ಚಿತ್ರದುರ್ಗ: ಪಂಚಾಯತ ರಾಜ್ ಅಧಿಕಾರಿಗಳ ವಾರ್ಷಿಕ ಸಭೆ ಯಶಸ್ವಿ
Chitradurga: Annual meeting of Panchayat Raj officers a success
ಚಿತ್ರದುರ್ಗ: ಪಂಚಾಯತ ರಾಜ್ ಅಧಿಕಾರಿಗಳ ವಾರ್ಷಿಕ ಸಭೆ ಯಶಸ್ವಿ
ಗದಗ 29: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪಂಚಾಯತ ರಾಜ್ ವಿಭಾಗದ ಅಧಿಕಾರಿಗಳು ಹಾಗೂ ನೌಕರರ ಸಂಘದ 2025-26ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಮಹಾಸಭೆಯು ಇತ್ತಿಚಿಗೆ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷರಾದ ಬಸವರಾಜ್ ಹೆಚ್ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ರಾಜ್ಯಾಧ್ಯಕ್ಷರಾದ ಬಸವರಾಜ್ ಹೆಚ್, ಸಹಾಯಕ ನಿರ್ದೇಶಕರು (ಆಡಳಿತ), ಇವರು ಮಾತನಾಡಿ “ಸಾಧಿಸುವ ಛಲ, ತಾಳ್ಮೆ ಮತ್ತು ಪರಸ್ಪರ ನಂಬಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮ ಸಂಘದ ಯಶಸ್ಸಿಗೆ ಇದು ಅತ್ಯುತ್ತಮ ಉದಾಹರಣೆ. ಈಗಾಗಲೇ ಸಾಧಿಸಿರುವುದು ಬಹಳಷ್ಟಿದ್ದರೆ, ಸಾಧಿಸಬೇಕಿರುವುದು ಇನ್ನೂ ಬೆಟ್ಟದಷ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ನೌಕರರ ಸಲಹೆ ಮತ್ತು ಸಹಕಾರವು ಈ ದಿಶೆಯಲ್ಲಿ ಅತ್ಯಗತ್ಯ” ಎಂದು ಹೇಳಿದರು. “ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಶೇ.75 ಕ್ಕೂ ಹೆಚ್ಚು ಲಿಪಿಕ ಹುದ್ದೆಗಳು ಖಾಲಿಯಿದ್ದರೂ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ವಿಳಂಬವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಲಿಯಿರುವ ಸಾವಿರಾರು ಹುದ್ದೆಗಳನ್ನು ಜರೂರಾಗಿ ಭರ್ತಿ ಮಾಡಲು ಸರ್ಕಾರದ ಗಮನವನ್ನು ಸೆಳೆಯಲಾಗುವುದು” ಎಂದು ಭರವಸೆ ನೀಡಿದರು. “ವಿವಿಧ ಸರ್ಕಾರಿ ನೌಕರರ ಜೇಷ್ಠತೆ, ಮುಂಬಡ್ತಿ, ಹುದ್ದೆಗಳ ಉನ್ನತೀಕರಣ ಮತ್ತು ಮುಂಬಡ್ತಿಗೆ ನಿಗದಿಪಡಿಸಿರುವ ಅರ್ಹತಾ ಅವಧಿಯಲ್ಲಿ ಆಗಿರುವ ತಾರತಮ್ಯ ವನ್ನು ಹೋಗಲಾಡಿಸಲು ಸಂಘದ ಹೋರಾಟವು ಅಛಲವಾಗಿದ್ದು, ಸರ್ಕಾರದ ವಿಶ್ವಾಸವನ್ನು ಪಡೆದು ತಾರತಮ್ಯವನ್ನು ಸರಿಪಡಿಸಲಾಗುವುದು” ಎಂದು ದೃಢವಾಗಿ ತಿಳಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ದೇವರಾಜ್ ಸಿ. ಸಜ್ಜನಶೆಟ್ಟರ್, ವ್ಯವಸ್ಥಾಪಕರು, ಪ್ರಾಸ್ತಾವಿಕ ಭಾಷಣದಲ್ಲಿ, ಸಂಘದ ಅಧ್ಯಕ್ಷರಾದ ಬಸವರಾಜ್ ಹೆಚ್ ಅವರ ಮಾರ್ಗದರ್ಶನದಲ್ಲಿ 15-20 ವರ್ಷಗಳಿಂದ ಪದೋನ್ನತಿಯಿಲ್ಲದೇ ಸೊರಗಿದ್ದ ನೂರಾರು ನೌಕರರಿಗೆ 2020 ರಲ್ಲಿ ರಚಿತವಾದ ವೃಂದ ಮತ್ತು ನೇಮಕಾತಿ ನಿಯಮಗಳ ಮೂಲಕ ಪದೋನ್ನತಿಯ ದಾರಿ ತೆರೆದಿದ್ದನ್ನು ಶ್ಲಾಘಿಸಿದರು. ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಬಿ ವೃಂದದ ಪತ್ರಾಂಕಿತ ಹುದ್ದೆಗಳ ಸೃಜನೆಯ ಜೊತೆಗೆ, 35 ವರ್ಷಗಳಿಂದ ಲಿಪಿಕ ವರ್ಗದ ನೌಕರರಿಗೆ ಪದೋನ್ನತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸಂಘದ ಹೋರಾಟ ಫಲಿಸಿದೆ ಎಂದು ತಿಳಿಸಿದರು. ಸಂಘದ ಸಾಧನೆಗಳು: ಸಂಘದ ನಿರಂತರ ಹೋರಾಟದ ಫಲವಾಗಿ, 2020 ರಲ್ಲಿ ರಚಿತವಾದ ವೃಂದ ಮತ್ತು ನೇಮಕಾತಿ ನಿಯಮಗಳ ಮೂಲಕ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಸರ್ಕಾರಿ ನೌಕರರಿಗೆ ಪದೋನ್ನತಿಯ ದಾರಿ ಸುಗಮವಾಯಿತು. ಸಂಘದ ಅಧ್ಯಕ್ಷರ ಮತ್ತು ತಂಡದ ತಂತ್ರಗಾರಿಕೆಯನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದರು. ಒಂದೇ ಇಲಾಖೆಯಲ್ಲಿ ಮೂರು ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿದ್ದು, ಒಂದು ಇಲಾಖೆ ಒಂದು ವೃಂದ ಮತ್ತು ನೇಮಕಾತಿ ನಿಯಮಗಳು ಎಂಬ ಕುರಿತು ಸರ್ಕಾರದ ಗಮನ ಸೆಳೆದು ಈ ದಿಸೆಯಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 