚರ್ಚಗಳಲ್ಲಿ ಪ್ರಾರ್ಥನೆಗಳು ನಡೆದವು. ಮಂಗಳವಾರ ರಾತ್ರಿಯಿಂದಲೇ ಚರ್ಚಗಳಲ್ಲಿ ಸಂಪ್ರದಾಯಿಕ ವಿಧಿ ವಿಧಾನಗಳು ನಡೆದವು. ಯೇಸುವನ್ನು ಸ್ವಾಗತಿಸುವ ಆಚರಣೆಗಳು ನಡೆದವು. ಕುರಿಗಳ ಕೊಟ್ಟಿಗೆಯಲ್ಲಿ ಜನಿಸಿದ ದೈವೀ ಮಗುವನ್ನು ಭಕ್ತಿ ಶ್ರದ್ಧೆಗಳಿಂದ ಬರಮಾಡಿಕೊಳ್ಳಲಾಯಿತು. ಜಗತ್ತಿನ ಮೇಲೆ ಬೆಳಕು ಚೆಲ್ಲಲು ಹಾಗೂ ಮನುಷ್ಯರನ್ನು ಅಂಧತ್ವದಿಂದ ಬೆಳಕಿನ ಕಡೆಗೆ ಕರೆದೊಯ್ದ ಯೇಸುವನ್ನು ಕ್ರೈಸ್ತ ಸಮುದಾಯ ಶ್ರದ್ಧೆಯಿಂದ ನೆನೆಯಿತು. ಪ್ರೀತಿ ಮತ್ತು ಕರುಣೆಯ ರೂಪವೇ ಆಗಿದ್ದ ಯೇಸುಕ್ರಿಸ್ತ ಜಗತ್ತನ್ನು ಮುನ್ನೆಡೆಸುತ್ತಿದ್ದಾನೆ ಎಂಬ ಬಲವಾದ ನಂಬಿಕೆಯನ್ನು ವಿಶ್ವ ಸಮುದಾಯ ನಂಬಿದ್ದು, ಅದರ ದ್ಯೋತಕವಾಗಿ ಕ್ರಿಸ್ಮಸ್ ಆಚರಣೆಗೆ ಮಹತ್ವ ಇದೆ. ಅದು ಕಾರವಾರದ ಪ್ರತಿ ಚರ್ಚಗಳಲ್ಲೂ ಪ್ರಾರ್ಥನೆಯ ಮೂಲಕ ಕಂಡು ಬಂತು. ಕ್ರೈಸ್ತರ ಮನೆಮನೆಗಳಲ್ಲಿ ಭಕ್ತಿಯಿಂದ ಯೇಸುವನ್ನು ಸ್ಮರಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು. ಸಾಂತಕ್ರೋಸ್ ವೇಷಧಾರಿಗಳು ಕಳೆದೊಂದು ವಾರದಿಂದ ಜಿಂಗಲ್ ಬೆಲ್ ಭಾರಿಸುತ್ತಾ ಬೀದಿಗಳಲ್ಲಿ ಸಂಚರಿಸಿ ಯೇಸುವಿನ ಆಗಮನದ ಸುಳಿವು ನೀಡಿದ್ದರು.
ಅದಕ್ಕಾಗಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದರು. ಬುಧುವಾರ ಇಡೀ ದಿನ ಕ್ರೈಸ್ತರು ತಮ್ಮ ಬಂಧುಗಳಿಗೆ ಹಾಗೂ ಸುತ್ತಮುತ್ತಲ ಸ್ನೇಹಿತರ ಮನೆಗಳಿಗೆ ಕೇಕ್ ಹಾಗೂ ಸಿಹಿ ನೀಡಿ ಕ್ರಿಸ್ಮಸ್ ಆಚರಿಸಿದರು. ಕ್ರಿಸ್ಮಸ್ ಪ್ರಯುಕ್ತ ಹಲವು ಕಡೆ ಸಂಗೀತ ಪ್ರಾರ್ಥನೆಗಳು ಬುಧುವಾರ ರಾತ್ರಿ ಸಹ ನಡೆಯಲಿದ್ದು, ಎಲ್ಲೆಡೆ ಕ್ರಿಸ್ಮಸ್ ಸಡಗರ ತುಂಬಿಕೊಂಡಿದೆ. ನಗರದ ಕೆಲ ಹೋಟೆಲ್ಗಳು ಸಹ ಕ್ರಿಸ್ಮಸ್ ಪ್ರಯುಕ್ತ ದೀಪಾಲಂಕಾರ ಮಾಡಿದ್ದು, ಹೋಟೆಲ್ ಬಾಗಿಲ ಬಳಿ ಸಂತಕ್ರೋಸ್ನನ್ನು ನಿಲ್ಲಿಸಿ ಸ್ವಾಗತಿಸಿವೆ.
ಹಲವು ಕಡೆ ಚರ್ಚಗಳನ್ನು ಹಾಗೂ ಆವರಣವನ್ನು ದೀಪಗಳಿಂದ, ಕ್ರಿಸ್ಮಸ್ ಟ್ರೀಗಳಿಂದ ಅಲಂಕರಿಸಲಾಗಿದೆ. ಕ್ರೈಸ್ತ ಬಂಧುಗಳು ಎಲ್ಲೆಡೆ ವಿಶ್ವ ಶಾಂತಿ ಮತ್ತು ಮನುಷ್ಯರಲ್ಲಿ ಪ್ರೀತಿ ಕರುಣೆ ಹೆಚ್ಚಲಿ ಎಂದು ಪ್ರಾಥರ್ಿಸಿದರು. ಯೇಸು ಕ್ರಿಸ್ತನ ಸಂದೇಶಗಳನ್ನು ಸಾರಿದರು. ಪವಿತ್ರ ಬೈಬಲ್ ಪಠಣವನ್ನು ಚರ್ಚಗಳಲ್ಲಿ ಮಾಡಲಾಯಿತು .
ಮನೆ ಮನೆಯಲ್ಲಿ ಕ್ರಿಸ್ಮಸ್ ಸಡಗರ
ಕಾರವಾರ : ಯೇಸು ಕ್ರಿಸ್ತ ಹುಟ್ಟಿದ ದಿನವನ್ನು ಕಾರವಾರದ ಕ್ರೈಸ್ತ ಬಾಂಧವರು ಮನೆಮನೆಗಳಲ್ಲಿ ಆಚರಿಸಿದರು. ಕ್ರೈಸ್ತ ಗಾಸ್ಪೆಲ್ ಪ್ರಕಾರ ಯೇಸು ಕ್ರಿಸ್ತ ಮೇರಿ ಮತ್ತು ಜೋಸೆಫ್ ಅವರ ಮಗನಾಗಿ ಇಸ್ರೇಲ್ನ ಬೆತ್ಲೆಹೆಮ್ ನಲ್ಲಿ ಜನಿಸಿದ. ಜುಡಾಯಿಸಮ್ (ಯಹೂದಿ ಧರ್ಮ) ಪ್ರಕಾರ ದೇತವದೂತನಾಗಿ ಯೇಸು ಜನಿಸಿದ ಎಂಬ ನಂಬಿಕೆಯಿದೆ. ಮೆಸ್ಸಾಯ ಯೇಸುಕ್ರಿಸ್ತನನ್ನು ಅಂದಿನಿಂದ ಕ್ರಿಶ್ಚಿಯನ್ನರು ದೇವಮಾನವನ ರೂಪದಲ್ಲಿ ಆರಾಧಿಸುತ್ತಾ ಬಂದಿದ್ದಾರೆ. ಗ್ರೀಕ್ ಲಿಪಿಯಲ್ಲಿ ಯೇಸುಕ್ರಿಸ್ತನ ಹೆಸರಿನ ಮೊದಲಿನ ಅಕ್ಷರ ಎಕ್ಸ ನಂತೆ ಕಾಣುವುದರಿಂದ ಎಕ್ಸ ಮಸ್ ಎಂತಲೂ, ಕ್ರಿಸ್ಮಸ್ ಎಂತಲೂ ಬರೆಯುವುದು ರೂಢಿ ಮತ್ತು ಸಂಪ್ರದಾಯ. ಕ್ರಿಸ್ಮಸ್ ಸಂಭ್ರಮವನ್ನು ವಾರದಿಂದ ಆಚರಿಸುತ್ತಾ, ಕಿಸ್ತ ಜನ್ಮದಿನವನ್ನು ಸಂಭ್ರಮದಿ ಆಚರಿಸಿದ ಕ್ಷಣಕ್ಕೆ ಕಾರವಾರ ಸಹ ಸಾಕ್ಷಿಯಾಯಿತು. ಕ್ರಿಸ್ಮಸ್ ಸಂಭ್ರಮದಲ್ಲಿ ಬಾಂಡಿಶಿಟ್ಟಾದ ಜೂಡ್ ಫನರ್ಾಂಡೀಸ್, ಪೀಟರ್ ಗುಡಿನ್ಹೋ, ಅಂಟೋನಿ ಗುಡಿನ್ಹೋ,ಸಲ್ವಾಡೋರ್ ಗುಡಿನ್ಹೊ, ಆಗ್ನೇಲ್, ಫ್ರಾನ್ಸಿಸ್, ಎಸ್ಪಾರೆನ್ಸ, ಕುಶಿ ಫನರ್ಾಂಡೀಸ್ ಭಾಗಿಗಳಾಗಿದ್ದರು.