ಬೆಂಗಳೂರಿನಲ್ಲಿ ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ಎನ್ ಸಿಸಿ ಕೆಡೆಟ್ ಗಳ ಆಯ್ಕೆ

ಬೆಂಗಳೂರು, ಫೆ 5 :   ದೇಶದ ಪ್ರತಿಷ್ಠಿತ ಮೌಂಟ್ ಎವರೆಸ್ಟ್ ಚಾರಣದ ಸವಾಲು ಎದುರಿಸಲು ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯದ ಕೆಡೆಟ್ ಗಳ ಪಟ್ಟಿಯನ್ನು  ಮಂಗಳವಾರ ಅಂತಿಮಗೊಳಿಸಲಾಯಿತು. 

ಕರ್ನಾಟಕ, ಗೋವಾ, ಕೇರಳ ಮತ್ತು ಲಕ್ಷದ್ವೀಪದ ಕೆಡೆಟ್ ಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 

ಫೆ. 2ರಿಂದ 4 ರವರೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಓಟ, ಹಗ್ಗದ ನಡಿಗೆ ಸೇರಿದಂತೆ ದೈಹಿಕ ಹಾಗೂ ಮಾನಸಿಕ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇಶಾದ್ಯಂತ ಆಯ್ಕೆ ಪ್ರಕ್ರಿಯೆಗಳು ನಡೆಯಲಿದ್ದು, 20 ಕೆಡೆಟ್ ಗಳು ಮೌಂಟ್ ಎವರೆಸ್ಟ್ ಶಿಖರವನ್ನೇರುವ ಸಾಹಸದಲ್ಲಿ ಪಾಲ್ಗೊಳ್ಳಲಿದ್ದಾರೆ.