ಪತ್ರಕರ್ತರ ರಾಜ್ಯ ಮಟ್ಟದ ದತ್ತಿನಿಧಿ ಪ್ರಶಸ್ತಿಗೆ ಚಿರಂಜೀವಿ ಆಯ್ಕೆ
ರಾಣೇಬೆನ್ನೂರ 1 : ಮಾ 1ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ರಾಜ್ಯ ಮಟ್ಟದ ಈ ವರ್ಷದ ಮೂಡಣ ದತ್ತಿನಿಧಿಯ ಪ್ರಥಮ ಪ್ರಶಸ್ತಿಗೆ ಸ್ಥಳೀಯ ಹಿರಿಯ ಪತ್ರಕರ್ತ ಎಂ. ಚಿರಂಜೀವಿ ಅವರು ಆಯ್ಕೆಯಾಗಿದ್ದಾರೆ. ಪತ್ರಿಕಾರಂಗದಲ್ಲಿನ ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ಈ ದತ್ತಿನಿಧಿ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ. ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರರಾಗಿ ಸುಮಾರು 36 ವರ್ಷಗಳಿಗೂ ಅಧಿಕ ಕಾಲ ಚಿರಂಜೀವಿಯವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ, ಜಿಲ್ಲಾ ಸಂಘದ ಸಮಿತಿಯ ಸದಸ್ಯರಾಗಿ ಹಾಗೂ ರಾಣೆಬೆನ್ನೂರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಚಿರಂಜೀವಿಯವರು ಸೇವೆ ಸಲ್ಲಿಸಿದ್ದಾರೆ. ಮಾರ್ಚ್ 9 ರಂದು ಕೊಪ್ಪಳದಲ್ಲಿ ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ ಚಿರಂಜೀವಿಯವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.